ಮನದ ಬುದ್ದ ಬಂಧನದಲ್ಲಿ

ಮನದ ಬುದ್ದ ಬಂಧನದಲ್ಲಿ

ಮನದ ಬುದ್ದ ಬಂಧನದಲ್ಲಿ
==============
ಜಗದಲ್ಲಿ ಬದ್ದರೆಷ್ಟೋ ತಿಳಿಯದು
ಬುದ್ದರಂತೂ ನೂರು ನೂರು ಸಾಲು 
ಕರೆಕೊಡುವ ಸಾಲು ಸಾಲು ನಾಯಕರು
ಅರ್ಥವಾದದ್ದೆಷ್ಟೋ ಜೀರ್ಣವಾದದ್ದೆಷ್ಟೋ
ಅಜೀರ್ಣವಾಗಿಯೆ ಉಳಿದ ಉಪದೇಶಗಳು!
ಅದಕ್ಕಾಗಿಯೆ 
ನನ್ನ ಮನದ ಬುದ್ದನನ್ನು 
ಸಾಸಿವೆ ಡಬ್ಬದಲ್ಲಿಯೆ ಹಾಕಿ
ತಿರುಗಿಸಿರುವೆ ಮುಚ್ಚಳವನ್ನು 
ಹೊರಗಿರುವ ಉಪದೇಶಗಳೆಲ್ಲ 
ಜೀರ್ಣವಾಗುವ ತನಕ ಹೊರಬರದಿರುವಂತೆ
ಹೊಸ ಉಪದೇಶ ಕೊಡದಂತೆ!

 

Rating
No votes yet

Comments

Submitted by nageshamysore Thu, 12/05/2013 - 05:42

ಪಾರ್ಥ ಸಾರ್, ಒಳಗಿಟ್ಟ ಬುದ್ಧ ಒಳಗೇ ಇನ್ನೂ ಪ್ರಬುದ್ಧನಾಗಿ ಶೀಘ್ರದಲ್ಲೆ ಹೊರಬರಲಿ - ಈ ಬಾರಿ ಕೇಳುವ ಬದಲು, ಹೇಳುವ ಸರದಿ. ಬೇರೆಯವರು ಜೀರ್ಣಿಸಿಕೊಳ್ಳಲಿ :-)

Submitted by lpitnal Thu, 12/05/2013 - 08:58

ಪ್ರಿಯ ಪಾರ್ಥರವರೇ, ಬುದ್ಧನನ್ನು ಬಳಸಿದ ಕವನ. ಸದ್ಭುದ್ಧ ಬುದ್ಧನ ಪ್ರಬುದ್ಧತೆಯ ಸಂದೇಶ, ದಾರ್ಶನಿಕತೆಗೆ ಬದ್ಧರಾಗಿ ಬದುಕುವವರು ಸಿಗಲಾರರು. ಮೈದುಂಬ ಪ್ರಕ್ಷುಬ್ಧತೆಯೇ ಆವಿಸಿಕೊಂಡಿರುವಾಗ ಬುದ್ಧನುಪದೇಶದ ಗಂಧದ ಸುಳಿವು ಹತ್ತಿರ ಸುಳಿಯುವದಾದರೂ ಹೇಗೆ, ಅಷ್ಡೇ ಅಲ್ಲ ಬುದ್ಧಿಪೂರ್ವಕವಾಗಿಯೂ ಅವನನ್ನು ಹೊರಗೆ ಇಟ್ಟಿದೆ ಜಗ. ಹೀಗಾಗಿ ಅವನನ್ನು ಸಾಸಿವೆ ಡಬ್ಬದಲ್ಲಿ ಹಾಕಿ ಮುಚ್ಚುವ ಪ್ರಶ್ನೆಯೇ ಏಳದು. ಚಿಂತನೆಗೆ ಹಚ್ಚುವ ಒಳ್ಳೆಯ ಕವನ. ಕಾವ್ಯ ಶೈಲಿಗೆ ಧನ್ಯ.