ಭಾರತಾಂಬೆಯ ತೇರ ಎಳೆಯೋಣ ಬನ್ನಿ
ಕಲಾಂ ಜಿ ನಿಮಗೊಂದು ಸಲಾಮ್
ಜನರ ಕಷ್ಟ ತಪ್ಪಿಸಿ
ಸೋಮಾರಿಯಾಗಿಸಲು
ಅದೆಷ್ಟೊಂದು ಯೋಜನೆಗಳು!
ಇರಲು ಸೂರು
ಉಣಲು ಪಿಂಚಣಿ ನಾನೂರು
ಜೊತೆಗೆ ರೂಪಾಯಿಗೊಂದು ಕೆ.ಜಿ.ಅಕ್ಕಿ
ಮದುವೆಯಾಗಲು ತಾಳಿಭಾಗ್ಯ
ಮಕ್ಕಳ ಹೆರಲು ಹೆರಿಗೆ ಭಾಗ್ಯ
ಹೆತ್ತ ಮಕ್ಕಳಿಗೆ ಶಾಲೆಯಲೇ ಊಟ
ಇನ್ನೂ ಏನೇನು ಕೊಡುವರೋ ನಮ್ಮ ನಾಯಕರು!
ಇನ್ನೆಲ್ಲಿ ಕಷ್ಟ?
ಇನ್ನೆಲ್ಲಿ ಯಶಸ್ಸು?
ಇನ್ನೆಲ್ಲಿ ಆನಂದ?
ಸೋಮಾರಿಗಳ ಕಟ್ಟೆ
ಕಟ್ಟುತ್ತಿರುವ ನಮ್ಮ ನಾಯಕರುಗಳು!!
ಸ್ವಾಭಿಮಾನವ ಹೊಸಕಿ ಹಾಕಿ
ಚೈತನ್ಯವ ಚಿಗರಲು ಬಿಡದೆ
ಹಂಗಿನ ಬದುಕ ಕಲಿಸುತ್ತಿರುವ
ನಮ್ಮ ನಾಯಕರಿರುವಾಗ
ಎಲ್ಲಿ ಕಷ್ಟ? ಎಲ್ಲಿ ಆನಂದ? ಎಲ್ಲಿ ಯಶಸ್ಸು?
ಕಲಿಸ ಬನ್ನಿ ಕಲಾಮ್ ಜಿ
ಸ್ವಾಭಿಮಾನದ ಪಾಠವನ್ನು
ಚೈತನ್ಯದ ಅರಿವನ್ನು
ತನಗಿರುವ ತೋಳ್ಬಲವನ್ನು!
ದಾರಿ ತಪ್ಪಿದ ನಾಯಕರಿಗೆ ಹೇಳ ಬನ್ನಿ ಪಾಠವನ್ನು
ಜೊತೆಯಲ್ಲಿ ನಾವು ಬರುವೆವು
ಈ ದೇಶದ 60 ಕೋಟಿ ಯುವಕರು ಬರುವರು
ಬನ್ನಿ ಕಲಾಮ್ ಜಿ ಸ್ವಾಭಿಮಾನೀ ದೇಶವ ಕಟ್ಟೋಣ ಬನ್ನಿ
ನಿಮ್ಮ ನಾಯಕತ್ವದಲಿ
ಯುವ ಪಡೆಯ ಶಕ್ತಿಯ ದರ್ಶನ ವಾಗಲಿ
ಕೊಳಕು ಚಿಂತನೆಗಳು ದೂರವಾಗಲಿ
ಮಲಗಿರುವ ಜನರ ಏಳಿಸ ಬನ್ನಿ
ಭಾರತಾಂಬೆಯ ತೇರ ಎಳೆಯೋಣ ಬನ್ನಿ||
Comments
ಉ: ಭಾರತಾಂಬೆಯ ತೇರ ಎಳೆಯೋಣ ಬನ್ನಿ
ಹರಿಹರಪುರ ಶ್ರೀಧರ ರವರಿಗೆ ವಂದನೆಗಳು
' ಭಾರತಾಂಬೆಯ ತೇರ ತೇಳೆಯೋಣ ಬನ್ನಿ ' ಒಂದು ಉತ್ತಮ ಸಕಾಲಿಕ ಕವನ, ಅಬ್ದುಲ್ ಕಲಾಂರವರ ಸಾರ್ವಕಾ;ಲಿಕ ಉಪಸ್ಥಿತಿಯನ್ನು ಎತ್ತಿ ತೋರುವ ಕವನ. ಅನೇಕ ಸಾಧಾರಣ ವ್ಯಕ್ತಿತ್ವದ ವ್ಯಹಕ್ತಿಗಳೆ ಎರಡು ಮೂರು ಅವಧಿಗಳಿಗೆ ರಾಷ್ಟ್ರದ ಉನ್ನತ ಹುದ್ದೆಯನ್ನು ಅಲಂಕರಿ ಸಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ, ಆದರೆ ಕಲಾಂ ರಂತಹ ಉನ್ನತ ವ್ಯಕ್ತಿತ್ವದ ಜನರನ್ನು ಆ ಹುದ್ದಯಲ್ಲಿ ಮುಂದುವರಿಸು ವಂತಹ ಧೀಶಕ್ತಿಯ ವಿಚಾರಧಾರೆಯ ವ್ಯಕ್ತಿತ್ವಗಳು ನಮ್ಮ ವರ್ತಮಾನದ ರಾಜಕೀಯ ರಂಗದಲ್ಲಿ ಇಲ್ಲ, ಹೀಗಾಗಿ ನಮ್ಮ ನಮ್ಮಿಮ್ಮಂತೆ ಜನ ಸಾಮಾನ್ಯರಂತೆ ಕಲಾಂ ರಂತಹ ಉನ್ನತ ವ್ಯಕ್ತಿತ್ವಗಳು ತೇರು ಎಳೆಯಬೇಕಷ್ಟೆ, ಏನೆ ಇರಲಿ ಉತ್ತಮ ಆಶಯದ ಕವನ ಧನ್ಯವಾದಗಳು.