ದೇಶ ಮುಂದಕ್ ಹೋಯ್ತಾ ಇತ್ತು,,,,,

Submitted by naveengkn on Sat, 11/30/2013 - 12:42

ಪೇಟೆ ಧಾರಣೆ ಏರುತ್ತಿದೆ,,
ನೀರು ವಾಣಿಜ್ಯವಾಗುತ್ತಿದೆ,

ನಾಯಕರು ಭಾಷಣ ಮಾಡುತ್ತಿದ್ದಾರೆ,,
ದೇಶ ಮುಂದುವರೆಯುತ್ತಿದೆ,,,

ಮಗು ಭಾವಿಸಿದೆ,,,
ಹಾಲು ಎಂದರೆ ಪ್ಯಾಕೆಟ್ನಲ್ಲಿ ಬರುವುದು,, 
ಮೈದಾನ ಅಂದರೆ ನಮ್ಮ ಮನೆಯ ಬಾಲ್ಕನಿ,
ಕಾಡು ಎಂದರೆ ನ್ಯಾಷನಲ್ ಜಿಯಾಗ್ರಫಿ,
ಮಳೆ ಅಂದರೆ,, ಚರಂಡಿಗಳೆಲ್ಲ ಕ್ಲೀನ್ ಆಗೋ ದಿನ,,
ಆಟ ಅಂದರೆ, ಕಂಪ್ಯೂಟರ್,
ದೇಶ ಅಂದ್ರೆ ಅಮೇರಿಕಾ,,
ಭಾಷೆ ಅಂದ್ರೆ,,(ನಾಚ್ಕೆ ಆಗತ್ತೆ ಹೇಳೋಕೆ)

ಅಜ್ಜಿ ಹೇಳ್ತಾ ಇದಾರೆ,,,
ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ,,
ಎಲ್ಲ ಕಾಲದ ಮಹಿಮೆ,, ಹ್ಹ ಹ್ಹ ,,,
ಮಗು ನಗ್ತಾ ಇದೆ,,,, ಅಜ್ಜಿ ನಿನ್ನ ಹಲ್ಲು ಉದುರಿಹೋಗಿದೆ,,,,

ನಮ್ಮೂರ್ನಾಗ್  ಕೆಂಪನಿಗೆ ಕುರಿ ಕಾಯಾಕ್,,,
ಆಗಲು ಐದು ರೂಪಾಯಿ,,
ಈಗಲು ಐದು ರೂಪಾಯಿ,,,,
ಹೊಟ್ಟೆ ತುಂಬಾ ಎಷ್ಟು ದಿನ ಉಂಡನೋ ,ಗೊತ್ತಿಲ್ಲ,,,
ರೇಡಿಯೋ ಹಿಡಿದು ದಿನ ಏನೇನೊ ಕೇಳ್ತಾನೆ,,,
ಎಷ್ಟೇ ಹಸಿದ್ರು ಯಾರ್ ಮನಿಲೂ ಕದ್ದೊನಲ್ಲ ಅಂವ,,,
ಮದ್ವೆ ಅರ್ಥ ಅವಂಗ್ ಗೊತ್ತಿಲ್ಲ,,,
ಹೆಂಡ್ತಿಗ್ ಒಂದ್ ದಿನ ಹೊಡೆದಂವ ಅಲ್ಲ,,,,
ಗೌಡ್ರ ತೋಟದ್ ಮೂಲೆ ಗುಡಿಸ್ಲು,,,
ಸುತ್ತಲು ಕುರಿ, ಮದ್ಯ ಅಂವ, ಜೊತೆಗ್ ಹೆಂಡ್ತಿ,,,
ರೊಟ್ಟಿ ತಟ್ಕೊಂಡ್, ಚಟ್ನಿ ಇಲ್ದೆ ತಿನ್ದ್ಕೊಂಡ್,,,,,,
ನಕ್ಕೊಂಡ್ ಅವ್ನೆ,,,

ಊರ್ನಾಗ್,,,ಅಜ್ಜಿ 
ಬ್ಯಾಸರ ಕಂಡ್ಲ ಕೆಂಪ, ನಿನ್ ಹೆಂಡ್ತಿನ್ ಸ್ವಲ್ಪ ಕಳುಸ್ಲ,,,
ಮಾತಾಡಕ್ ಯಾರು ಇಲ್ಲ,,,,
ಮಗನ್ ಮನೆಗೆ ಪ್ಯಾಟೆಗ್ ಹೋದ್ರೆ,
ಮಗ ಇದ್ರೂ ಇಲ್ಲ,,, ಬೊ ಬ್ಯಾಸರ ಕಣ್ಲ,,,
ಅದೇನೋ ಬೆಳಕ್ ಬತ್ತದಲ್ಲ,, ಅದ್ರಾಗೆ ಇತ್ತಾನೆ,
ಸೋಸೆನುವ ದುಡಿತವ್ಳೆ, ಮಾತಾಡಕ್ ಟೇಮ್ ಇಲ್ಲ,,,
ಸುಮ್ನೆ ಬಂದ್ ಬುಟ್ಟೆ,,,,,,

ಅದ್ಯಾಕ್ ಅಂಗ ಅಂದೀರ ಅವ್ವ,,,
ರೇಡಿಯೋ ಕೆಳಾಕಿಲ್ವ,,,
ದೇಶ ಕಾಯೋ ದಣಿಗಳ್ ಹೇಳವ್ರೆ,,
ದೇಶ ಮುಂದಕ್ ಹೋಯ್ತಾ ಐತಂತೆ,,,
ಮುಂದೆ ಹೋಗಕೆ, ಓದ್ಕಂಡ ನಮ್ಮ ಐಕ್ಳೇ ಅಂತೆ ಕಾರಣ,,

ಹೌದೇನ್ಲಾ ಕೆಂಪ,,
ನನಿಗ್ ಗೊತ್ತೇ ಆಗಕಿಲ್ಲ ಕಣ್ಲಾ,,,,
ಕಿವಿನೂ ಸರಿಯಾಗ್ ಕೇಳಾಕಿಲ್ಲ,,
ಏನೋ ನಮ್ಮ ಮಗ ಬೆಳಿತಾ ಅವ್ನೆ ಅಂಗರೆ,
ದೇವ್ರು ಕಣ್ ಬಿಡ್ತಾ ಅವ್ನೆ ಕಣ್ಲಾ,,,
ಒತ್ತಾರೆಯಿಂದಾ ಎದೆ ನೋವು ಕಣ್ಲಾ,,,
ಗಾಡಿ ಕಟ್ತೀಯ, ಅಸ್ಪತ್ರೆಗ್ ಹೊಗನಾ,,,

ಹೂಂ ಕಣ್ರವ್ವ,,,,

ಕೆಂಪನ್ ಗಾಡಿ ಮುಂದಕ್ಕ್ ಹೋಯ್ತಾ ಇತ್ತು,,,,
ಅಜ್ಜಿ ಪ್ರಾಣ ಮೇಲಕ್ ಹೋಯ್ತಾ ಇತ್ತು,,,
ದೇಶ ಮುಂದಕ್ ಹೋಯ್ತಾ ಇತ್ತು,,,,,

--ನವೀನ್ ಜೀ ಕೇ