ನನಗೆ ಅರ್ಥವಾಗುವದಿಲ್ಲ
ನನಗೆ ಅರ್ಥವಾಗುವದಿಲ್ಲ
ಬುದ್ದ ಗೌತಮರು ಎಂದೂ ನನಗರ್ಥವಾಗಲೆ ಇಲ್ಲ
ಗಾಂಧೀ ಜಯಪ್ರಕಾಶರ ತತ್ವಗಳು ಮೈಗೂಡಲಿಲ್ಲ
ಅಂಬೇಡ್ಕರ ಜಗಜೀವನರ ಕರೆಗಳು ನನಗೆ ಕೇಳಲಿಲ್ಲ
ಕಾರ್ಲ್ ಮಾರ್ಕ್ ಲೆನಿನ್ ಮಂಡೇಲ ಹೆಸರುಗಳೆಲ್ಲ
ಎಂದೂ ನನಗೆ ಪರಿಚಿತ ಎಂದು ಅನ್ನಿಸಲಿಲ್ಲ.
ಭಕ್ತಿ ವೈರಾಗ್ಯ ಶ್ರದ್ಧೆಗಳು ಹತ್ತಿರ ಸುಳಿಯಲಿಲ್ಲ
ಪ್ರಾಮಾಣಿಕನಾಗಿ ಹೇಳಿಬಿಡುವೆ ನನ್ನ ಮನದಲ್ಲಿರುವದನ್ನೆಲ್ಲ
ಬಡಭಾರತೀಯ ನಾನು
ನನಗೆ ಅರ್ಥವಾದ ತತ್ವ ಒಂದೇ
ನನ್ನ ಹಾಗು ನನ್ನನ್ನು ನೆಚ್ಚಿಕೊಂಡ
ಹೊಟ್ಟೆಗಳನ್ನು ತುಂಬಿಸಬೇಕೆಂದರೆ
ದಿನಕ್ಕೆ ಕಡಿಮೇ ಎಂದರು ಎಂಟು ಹತ್ತು ಗಂಟೆಗಳ
ಕಾಲ ದುಡಿಯದೇ ವಿದಿಯಿಲ್ಲ!
ಉಳಿದ ಯಾವ ತತ್ವಗಳು ನನ್ನ ಹೊಟ್ಟೆ ತುಂಬಿಸುವುದಿಲ್ಲ!
Rating
Comments
ಉ: ನನಗೆ ಅರ್ಥವಾಗುವದಿಲ್ಲ
ಪಾರ್ಥ ಸರ್.
ಅದಕ್ಕೇ ಸ್ವಾಮಿ ವಿವೇಕಾನಂದರು ಹೇಳಿದ್ದು, ಹಸಿದವನಿಗೆ ಆಧ್ಯಾತ್ಮ ಭೋದನೆಯನ್ನು ಮಾಡಬೇಡ. ಮೊದಲು ಅವನ ಹೊಟ್ಟೆಗೆ ಒಂದಿಷ್ಟು ಹಿಟ್ಟು ಹಾಕು. ಅವನು ತಿಂದು ಸಂತೃಪ್ತನಾದನಂತರ ಅವನಿಗೆ ಉಪದೇಶ ಮಾಡುವುದರ ಕುರಿತು ಆಲೋಚಿಸಬಹುದು ಎಂದು. ನಿಮ್ಮ ಕವನ ಈ ವಾಕ್ಯಗಳ ಪ್ರತಿಫಲನವಾಗಿದೆ.
In reply to ಉ: ನನಗೆ ಅರ್ಥವಾಗುವದಿಲ್ಲ by makara
ಉ: ನನಗೆ ಅರ್ಥವಾಗುವದಿಲ್ಲ
ದುರಂತ !!
----------
ಪ್ರಪಂಚದ ಎಲ್ಲ ತತ್ವ ವೇದಾಂತಗಳು ಅರ್ಥವಾಗಬೇಕಿದ್ದಲ್ಲಿ ಹೊಟ್ಟೆ ತುಂಬಿರಬೇಕು.
ಆದರೆ ದುರಂತವೆಂದರೆ ..
.
.
.
.
.
ಹೊಟ್ಟೆ ತುಂಬಿದ ನಂತರ ಯಾವುದೇ ತತ್ವ ವೇದಾಂತಗಳು ಅರ್ಥವಾಗುವದಿಲ್ಲ !
ಉ: ನನಗೆ ಅರ್ಥವಾಗುವದಿಲ್ಲ
ನಿಜ ಸಾರ್,ನಾವೆಲ್ಲಾ ಕೆಲಸ ಮಾಡುವುದು ಹೊಟ್ಟೆಗೋಸ್ಕರ,ಹೊಟ್ಟೆ ಮುಂದೆ ಎಲ್ಲ ಲೊಟ್ಟೆ.
In reply to ಉ: ನನಗೆ ಅರ್ಥವಾಗುವದಿಲ್ಲ by CHALAPATHI V
ಉ: ನನಗೆ ಅರ್ಥವಾಗುವದಿಲ್ಲ
ಕವನ ಚೆನ್ನಾಗಿದೆ ,
ಆದರೆ
ಹೊಟ್ಟೆಯೊಂದಕ್ಕೆ ಬಟ್ಟೆಯೊಂದಿದ್ದರೆ ಸಾಲದು
ತಟ್ಟೆಯೂ ಬೇಕು,
ತಟ್ಟೆಯೊಳಗೆ ಮೊಟ್ಟೆಯೂ ಬೇಕು.
ತುಂಬಿದೊಟ್ಟೆಯು ತಟ್ಟಿಬಯುಸುವುದೇ ವಿನ್ಹ
ತತ್ವಗಳನ್ನಲ್ಲಾ.
ಕೆಲವೊಂದು ಕೊಂಡಿಗಳುhttp://sampada.net/quote/42248
http://sampada.net/quote/42134
ಉ: ನನಗೆ ಅರ್ಥವಾಗುವದಿಲ್ಲ
ಪಾರ್ಥ ಸಾರಥಿ ಯವರಿಗೆ ವಂದನೆಗಳು
ನನಗೆ ಅರ್ಥವಾಗುವುದಿಲ್ಲ ನಿಮ್ಮ ಮನದ ಬಿಚ್ಚು ನುಡಿಗಳು, ಅವು ನಮಗೆ ಅರ್ಥವಾಗುತ್ತವೆ. ಬುದ್ಧ, ಗಾಂದಿ, ಗೌತಮ, ಜೆಪಿ ಮತ್ತು ಅಙಂಬೇಡ್ಕರ್ ಎಲ್ಲ ಮಹಾತ್ಮರೂ ಹೇಳಿದ್ದೆ ಮೂಲ ದುಡಿಮೆ ಎಂಬ ಮಂತ್ರವನ್ನು ನಂತರದಲ್ಲಿ ಉಳಿದೆಲ್ಲವು ಬರುತ್ತವೆ, ಮನುಷ್ಯ ಅಭಿವೃದ್ಧಿ ಮಂತ್ರವನ್ನು ಹೇಳುವ ರಚನೆ, ಧನ್ಯವಾದಗಳು.
ಉ: ನನಗೆ ಅರ್ಥವಾಗುವದಿಲ್ಲ
ಪಾರ್ಥಾ ಸಾರ್,
ಹೊಟ್ಟೆಗಿಲ್ಲದಾಗ ತತ್ವ ರುಚಿಸದು. ಹೊಟ್ಟೆ ತುಂಬಿದ್ದಾಗ ತತ್ವಕ್ಕಿಂತ 'ಅರ್ಥ' ಮುಖ್ಯವಾಗಿಬಿಡುವುದು. ಹೀಗಾಗಿ 'ಅರ್ಥದ' ಬೆನ್ನತ್ತಿ ಓಡುತ್ತ ತತ್ವಕ್ಕೆ ಬಿಡುವು ಇರುವುದಿಲ್ಲ, ಪ್ರಾಮುಖ್ಯತೆಯೂ ಇರುವುದಿಲ್ಲ :-)
ಉ: ನನಗೆ ಅರ್ಥವಾಗುವದಿಲ್ಲ
ಹೊಟ್ಟೆ ತುಂಬಿದ ಮೇಲೆ ತತ್ವಗಳ ಬಗ್ಗೆ " ತರ್ಕ " ( ಅದು ಸರಿ, ಇದು ತಪ್ಪು. ಅವರು ಸರಿ, ಇವರು ತಪ್ಪು ಇತ್ಯಾದಿ) ಶುರುವಾಗುತ್ತದೆ.....ಸತೀಶ್