ಒಲವೆಂಬ ಉರಿ

ಒಲವೆಂಬ ಉರಿ

ಚಿತ್ರ

ಅವನಲ್ಲಿ ನನ್ನೊಲುಮೆ ಜನಕೆ ತಿಳಿದೀತೆಂದು
ಗೆಳತಿಯರನೂ ಇಂದು ನಂಬಲೊಲ್ಲೆ
ಅವನತ್ತ ಒಂದೊಳ್ಳೆ ನೋಟ ಬೀರುವುದನೂ
ಈ ಬಗೆಯು ತಡೆದಿಹುದು ಲಜ್ಜೆಯಲ್ಲೆ
ಮನದೊಳಗಿನಿನಿತಷ್ಟು ಸುಳಿವು ಸಿಕ್ಕರೆ ಲೋಕ
ನಿಪುಣವದು ಚುಚ್ಚಲಿಕೆ ಮಾತುಗಳಲೆ
ಇನ್ನಾರ ಮೊರೆಹೊಗಲಿ ಹೇಳೆ ನೀನಮ್ಮಯ್ಯ
ಒಲವೆಂಬ ಉರಿಯೆದೆಯ ಸುಟ್ಟಿಹುದೆಲೆ!

ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ - ೬೬):

ಆಸ್ತಾಂ ವಿಶ್ವಸನಂ ಸಖೀಷು ವಿದಿತಾಭಿಪ್ರಾಯ ಸಾರೇ ಜನೇ
ತತ್ರಾಪ್ಯರ್ಪಯಿತುಂ ದೃಶಂ ಸುರಚಿತಾಂ ಶಕ್ನೋಮಿ ನ ವ್ರೀಡಯಾ
ಲೋಕೋಪ್ಯೇಷ ಪರೋಪಹಾಸಚತುರಃ ಸೂಕ್ಷ್ಮೇಂಗಿತಜ್ಞೋಪ್ಯಲಮ್
ಮಾತಃ ಕಂ ಶರಣಂ ವ್ರಜಾಮಿ ಹೃದಯೇ ಜೀರ್ಣೋನುರಾಗಾನಲಃ

-ಹಂಸಾನಂದಿ

ಚಿತ್ರ ಕೃಪೆ : http://www.exoticindiaart.com/product/paintings/virahini-radha-rani-on-b...

Rating
No votes yet