ಆಮೆ ಮತ್ತು ಮೊಲ -ಒಂದು ನೀತಿ ಕಥೆ

ಆಮೆ ಮತ್ತು ಮೊಲ -ಒಂದು ನೀತಿ ಕಥೆ

ಆಮೆ ಮತ್ತು ಮೊಲದ ರನ್ನಿಂಗ್ ರೇಸ್ ಕಥೆಯನ್ನು ನಾವೆಲ್ಲರೂ ಬಾಲ್ಯದಲ್ಲಿ ಓದಿರುತ್ತೇವೆ. ಆಮೆಯು ಮೊಲವನ್ನು ಸೋಲಿಸಿ ಹೇಗೆ ಓಟದ ಸ್ಪರ್ದೆಯನ್ನು ಗೆದ್ದಿತು ಎಂದು ತಿಳಿದಿದ್ದೇವೆ. ಆದರೆ ನಾನು ಇತ್ತೀಚಿಗೆ ಇದೇ ಕಥೆಯನ್ನು ಬದಲಾದ ರೂಪದಲ್ಲಿ ಎರಡು ಪತ್ರಿಕೆಗಳಲ್ಲಿ ಓದಿದೆ. ಒಂದರಲ್ಲಿ, ಆಮೆಯು ಓಟದ ಮಾರ್ಗವನ್ನು ತಾನೆ ನಿರ್ಧರಿಸಿ, ನದಿಯು ಮಾರ್ಗದಲ್ಲಿ ಬರುವ ಹಾಗೆ ಮಾಡಿ, ನದಿಯನ್ನು ಈಜಿ ಪ್ರಥಮವಾಗಿ ತನ್ನ ಗುರಿಯನ್ನು ಮುಟ್ಟುತ್ತದೆ. ಮೊಲಕ್ಕೆ ಈಜಲು ಬರದೆ ಸೋತು ಹೋಗುತ್ತದೆ. ಮತ್ತೊಂದು ಕಥೆಯಲ್ಲಿ ಆಮೆಯು ಓಟದ ದಾರಿಯನ್ನು ತಪ್ಪು ದಾರಿಯಲ್ಲಿ ಬರೆದು ಮೊಲವು ಹೆಚ್ಚು ದೂರ ಓಡುವಂತೆ ಮಾಡಿ, ಮೊಲಕ್ಕಿಂತ ಮೊದಲೆ ತಾನು ಹತ್ತಿರದ ದಾರಿಯಲ್ಲಿ (ಅಡ್ಡದಾರಿ) ಓಡಿ ಗುರಿ ಮುಟ್ಟುತ್ತದೆ. ಹಿಂದಿನ ಕಥೆಯಲ್ಲಿ ಕಷ್ಟಪಟ್ಟವರಿಗೆ ಯಶಸ್ಸು ಖಂಡಿತ ಎಂಬ ನೀತಿ ಪಾಠವಿತ್ತು,ಹೊಸ ಕಥೆಯಲ್ಲಿ ಅಡ್ಡದಾರಿಯಲ್ಲಿ ಯಶಸ್ಸು ಗಳಿಸುವುದನ್ನು ಬೋಧಿಸಲಾಗಿದೆ. ಈ ರೀತಿ ಕಥೆಯಲ್ಲಿನ ನೀತಿಯನ್ನೇ ಬದಲಾಯಿಸಿದರೆ ಮೂಲ ಕಥೆಯ ಆಶಯಕ್ಕೆ ಧಕ್ಕೆ ತಂದಂತಾಗುವುದಲ್ಲವೆ ? ಮಕ್ಕಳಿಗೆ ಇದೇ ನೀತಿಯನ್ನೇ ನಾವು ಹೇಳುವುದು ?

Rating
Average: 3.7 (9 votes)

Comments