ನಮ್ಮೊಂದಿಗೆ- ಮೆಟ್ರೋ ಅಳಿಲು.

ನಮ್ಮೊಂದಿಗೆ- ಮೆಟ್ರೋ ಅಳಿಲು.

ಚಿತ್ರ

ನಾನು ಹುಟ್ಟಿದ್ದು ಇವತ್ತಿನ ಈ ಮೆಟ್ರೋ ಪಟ್ಟಣದಲ್ಲಿ.

ನನ್ನ ಮುತ್ತಾತಂದಿರೂ ಇಲ್ಲಿಯವರೆ ಆದರೆ ಅಂದು ಇದು ಗೊಂಡಾರಣ್ಯ.

ಜರಿ ತೊರೆ ಜೀವ ಜಂಗುಲ.

ತಿಂದಸ್ಟೂ ಮುಗಿಯದ ಕಾಡ ಹಣ್ಣು

ಕುಡಿದಸ್ಟು ನೀರು ಎಲ್ಲೆಲ್ಲೂ ಹಸಿರು

ಅವೆಲ್ಲ ನನಗೆ ಕತೆ ಮಾತ್ರ

ನನ್ನ ಬಾಲ್ಯದಲ್ಲಿ ಕುಡಿಯಲು ನೀರಾದರು ಸಿಗುತಿತ್ತು.

ಸದ್ಯಕ್ಕೆ ನೀರು ಕಾಣದೆ ದಿನಗಳೆ ಆಗಿವೆ ನನ್ನ ಜೊತೆಗಾರರು ಬಾಯಾರಿ ಕಣ್ಣ ಮುಚ್ಚಿದರು.

ಮನೆ ಒಡತಿ ನಳವನ್ನ ಮರೆತು ಮುಚ್ಚದಿದ್ದರೆ ಬಾಯಿಗೆ ನೀರು.

ಅಂಗಡಿಯಲ್ಲಿ ಕಾಣುವ ಬಾಟಲ್ ನೀರಂತೂ ನಮ್ಮ ಹಗಲುಗನಸು.

ಸರ್ಕಾರ ಈ ಬಗ್ಗೆ ಚಿಂತನೆನಡೆಸಿ ನಮ್ಮಗಳ ಬದುಕನ್ನ ಉಳಿಸ ಬೇಕಾಗಿ ಇಲ್ಲಿ ನಮ್ಮ ವಿನಂತಿ.

ಕೊನೆಪಕ್ಷ ಮೆಟ್ರೋ ಜನ ಒಂದು ಬಟ್ಟಲು ನೀರನ್ನಾದರು ಹೊರಗಿಡಬಹುದೆಂದು ಹಾರೈಸುವ.

- ಅಳಿದುಳಿದ ಮೆಟ್ರೋ ಜೀವಿಗಳು.

 

ಚಿತ್ರಕೃಪೆ ಅಂತರ್ಜಾಲ

Rating
No votes yet