ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ

ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ

ಚಿತ್ರ

ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ

==============================

ನಗುವು ಸದಾ ನೋವಿನ ಜೊತೆ ಜೊತೆಯಾಗಿಯೆಇರುತ್ತದೆ

ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ

ನಮಗೆ ಕಾಣಿಸದು

 

ಮದುವಣಗಿತ್ತಿಯ ನಗು ಸುತ್ತಲ ಸಂಭ್ರಮ ವರನ ವೈಭವ

ಎಲ್ಲವೂ ಮೆಟ್ಟಿ ನಿಂತಿರುತ್ತದೆ

ಛತ್ರದ ಹೊರಗೆ ಚಪ್ಪರದ ಕೆಳಗೆ ಕಣ್ಣಲ್ಲಿ ನೀರು ತುಂಬಿ ನಿಂತ

ಹುಡುಗಿಯ ಅಪ್ಪನ ದುಖಃವನ್ನು

 

ಮೂರು ಹೊತ್ತಿನ ಊಟ ಮುಗಿಸಿ ಸುಖದ ನಿದ್ರೆಯ

ಡೊಗರು ಹೊಟ್ಟೆಯ ಗೊರಕೆಯಲ್ಲಿ

ನಮಗೆ ಕಾಣಿಸುವದಿಲ್ಲ ಬೆಳೆದ ರೈತನ ಶ್ರಮದ ಬೆವರು

ಅಳುವ ಕೂಸಿನ ಹಸಿವಿನ ಆಕ್ರಂದನ

 

ಕ್ರಿಕೇಟ್ ಆಟದಲ್ಲಿ ಗೆದ್ದ ಸಂಭ್ರಮ ಗೆಲುವಿನ ಹೂಂಕಾರ

ಎಲ್ಲ ಮೆರೆತಗಳಲ್ಲಿ ಕೇಳುವದಿಲ್ಲ

ಸೋತ ದೇಶದ ಮೌನ ಅಪಮಾನಗಳ ತಿರಸ್ಕಾರಗಳ

ಮತ್ತೆ ಗೆಲ್ಲುವ ಛಲದ ದ್ವನಿ

 

ಯುದ್ದದಲ್ಲಿ ಗೆದ್ದ ಸಂತೋಷ ಉನ್ಮಾದಗಳ ಸಂಭ್ರಮಗಳು

ಕಾಲಿನಲ್ಲಿ ಮೆಟ್ಟಿ ನಿಲ್ಲುತ್ತವೆ

ಯುದ್ದದಲ್ಲಿ ಸೋತ ದೇಶದ ಅಪಮಾನ ನೋವು ಮೌನಗಳ

ಸಾವಿನ ನಿಟ್ಟುಸಿರುಗಳ

 

ಪ್ರಪಂಚದ ಎಲ್ಲ ಸಂತೋಷ ಸಂಭ್ರಮ ಸುಖಗಳು ಒಲವಿನ ದ್ವನಿಗಳು

ಹಾಗೆ

ಒಳಗೊಂಡಿರುತ್ತವೆ

ಯಾವುದೋ ಯಾರದೋ ನೋವು ದುಖಃ ದುಮ್ಮಾನಗಳ

ಬಡತನದ ಕರ್ಕಶ ದ್ವನಿಗಳ.

 

ನಗುವು ಸದಾ ನೋವಿನ ಜೊತೆ ಜೊತೆಯಾಗಿಯೆ ಇರುತ್ತದೆ

ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ

ನಮಗೆ ಕಾಣಿಸದು

 

ಚಿತ್ರ ಮೂಲ : http://amritham99.files.wordpress.com/2011/10/roses-thorns5b15d.jpg

 

Rating
No votes yet

Comments

Submitted by nageshamysore Sat, 11/16/2013 - 20:59

ಪಾರ್ಥಾ ಸಾರ್, ಶ್ರೀಧರರು ಎಷ್ಟೆ ಅದ್ವೈತವೆನ್ನಲಿ, ಈ ಕವನದಲ್ಲಿ ಮಾತ್ರ ಎಲ್ಲವೂ ದ್ವೈತ ಸಿದ್ದಾಂತ!  (ಗುಲಾಬಿ- ಮುಳ್ಳು, ಸುಖ-ದುಃಖ, ಸೋಲು-ಗೆಲ್ಲುವು, ನೆರಳು-ಬೆಳಕು ಹೀಗೆ... :-)

Submitted by partha1059 Sat, 11/16/2013 - 22:19

In reply to by nageshamysore

ನಾಗೇಶರೆ ಭಾವ ದ್ವೈತ ರೂಪದಲ್ಲಿದ್ದರೂ,
ಒಂದು ಮತ್ತೊಂದರಳಗೆ ಅಡಗಿ ಹೊರಗೆ ಕಾಣುವಾಗ
ಶ್ರೀದರರ ಅಧ್ವೈತವೆ ಆಗಿದೆ
ದುಖಃ ವು ಸುಖದೊಳಗೆ, ಅಳುವು ನಗುವೊಳಗೆ, ಸೋಲು ಗೆಲುವಿನೊಳಗೆ ನೆರಳು ಬೆಳಕಿನೊಳಗೆ ಒಂದಾಗಿ ಕಾಣುತ್ತಿದೆ
ಮತ್ತೆ ಶ್ರೀಧರ ಅಧ್ವೈತವೆ !

Submitted by nageshamysore Sun, 11/17/2013 - 06:59

In reply to by ಗಣೇಶ

ಒಟ್ಟಾರೆ ಶ್ರೀಧರರ 'ಭಾಷ್ಯದ' ಭಾಷೆಯಲ್ಲಿ ಸಂಭಾಷಣೆ ನಡೆಯುತ್ತಿರುವುದರಿಂದ, ತಮ್ಮ ಪಾಠದ ಸಾರ ಸರಿಯಾಗಿ ಇಳಿಯುತ್ತಿದೆಯೊ ಇಲ್ಲವೊ ಎಂದು ಪರಿಶೀಲಿಸಲು ಶ್ರೀಧರರಿಗೊಂದಷ್ಟು ಮಾಹಿತಿ ಸಿಗುವಂತಾಗಲಿ ಅಂತ :-)
.
ಹಾಗೆಯೆ ಸ್ವಲ್ಪ ನಾರದ ಉವಾಚ (= ತಲೆಹರಟೆ)
ಪ್ರತಿಕ್ರಿಯೆಯಲ್ಲಿ ಎಲ್ಲಾ ದ್ವೈತಗಳು ಪರಿಹಾರವಾಗಿ ಅದ್ವೈತದತ್ತ ಸಮಷ್ಟಿ ರೂಪಾಗಿ ಬರುತಿವೆ , ಹೀಗಾಗಿ:
.
ದ್ವೈತವೆಂದರೂ ಅಷ್ಟೆ, ಅದ್ವೈತವೆಂದರೂ ಅಷ್ಟೆ
ಬ್ರಹ್ಮತ್ವಕ್ಕೇರಿಸಲು ದಾರಿ, ಬಸ್ಸು-ರೈಲು-ಫ್ಲೈಟೆ
ಮೊದಲಾಗೊ ತಡವಾಗೊ, ಸೇರಲೆ ತಡಬಡಿಕೆ
ಗಮ್ಯ ಸೇರಾಮೇಲೆ, ಮಾಯವಾಗೊ ಚಡಪಡಿಕೆ ||
.
ಧನ್ಯವಾದಗಳೊಂದಿಗೆ 
-ನಾಗೇಶ ಮೈಸೂರು