ರಮಣಾಂಜಲಿ ಪುರಸ್ಕಾರಗಳು-೨೦೧೪

ರಮಣಾಂಜಲಿ ಪುರಸ್ಕಾರಗಳು-೨೦೧೪

ಸೂಚನೆ: ಇತ್ತೀಚೆಗೆ ಗೆಳೆಯ ಸುರೇಶ ಭಟ್ಟರು, ಈ ಕೆಳಗಿನ ಸ್ಪರ್ಧೆಯ ಮಾಹಿತಿಯನ್ನು ಕಳಿಸಿದ್ದರು. ಸಂಪದದಲ್ಲಿ ಪ್ರಕಟಿಸಿದರೆ ಆಸಕ್ತಿಯುಳ್ಖ ಸಂಪದಿಗರೂ ಭಾಗವಹಿಸಬಹುದೆಂಬ ಆಶಯದಿಂದ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. ಆಸಕ್ತಿಯಿರುವವರು ವಿವರಗಳಿಗೆ ಈ ಕೆಳಗೆ ನೋಡಿ.
.
_____________________________________________________________________________

"ರಮಣಾಂಜಲಿ ಪುರಸ್ಕಾರಗಳು-೨೦೧೪" - ಜಾಗತಿಕ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿರಿ,
ಬಹುಮಾನ ಗೆಲ್ಲಿರಿ!
_____________________________________________________________________________
.
ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್‌ ಎಂಬ ಲಾಭರಹಿತ ವಿದ್ಯಾ ಮತ್ತು ಸಂಸ್ಕೃತಿ
ಸಂಸ್ಥೆ ಭಾರತೀಯ ಸಂಸ್ಕೃತಿಗೆ ಕಳೆದ ಮೂರು ದಶಕಗಳಿಂದ ತನ್ನದೇ ಆದ  ಸೇವೆ
ಸಲ್ಲಿಸುತ್ತಾ ಬಂದಿದೆ. ಭಗವಾನ್ ರಮಣರ ಹಾಗೂ ಅವರ ಮೇಲಿನ ಗೀತೆಗಳನ್ನು ಹಾಡಲೆಂದೇ
ಪ್ರಾರಂಭವಾದ  "ರಮಣಾಂಜಲಿ" ಎಂಬ ಆರ್ಕೆಸ್ಟ್ರಾ ತಂಡ ಇದುವರೆಗೆ ೨೦೦೦ ಹಾಡುಗಳ
ಧ್ವನಿಮುದ್ರಣ ಮಾಡಿದೆ. ಈ ವರ್ಷ "ಅರುಣಾಚಲ - ಒಂದು ಅದ್ಭುತ ಪರ್ವತ" ಎಂಬ
ವಿಷಯಾಧಾರಿತ  "ರಮಣಾಂಜಲಿ ಪುರಸ್ಕಾರಗಳು-೨೦೧೪" ಜಾಗತಿಕ ಮಟ್ಟದ ಸ್ಪರ್ಧೆಯನ್ನು
ಆಯೋಜಿಸಿದೆ. ನೂರಕ್ಕೂ ಹೆಚ್ಚು ಪ್ರತಿಷ್ಟಿತ ಪುರಸ್ಕಾರಗಳು ಹಾಗೂ ಒಟ್ಟು ಐದು ಲಕ್ಷ
ರೂಪಾಯಿಗಳ ಮೊತ್ತದ ೫೦೦ಕ್ಕೂ ಹೆಚ್ಚು ಬಹುಮಾನಗಳು ನಿಮಗಾಗಿ ಕಾಯುತ್ತಿವೆ! ಎಲ್ಲಾ
ಪರಿಗಣಿತ ಸ್ಪರ್ಧಿಗಳಿಗೆ ಪ್ರಶಸ್ತಿಪತ್ರ ನೀಡಲಾಗುವುದು.
.
ಈ ಮೊದಲು ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್‌‌ನವರು ಈ ತರಹದ ಸ್ಪರ್ಧೆಗಳನ್ನು
ಸ್ಥಳೀಯ ಮಟ್ಟದಲ್ಲಿ ಏರ್ಪಡಿಸುತ್ತಿದ್ದರು. ಭಗವಾನ್ ಶ್ರೀ ರಮಣ ಮಹರ್ಷಿ ರಿಸರ್ಚ್
ಸೆಂಟರ್‌ನ ಜೊತೆಗೂಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಗಳನ್ನು
ನಡೆಸುತ್ತಿರುವುದು ಇದೇ ಮೊದಲು. Online ಮೂಲಕ ಸಲ್ಲಿಸಲಾದ ಎಲ್ಲಾ ಕಲಾಪ್ರತಿಭೆಗಳ
ತುಣುಕುಗಳನ್ನೂ ಒಂದು ತಿಂಗಳ ಕಾಲ ರಮಣ ಮಹರ್ಷಿ ಸೆಂಟರ್ ಅವರ ಅಂತರ್ಜಾಲತಾಣದಲ್ಲಿ
ಪ್ರಸಾರ (Webcast) ಮಾಡಲಾಗುತ್ತದೆ. ಇದಲ್ಲದೇ ಈ ಸ್ಪರ್ಧೆಗೆ ದಾಖಲಿಸಿ, ನೋಂದಾಯಿಸಿದ
ಎಲ್ಲಾ ಕಲಾ ತುಣುಕುಗಳನ್ನೂ ಸಾರ್ವಜನಿಕರಿಂದ ಜನವರಿ ೧, ೨೦೧೪ರಿಂದ ಜನಪ್ರಿಯ
ಮತದಾನಕ್ಕೆ ಒಳಪಡಿಸಲಾಗುತ್ತದೆ. ಇಷ್ಟೇ ಅಲ್ಲ, ವಿಜೇತ ಮತ್ತಿತರ ಉತ್ತಮ ಗುಣಮಟ್ಟದ
ನೋಂದಣಿಗಳನ್ನು "ಶ್ರೀ ಶಂಕರ" ದೂರದರ್ಶನದ ಧಾರಾವಾಹಿ ಕಾರ್ಯಕ್ರಮವೊಂದರಲ್ಲಿ
ಬಳಸಿಕೊಳ್ಳಲಾಗುವುದು. ನಿಮ್ಮ ಪ್ರತಿಭೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾದರ
ಪಡಿಸಲು ಇದಕ್ಕಿಂತ ದೊಡ್ಡ ಅವಕಾಶ ಬೇಕೆ?!
.
ಈ ಸಾಂಸ್ಕೃತಿಕ ಹಬ್ಬದಲ್ಲಿ ಕರ್ನಾಟಕ ಸಂಗೀತ, ಸಂಗೀತವಾದ್ಯಗಳು ಮತ್ತು ವಿವಿಧ
ಪ್ರಾಕಾರದ ನೃತ್ಯಗಳು, ಚಿತ್ರಕಲೆ, ಛಾಯಾಚಿತ್ರ, ಕಿರು ಚಿತ್ರ, ನಾಟಕ, ರಚನಾತ್ಮಕ
ಬರವಣಿಗೆ, ಕಥೆ ಮತ್ತು ರಮಣ ಭಜನೆಗಳ ವಾಚನ ಹೀಗೆ ತಮ್ಮಲ್ಲಿರುವ ಯಾವುದೇ ರೀತಿಯ
ಪ್ರತಿಭೆಯನ್ನು ಹೊರತರಲು ಎಲ್ಲಾ ವಯಸ್ಸಿನ ಪ್ರತಿಯೊಬ್ಬರಿಗೂ ಅವಕಾಶವಿದೆ. ಇದಲ್ಲದೇ
ಪ್ರತಿಭಾ ಪ್ರದರ್ಶನವನ್ನು ಕನ್ನಡ, ಸಂಸ್ಕೃತ, ತಮಿಳು, ತೆಲುಗು, ಮಲಯಾಳಮ್, ಹಿಂದಿ
ಗುಜರಾತಿ ಮತ್ತು ಆಂಗ್ಲ ಒಟ್ಟು ಎಂಟು ಭಾಷೆಗಳಲ್ಲಿ ಮಾಡಲು ಸಾಧ್ಯ.
.
"ನಿಮ್ಮ ಪ್ರತಿಭೆ-ನಮ್ಮ ಹಾಡು-ನಮ್ಮ ವಿಷಯ (Theme)"ಈ ಸ್ಪರ್ಧೆಯಲ್ಲಿ ಭಾಗವಹಿಸಲು
ಮತ್ತು ನಿಮ್ಮ ಕಲಾ ಕೌಶಲ್ಯದ ಧ್ವನಿ/ಕಿರುಚಿತ್ರದ ಸುರುಳಿಯನ್ನು ಸಲ್ಲಿಸಲು ಕೊನೆಯ
ದಿನಾಂಕ ೧೮ನೇ ಜನವರಿ ೨೦೧೪. ಸ್ಪರ್ಧೆ, ನಿಯಮ ಮತ್ತು ಬಹುಮಾನಗಳ ಬಗ್ಗೆ ಹೆಚ್ಚಿನ
ವಿವರಗಳಿಗೆ events.ramanacentre.com ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ ಮತ್ತು
ನಿಮ್ಮ ಅನುಮಾನ-ಪ್ರಶ್ನೆಗಳನ್ನು ದೂರವಾಣಿ (91-962 045 1311, ಬೆಳಿಗ್ಯೆ ೧೧ರಿಂದ
ಸಂಜೆ ೮ರವರೆಗೆ) ಅಥವಾ ಇ-ಅಂಚೆಯ (ra-info.ramanacentre.com) ಮೂಲಕ ಕೇಳಿ
ಬಗೆಹರಿಸಿಕೊಳ್ಳಿ.
.