ಬ್ರಹ್ಮನಿಗೆ ಶಾಪ...ಸಿನಿಮಾದವ್ರಿಗೆ ವಿಘ್ನಗಳ ಕಾಟ...!

ಬ್ರಹ್ಮನಿಗೆ ಶಾಪ...ಸಿನಿಮಾದವ್ರಿಗೆ ವಿಘ್ನಗಳ ಕಾಟ...!

ಬ್ರಹ್ಮ...ಪರಬ್ರಹ್ಮ. ಈ ಬ್ರಹ್ಮನನ್ನ ದೇವರು ಎಂದು ಪೂಜಿಸೋದಿಲ್ಲ. ಬಹ್ಮನಿಗೆ ಪೂಜೇನೂ ಇಲ್ಲ. ಕಾರಣ, ಈತ ಈಶ್ವರನ ಶಾಪಗ್ರಸ್ತ ಬ್ರಹ್ಮ. ಈ ಬ್ರಹ್ಮ ನ ಹೆಸರಿನಲ್ಲಿ ಏನೇ ಮಾಡಿದ್ರು ಸಫಲ ಆಗೋದೇಯಿಲ್ಲ. ಈ ಹಿಂದೆ ಕನ್ನಡದಲ್ಲಿ ಬ್ರಹ್ಮ ಶೀರ್ಷಿಕೆಯ ಸಿನಿಮಾ ಅನೌನ್ಸ್ ಆಯಿತು. ಆದ್ರೆ, ಅದು ಶುರು ಆಗಲೇಯಿಲ್ಲ.  ಅದೇನ್​ ಅದೃಷ್ಠವೋ. ಉಪೇಂದ್ರ ಅಭಿನಯದ ಬ್ರಹ್ಮ ಚಿತ್ರ ಚಿತ್ರೀಕರಣ ಕಂಪ್ಲೀಟ್ ಮಾಡಿದೆ. ಕೊನೆಯ ದಿನ ಬಾಕಿ ಉಳಿದ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ.. ಇನ್ನೂ ಇಂಟ್ರಸ್ಟಿಂಗ್ ವಿಷ್ಯಯಿದೆ. ಬನ್ನಿ ನೋಡೋಣ...

 ಬ್ರಹ್ಮನ ಅವತಾರಕ್ಕೆ ಕನ್ನಡಿಗರು ಕಂಡಿತ ಥ್ರಿಲ್ಲ ಆಗಬೇಕು. ಹಾಗಿದೆ ಈ ಚಿತ್ರ ಬ್ರಹ್ಮನ ಆಗಮನ. ಪ್ರತಿ ಸೀನ್​ನಲ್ಲೂ ಬ್ರಹ್ಮ ದಿ ಅಲ್​ಟೀಮೇಟ್. ಅಷ್ಟೇ ರೋಮಾಂಚನಕಾರಿ. ಆದ್ರೆ, ಈತನ ಪ್ರತಿ ನಡೆ-ನುಡಿ ಮತ್ತು ಹಾವ-ಭಾವ. ಎಲ್ಲವೂ ಸೂಪರ್. ಡ್ಯೂಪರ್...

ಆದ್ರೆ, ಈ ಬ್ರಹ್ಮ ಸೃಷ್ಠಿ ಅಷ್ಟು ಸುಲಭವಾಗಿ ಆಗಿಲ್ಲ. ಆರಂಭದಿಂದ ಹಿಡಿದು, ಒಂದಲ್ಲ..ಒಂದು ವಿಘ್ನಗಳಾಗಿವೆ. ಜೀವ ಹೋಗ ಹಂತಕ್ಕೂ ಆ ವಿಘ್ನಗಳು ಎದುರಾಗಿವೆ.ಆದ್ರೆ, ಪ್ರಾಣಹಾನಿಗಳು ಆಗಿಲ್ಲ.  ಬದಲಿಗೆ ವಿಘ್ನಗಳು ವಿಜಿಟ್ ಕೊಟ್ಟು ಹೋಗಿವೆ. ಆ ಕ್ಷಣದ ಅನುಭವವನ್ನ ನಿರ್ದೇಶಕ ಆರ್.ಚಂದ್ರು ಎಳೆ..ಎಳೆಯಾಗಿ ಬಿಚ್ಚಿಡ್ತಾರೆ...

ಇದಕ್ಕೆ ಸಾಕ್ಷಿ ಎಂಬಂತೆ, ಕೊನೆ ದಿನದ ಶೂಟಿಂಗ್​ ವೇಳೆ ಸಣ್ಣ ತೊಂದರೇನೂ ಆಯಿತು. ಬಾಂಬ್​ ಬ್ಲಾಸ್ಟಿಂಗ್ ಸೀನ್​ ತೆಗೆಯುತ್ತಿತ್ತು ಚಿತ್ರ ತಂಡ. ಆದ್ರೆ, ಬ್ಲಾಸ್ಟಿಂಗ್​ ಆಗೋ ಹೊತ್ತಿಗೆ ಕ್ಯಾಮೆರಾ ಆಫ್​ ಆಯಿತು. ಮಾಧ್ಯಮದ ಕ್ಯಾಮೆರಾದಲ್ಲಿ ಸೆರೆಹಿಡಿದ್ದ ಅದೇ ದೃಶ್ಯವನ್ನ ನೋಡಿ ಖುಷಿಪಟ್ಟರು ಈ ಸಿನಿಮಾದವ್ರು. ಈ ಥರ ಹಲವು ವಿಘ್ನಗಳಾಗಿವೆ.. ಉಪ್ಪಿಗೂ ಇಂತಹ ಅನುಭವ ಗಮನಕ್ಕೆ ಬಂದಿವೆ. ಹಾಗಂತ ಅದರ ಬಗ್ಗೇನೆ ಹೆಚ್ಚು ಹೇಳದೇನೇ, ಸಿನಿಮಾ ಪೂರ್ತಿಯಾಗಿರೋ ಸಂತೋಷ ಹಂಚಿಕೊಂಡ್ರು ಉಪ್ಪಿ...

ಇನ್ನೂ ಒಂದು ಸಣ್ಣ ಅವಗಢವೂ  ನಡೆದು ಹೋಯಿತು. ಇದು ಕಾಕತಾಳಿಯವೋ, ಸ್ಟಂಟ್ಸ್ ಮಾಡೋವಾಗ ಸಹಜವಾಗಿ ಆಗುತ್ತದೆಯೋ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಕಾರ್​ ಜಂಪಿಂಗ್ ಸೀನ್​ ಕಂಪೋಜ್​ ಮಾಡಿದರು. ರಿಸ್ಕಿ ಸಾಹಸ ಮಾಡೋದ್ರಲ್ಲಿ ಸೈ ಎನಿಸಿಕೊಂಡ ಸ್ಟಂಟ್​ ಮ್ಯಾನ್ ಸುಭಾಸ್, ಎಲ್ಲ ಸೇಫ್ಟಿ ಇಟ್ಟುಕೊಂಡೇ ರೆಡಿಯಾಡಿದ್ರು. ದೂರದಿಂದ ಕಾರ್ ಸ್ಪೀಡ್ ಆಗಿ ಬಂತು. ಜಂಪ್​ ಕೂಡ ಆಯಿತು. ಮೂರು ಪಟ್ಲಿ ಕೂಡ ಹೊಡಿತು, ಅಂದು ಕೊಂಡಂತೆ. ಆದ್ರೆ, ಎಂದೂ ಹೆಚ್ಚು ಗಾಯಗೊಳ್ಳದ ಸುಭಾಸ್​ ಬಲಗಾಗಲಿ ಪಟ್ಟು ಬಿದ್ದಿತ್ತು. ನಡೆಯಲು ಆಗದೇ ಇರೋದಕ್ಕೆ ಸುಭಾಸ್ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟು ಹೋದ್ರು..

ಚಿತ್ರೀಕರಣವೇನೋ ಈಗ ಪೂರ್ಣಗೊಂಡಿದೆ. ರಿಲೀಸ್​ ಟೈಮ್​ನಲ್ಲೂ ಯಾವುದೇ ರೀತಿ ತೊಂದರೆ ಆಗದಿರಲಿ ಎಂದು ಪೂಜಿ ಮಾಡಿಸುತ್ತಿದೆ ಚಿತ್ರ ತಂಡ. ಅಸ್ಟ್ರಾಲಜರ್ ಸಲಹೆ ನೀಡಿದಂತೆ, ಬ್ರಹ್ಮನಿಗೆ ಶಾಪಕೊಟ್ಟ ಈಶ್ವರನ ಪೂಜೆಯನ್ನ ಮಾಡೋ ಪ್ಲಾನ್​ ಹಾಕಿಕೊಳ್ಳಲಾಗಿದೆ. ಅದರ ಬಗ್ಗೆ ನಿರ್ದೇಶಕ ಆರ್.ಚಂದ್ರು ವಿವರಣೆ ಕೊಟ್ಟರು..

ಆದ್ರೆ, ಇದೆಲ್ಲದರ ಹೊರತಾಗಿ ಚಿತ್ರ ಸೂಪರ್​ ಆಗಿ ಬಂದಿದೆ. ಈಗಾಗಲೇ ನೋಡಿರೋ ದೃಶ್ಯಗಳ ಮೇಕಿಂಗ್​​ನ್ನೇ ಗಮನಿಸಿದ್ರೇ, ಬ್ರಹ್ಮ ಚಿತ್ರ ಸ್ಟೈಲಿಶ್​ ಆಗಿದೆ ಅನಿಸುತ್ತದೆ. ತುಂಬಾ ದುಡ್ಡು ಕರ್ಚು ಆಗಿದೆ. ನಿರೀಕ್ಷೆನೂ ಹೆಚ್ಚುತ್ತಲೇ ಇದೆ. ಟ್ರೈಲರ್​ನ್ನ ನೋಡಿಯೇ ಬಾಲಿವುಡ್​​ನವ್ರು ಈಗಾಗಲೇ ಡಬ್ಬಿಂಗ್​ ರೈಟ್ಸು ತೆಗೆದುಕೊಂಡಿದ್ದಾರೆ. ತಮಿಳು ಹಾಗೂ ತೆಲುಗುವಿನಲ್ಲೂ ಬ್ರಹ್ಮ ಡಬ್ಬ ಆಗಲಿದೆ. ಉಳಿದದ್ದು ಬ್ರಹ್ಮನಿಗಾಗಿ ವೇಟಿಂಗ್. ಮಾಡ್ತಾಯಿರಿ...ಆಗಾಗ ಬಿಡೋ ಟ್ರೈಲರ್​ ಅಂಡ್ ಟೀಜರ್​ ನೋಡಿ ಎಂಜಾಯ್ ಮಾಡಿ..

-ರೇವನ್​.ಪಿ.ಜೇವೂರ್