ಕರಗಿ ಹೋಯ್ತು

ಕರಗಿ ಹೋಯ್ತು

ಚಿತ್ರ

ಕರಗಿ ಹೋಯ್ತು 

===========

out ಆಗಿ ಹಿಂದೆ ಹೊರಟಾಗಲೆಲ್ಲ 
ಮತ್ತೆ crease ಗೆ ಬರುವನೆಂಬ 
ಭ್ರಮೆಯ ಭಾವ 
ಕರಗಿ ಹೋಯ್ತು 
ಶಾಶ್ವತವಾಗಿ !

 

 

 

ಚಿತ್ರಮೂಲ :http://www.sampada.net/files/2008-04-10T143239Z_01_NOOTR_RTRMDNP_2_India...

Rating
No votes yet

Comments

Submitted by makara Sat, 11/16/2013 - 17:12

ಆಟಕ್ಕೆ ಹಿಂದುರುಗಲಾಗದಿದ್ದರೇನಂತೆ ಈಗ ಶಾಶ್ವತವಾದ ಭಾರತ ರತ್ನ ಮುಡಿಗೇರಲಿರುವಾಗ, ಅದೆಲ್ಲಾ ಗೌಣವಲ್ಲವೇ?

Submitted by swara kamath Sat, 11/16/2013 - 20:04

ಪಾರ್ಥ ಅವರೆ ನಮಸ್ಕಾರ,
ಅರ್ಥಗರ್ಭಿತ ಹಾಗೂ ಸಂದರ್ಭೋಚಿತ ಚುಟುಕು ಕವನ .ಸುಂದರವಾಗಿದೆ.
ವಂದನೆಗಳು..............ರಮೇಶ ಕಾಮತ್

Submitted by H A Patil Sat, 11/16/2013 - 20:26

ಪಾರ್ಥ ಸಾರಥಿ ಯವರಿಗೆ ವಂದನೆಗಳು
' ಕರಗಿ ಹೋಯ್ತು' ಅನೇಕ ಸಾಧ್ಯತೆಗಳ ಒಂದು ಅಸಾಧಾರಣ ರೂಪಕ. ಋತುವರಳಿ ಋತುವುರುಳಿ ಕಾಲ ಸಂದರೂ ಪ್ರಕೃತಿ ಎಂದೂ ದಣಿದಿಲ್ಲ. ಆಕೆ ಎಷ್ಟೆಲ್ಲ ಆಟಗಳನ್ನು ಆಟಗಾರರನ್ನು ನೋಡಿಲ್ಲ. ಬ್ರಾಡ್ ಮನ್, ನೀಲ್ ಹಾರ್ವೆ, ಸೋಬರ್ಸ್, ರಿಚರ್ಡ್ಸ್ ಎಂತೆಂತಹ ಆಟಗಾರರು ಸೋತು ತೆರೆ ಮರೆಗೆ ಸರಿದು ಹೋಗಲಿಲ್ಲ, ನಾನೇ ಶ್ರೇಷ್ಟ ನನ್ನ ಬಿಟ್ಟರೆ ಇನ್ನಿಲ್ಲ ಎಂಬ ಹಮ್ಮು ಬಿಮ್ಮಿನ ಆಟಗಾರರೂ ಗೋಣು ಚೆಲ್ಲಿ ಹೋಗಿದ್ದಾರೆ, ಮೈದಾನಕ್ಕೆ ಅರ್ಜುನನಷ್ಟೆ ಏಕಲವ್ಯ ಮತ್ತು ಕರ್ಣರೂ ಸಹ ಮುಖ್ಯ. ಅರ್ಜುನನಿಗೆ ಸನ್ನಿವೇಶಗಳು ಅಮುಕೂಲಕರವಾಗಿ ಬಂದವು, ರಾಜಕುವರ, ಗುರು ದ್ರೋಣರ ಕೃಪಾಶಿರ್ವಾದ ಹೆಚ್ಚಿನ ಪ್ರಚಾರ ಪಡೆದ ಅಷ್ಟೆ ಅಲ್ಲವೆ? ರಣಜೀತ್ ಸಿಂಹ್ ಜಿ ತನ್ನ ಕೊನೆಯ ಕ್ರಿಕೆಟ್ ಪಂದ್ಯವನ್ನು ಲಾರ್ಡ್ಸ ಮೈದಾನದಲ್ಲಿ ಆಡಿದಾಗ ಲಂಡನ್ನಿನ ಖ್ಯಾತ ಕ್ರೀಡಾ ವಿಮರ್ಶಕನೊಬ್ಬ ವಿಮರ್ಶಕನೊಬ್ಬ ಹೀಗೆ ಬರೆಯುತ್ತಾನೆ " ಲಾರ್ಡ್ಸ ಅಂಗಣದಲ್ಲಿ ಮತ್ತೆ ಋತು ಬದಲಿದಂತೆ ಹುಲ್ಲು ಚಿಗುರುತ್ತಲೆ ಹೋಗುತ್ತದೆ ಆದರೆ ರಣಜೀತ್ ಸಿಂಹಜಿಯಂತಹ ಆಟಗಾರ ಋತುಮಾನಕ್ಕೊಬ್ಬ ಸಿಗಲಾರ. ಆತನ ಸೆಂಚುರಿಗಳ, ಪೇರು ಹಾಕಿದ ರನ್್ ಗಳ ಲೆಖ್ಖವಿಲ್ಲ, ಆದರೂ ರಣಜೀತ್ ಸಿಂಹಜಿ ಒಬ್ಬ ಸಾರ್ವ ಕಾಲಿಕ ಶ್ರೇಷ್ಟ ಆಟಗಾರ, ನಿಮ್ಮ ಚಿತ್ರ ರೂಪಕ ಇದನ್ನೆಲ್ಲ ಜ್ಞಾಪಿಸಿತು, ಧನ್ಯವಾದಗಳು.

Submitted by partha1059 Sat, 11/16/2013 - 20:33

In reply to by H A Patil

ತಮಗೆ ಹಳೆಯದನ್ನೆಲ ನೆನಪಿಸಲು ಈ ಮೂರು ಸಾಲಿನ ಚುಟುಕ ಕಾರಣವಾಗಿದ್ದು ಸಂತಸ
.
ನಿಜ ಒಬ್ಬ ಸಚಿನ್ ರೈಟೈರ್ಡ್ ಆಗಿರಬಹುದು,
ಬ್ಯಾಟ್ ಹಿಡಿದು ಒಳಗೆ ಬರಲು
ಹಲವು ಸಚಿನ್, ಗಂಗೂಲಿ , ಶ್ರೀಕಾಂತ್ , ವಿಶ್ವನಾಥರು ಕಾಯುತ್ತಿದ್ದಾರೆ ತಮ್ಮ ಸರದಿಗಾಗಿ
:-)