ಓ ತಾಯಿ
ಓ ತಾಯಿ
ಓ ತಾಯಿ ಕ್ಷಮಿಸು ನನ್ನನ್ನು ಕ್ಷಮಿಸು,
ಭೂಮಿ ನಮ್ಮೆಲ್ಲರನ್ನು ಹೊತ್ತರೂ ನೋಯಲಿಲ್ಲ,
ತಾಯಿಯು ಒಂಭತ್ತು ತಿಂಗಳು ನಮ್ಮನ್ನು ಹೊತ್ತರೂ ನೋವೆನ್ನಲಿಲ್ಲ,
ತಾಯಿ , ಭೂಮಿ ಅವರ ನೋವನ್ನು ಯಾರಿಗೂ ಹೇಳಲಿಲ್ಲ,
ನಿಮ್ಮ ನೋವು ನಮಗೆ ಕಾಣಿಸಲಿಲ್ಲ,
ನಾವೂ ಅರಿಯುವ ಪ್ರಯತ್ನ ಮಾಡಲಿಲ್ಲ,
ನಮಗಾಗಿ ಎಲ್ಲವನ್ನೂ ದಯಪಾಲಿಸಿದಿರಿ,
ಆದರೆ ನಮ್ಮಿಂದ ಏನೂ ಬಯಸಲಿಲ್ಲ,
ತಾಯೀ ನೋವುಂಡು ನಲಿವು ಕೊಟ್ಟೆ ನಮಗೆ,
ಈ ನಿನ್ನ ಋಣವ ಹೇಗೆ ತೀರಿಸಲಿ?...........
Rating
Comments
ಉ: ಓ ತಾಯಿ
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
," ಓ ತಾಯಿ ' ಕವನ ಸೊಗಸಾಗಿ ಮೂಡಿ ಬಂದಿದೆ, ತಾಯಿ ಮತ್ತು ಭೂಮಿಯ ಹೋಲಿಕೆ ಅರ್ಥಗರ್ಭಿಉತವಾಗಿದೆ, ಉತ್ತಮ ಕವನ ನೀಡಿದ್ದೀರಿ ಧನ್ಯವಾದಗಳು.