ಮಣಿಕರ್ಣಿಕಾ, ಶುಭಾಶಯಗಳು ನಿನಗೆ

ಮಣಿಕರ್ಣಿಕಾ, ಶುಭಾಶಯಗಳು ನಿನಗೆ

೧೯-ನವೆಂಬರ್-೧೮೨೮ ರಲ್ಲಿ ಜನಿಸಿದ ಮಹಾ ಶೂರ ಮಗು ಮಣಿಕರ್ಣಿಕಾ,,, ನಿನಗಿಂದು ತುಂಬು ೧೮೫ ವರ್ಷಗಳು, ನಿನ್ನ ಹುಟ್ಟು ಹಬ್ಬಕ್ಕೆ ಹೃದಯ ಪೂರ್ವಕ ಶುಭಾಶಯಗಳು, 
     

        ಮಣಿಕರ್ಣಿಕಾ ಬೇರಾರು ಅಲ್ಲ ಧೈರ್ಯ ಶೌರ್ಯದ ಪ್ರತೀಕಕವಾದ "ಝಾನ್ಸಿ ರಾಣಿ ಲಕ್ಷ್ಮಿಬಾಯಿ", ಆಕೆ ಜೀವಿಸಿದ್ದು ಕೆಲವೇ ದಿನಗಳಾದರೂ, ಆ ದಿನಗಳಲ್ಲೇ ತುಂಬು ಬದುಕನ್ನು ನಡೆಸಿದ ವೀರ ಮಹಿಳೆ ಆಕೆ, ೧೩ ವರ್ಷ ಪ್ರಾಯದವಳಿರುವಾಗಲೇ, ೪೨ ವರ್ಷದ ಬಾಲಗಂಗದರ ರಾವ್ ನ ಪತ್ನಿಯಾಗಿ ತನ್ನ ಬದುಕನ್ನು ಸ್ವೀಕರಿಸಿದವಳು, ಮತ್ತೆ ೨೧ ವರ್ಷ ವಯಸ್ಸಾಗುವ ವೇಳೆಗೆ ಒಂದು ಮಗುವಿನ ತಾಯಿಯಾಗಿ, ತಾಯಿಯಾಗುವ ಸಂತೋಷವನ್ನು ಸವಿಯುವ ಹಾದಿಯಲ್ಲೇ ತನ್ನ ಕರುಳ ಬಳ್ಳಿಯನ್ನು ಕಳೆದುಕೊಂದವಳು, ಮಗನನ್ನು ಕಳೆದುಕೊಂಡ ನೋವಿನ ದಟ್ಟ ಕತ್ತಲೆಯಲ್ಲಿರುವಾಗಲೇ, ಸುಮಾರು ೨೫ ವರ್ಷ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ವಿಧವಾ ಪಟ್ಟ ಕಟ್ಟಿಕೊಂಡವಳು,

       ಇಷ್ಟೆಲ್ಲಾ ನೋವು ಮನದಲ್ಲಿದ್ದರು, ಒಂದಿನಿತು ಅಳುಕದ ಆಕೆ, ಗಂಡನ ನಂತರ ಇಡೀ ಝಾನ್ಸಿಯ ರಾಜ್ಯಭಾರದ ಹೊಣೆಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು, ನೋವನ್ನೆಲ್ಲ ಅವುಡುಗಚ್ಚಿ ಸಹಿಸಿಕೊಂಡು, ಎಲ್ಲರೂ ಅಚ್ಚರಿ ಪಡುವಂತೆ ರಾಜ್ಯಭಾರ ನಡೆಸಿದ ಧೀರೆ, ಆಕೆಯ ದಿಟ್ಟತನಕ್ಕೆ ಸಾಟಿಯಾಗಿ ಮಾಡಲು ನನ್ನ ಬಳಿ ಯಾವ ಪದಗಳೂ ಇಲ್ಲಾ,
   

"ಮೇರಿ ಝಾನ್ಸಿ ನಹಿ ದೂಂಗಿ" ಎಂಬಾ ಘೋಷಣೆಯೊಂದಿಗೆ ಬ್ರಿಟೀಷರೊಂದಿಗೆ ಹೋರಾಡಿದ ಈ ವೀರ ಮಹಿಳೆಯನ್ನು ನೆನೆಸಿಕೊಳ್ಳುವುದೇ ಒಂದು ರೋಮಾಂಚಕ ಅನುಭವ, ತನ್ನ ಸೈನ್ಯ ಕಡಿಮೆ ಸಂಖ್ಯೆಯಲ್ಲಿದ್ದರು ಕೂಡ ಬ್ರೀಟಿಷರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದ ಆಕೆಯ ದಿಟ್ಟತನದ ಹೋರಾಟಕ್ಕೆ ನಾವು ಎಷ್ಟು ಋಣಿಯಾದರು ಸಾಲದು, 

           ಅಮ್ಮ,,,,,
ನಿನ್ನ ಮನಸಿನ ಕೆಚ್ಚು ನಮಗಿಂದು ಬೇಕು,,,
ನಿನ್ನ ಮಡಿಲಿನ ತುಂಬು ಪ್ರೀತಿಯ ಸಿಂಚನ ನಮಗೆ ಬೇಕು,,,
ನಿನ್ನ ತೋಳ್ಬಲದ ಅಪ್ಪುಗೆಯಲ್ಲಿ ನಾವು ಕರಗಬೇಕು,,,
ನಿನ್ನ ಎದೆಯಾಳದಲ್ಲಿದ್ದ ರಾಷ್ಟ್ರ ಪ್ರೇಮ ನಮಗೆ ಬೇಕು,,,

ಬೆನ್ನಿಗೆ ದಾಮೊದರನನ್ನು ಕಟ್ಟಿಕೊಂಡು,
ಪರಕೀಯರ ನೀರಿಳಿಸಿದ ಮಹಾ ತಾಯೇ,,,,
ನಿನ್ನ ಧ್ವನಿ ನಮ್ಮೆಲ್ಲರಲ್ಲಿ ಮಾರ್ಧನಿಸಬೇಕು,,,,

ಹುಟ್ಟಿ ಬರುವೆಯ ತಾಯಿ ??? ಇನ್ನೊಮ್ಮೆ ನಮಗಾಗಿ,,,,,
ನಮ್ಮನ್ನು ಕೊಳ್ಳೆ ಹೊಡೆಯುತ್ತಿರುವ ನಮ್ಮೊಳಗೇ ಇರುವ ದುಷ್ಟರ ಸಂಹಾರಕ್ಕಾಗಿ,,,
ಪ್ರತಿ ಹೆಣ್ಣಿನಲ್ಲೂ ನಿನ್ನ ಶಕ್ತಿಯಾ ಬಿಂಬವನಿಟ್ಟು,,,,,,

-- ನಿನ್ನ ಹುಟ್ಟಿಗಿದೋ, ನಮ್ಮೆಲ್ಲರ ಶುಭಾಷಯ,,,,,