ನಿರೀಕ್ಷೆ By Sumalatha Nayak on Sat, 11/23/2013 - 16:32 ಕವನ ಹಸಿ ಮನಸ ಕಸಿಗೊಳಿಸಿ ಹುಸಿ ಕನಸಿಗೆ ಹಸೆ ಹಾಸಿ ಪಸೆ ಆರದಂತೆ ಉಸಿರ ಬಿಗಿಹಿಡಿದು ಹೊಂಗಿರಣ ಹೊಮ್ಮುವುದೆಂಬ ಹಂಬಲದಲಿ ಕಾದ ಕ್ಷಣಗಳಿವು ಕವಲುದಾರಿಯಲಿ ಶಾಪ ಮುಂದುವರೆಯುವುದೊ ಮುಸಿ ನಗುವಿಗೆ ಕಾರಣದೊರೆಯುವುದೊ ಚಿತ್ರ್ Log in or register to post comments