ನಿಮ್ಮ ಹಾರೈಕೆಗೆ ಕಾಯುತ್ತಿದ್ದೇನೆ
ನಿಮ್ಮವ ಚಲಪತಿ ವಿ
ನನ್ನ ಬರವಣಿಗೆಗಳಲ್ಲಿ ತಪ್ಪುಗಳೇನಾದರು ಕಂಡುಬಂದರೆ ಕ್ಷಮಿಸಿ ತಿದ್ದಬೇಕೆಂದು ಬಿನ್ನೈಸಿಕೊಳ್ಳುತ್ತೇನೆ, ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸದಾ ಸ್ವಾಗತ,ನನಗೆ ತಿಳಿದ ಮಟ್ಟಿಗೆ ತಾವೆಲ್ಲರೂ ನನಗಿಂತ ಹಿರಿಯರು, ಬರವಣಿಗೆಗಳಲ್ಲಿ ಪ್ರಬುದ್ಧತೆಯನ್ನು ಸಾಧಿಸಿದಂತವರು.ಈ ಕಿರಿಯನ ಬರವಣಿಗೆಯನ್ನು ತಿದ್ದಿ ತೀಡಬೇಕೆಂಬುದು ನನ್ನ ಹಂಬಲ,ಸದಾ ನಿಮ್ಮ ಬೆಂಬಲಕ್ಕಾಗಿ ಕಾತರದಿಂದ ಕಾಯುತ್ತಿರುತ್ತೇನೆ.
ಕನ್ನಡ ತಾಯಿಗೆ ನಮನ
ಯುಗ ಉಳಿದರೂ ಯುಗ ಕಳೆದರೂ
ಕನ್ನಡಮ್ಮನ ಪತಾಕೆ ಸಾಗುತಿದೆ ಅಭಿವೃದ್ಧಿಯ ಹಾದಿಯಲಿ
ಕವಿ ಕುವೆಂಪುರ ಕನ್ನಡ ನವವಾಣಿ
ರಾಜರತ್ನಂರವರ ಆದರ ಕನ್ನಡ ಗೀತೆಗೆ
ಕಾಳಿಂಗರ ಉದಯವಾಗಲಿ ಕನ್ನಡ
ನಾಡಿನ ಮಧುರ ಸ್ವರನಾದ ||ಯುಗ||
ಹೆಸರಾಯಿತು ಕನ್ನಡ ಉಸಿರಾಯಿತು
ಕನ್ನಡ ಎನ್ನುವಲಿ ಕಣವಿಯವರ
ಕನ್ನಡಾಂಬೆಯ ಅಭಿಮಾನವೂ ಹಚ್ಚಿದ ದೀಪವೂ
ಕಣ್ಣ ಕೊರೈಸುವ ಪ್ರಖರ ಕಿರಣವೂ ||ಯುಗ||
ನಮ್ಮ ತಾಯಿ ಕನ್ನಡ ಎಂದೇ
ಮರುಳು ಮಾಡಿದ ಮರುಳಯ್ಯನವರ
ಕವಿಲೀಲೆ ಸಾಕಲ್ಲವೇ ಕನ್ನಡನಾಡಿನ
ಅಭಿವೃದ್ಧಿ ಸಾಕಾರದ ದೀಪ ಬೆಳಗಲು ||ಯುಗ||
ಕನ್ನಡವೆಂದರೆ ಜ್ಯೋತಿರ್ಲಿಂಗ ಎಂದೇ
ಸೊಂಪಾಗಿ ಸಾರಿದ ಲಿಂಗಣ್ಣನವರ
ಪ್ರೀತಿಯ ಸಾಲುಗಳೂ ಮುಗಿಯದ ಹತ್ತಿಯೂ
ಕಾಳರಾತ್ರಿಯ ಮರೆಸುವ ದೀಪವೂ ||ಯುಗ||
ದಿನಕರನಂತೆ ಕನ್ನಡ ಸಾಗಿಸಲು
ಅಣಿಯಾದ ದೇಸಾಯಿಯವರ ನನ್ನ
ಕನ್ನಡ ನುಡಿಯೇ ನೀನೆಷ್ಟು ಚಂದ
ಏನು ಗೀಚಿದರೂ ಆಗುವುದು ಶ್ರೀಗಂಧ
ಈ ಮಧುರ ಸ್ವರಗಳು ಸಾಕಲ್ಲವೇ
ನವಯುವಕರ ಮನಸೆಳೆಯಲು ಕೋಟಿ
ಹೃದಯ ಹಣತೆಗಳ ಹೊತ್ತಿಸಲು ||ಯುಗ||
ಒಂದೆ ಕರ್ನಾಟಕ ಮುಂದೆ ಎಂದೆ
ಕರ್ನಾಟಕ ಜಗದೇಳಿಗೆಯಾಗುವುದಿದೆ
ಕರ್ನಾಟಕ ಎಂದೇ ಸಾರಿದ ಬೇಂದ್ರೆ
ಯವರ ಈ ಮಾತು ಸಾಕಾ......! ||ಯುಗ||
ಕನ್ನಡ ಕಂಪನು ಪಸರಿಸಿದವರೆಲ್ಲರೂ
ಸಾಕಲ್ಲವೇ ಎಂದೇಳಿ ಸುಮ್ಮನಿದ್ದರೆ
ಕನ್ನಡ ಏಳಿಗೆಯಾಗುವುದಿದೆ ಇನ್ನು
ಮುಂದೆ ಯುವ ಪೀಳಿಗೆಯ ಉಸಿರಲ್ಲಿ ||ಯುಗ||
ನೀವೆಲ್ಲರೂ ಸೇರಿ ಏರಿಸಿ
ಕನ್ನಡ ಬಾವುಟವ
ಓಹೋ! ಕನ್ನಡನಾಡು
ಆಹಾ! ಕನ್ನಡ ನುಡಿ
ಹಾರಿಸಿ ತೀರಿಸಿ
ಕೆಚ್ಚೆದೆಯ ಬಾವುಟ
ಸಿರಿಮುಕುಟ ಇವರು ಕನ್ನಡದೆದೆಗೆ
ಇವರೆಲ್ಲರ ಭಾವ ನಮ್ತಾವ
ಸೇರಿದರೆ ಸಾಕು ಅದುವೇ
ಕೋಟಿ ಕಣ್ಮಣಿಗಳ ಕನ್ನಡನಾಡು
ಯುಗ ಉಳಿದರೂ ಯುಗ ಕಳೆದರೂ
Comments
ಉ: ನಿಮ್ಮ ಹಾರೈಕೆಗೆ ಕಾಯುತ್ತಿದ್ದೇನೆ
ಚಲಪತಿ ಯವರಿಗೆ ವಂದನೆಗಳು
,ಮಾನ್ಯರೆ ನಿಮ್ಮ ಕವನ ' ಕನ್ನಡ ತಾಯಿಗೆ ನಮನ' ಓದಿದೆ, ಸೊಗಸಾಗಿ ಕನ್ನಡ ನಾಡು ನುಡಿಯ ಬಗೆಗೆ ಅಭಿಮಾನದಿಂದ ಹಾಗೆಯ ಭಾವುಕವಾಗಿ ಬರೆದಿದ್ದೀರಿ, ನಾಡು ನುಡಿಯ ಬಗೆಗಿನ ಈ ಅಭಿಮಾನ ಮತ್ತು ಭಾವುಕತೆ ಪ್ರತಿಯೊಬ್ಬ ಕನ್ನಡಿಗನಿಗೂ ಬೇಕು ಆಂದರೆ ಮಾತ್ರ ಕನ್ನಡಡ ಉಳಿವು ಸಾಧ್ಯ, ನಿಮ್ಮ ಬರವಣಿಗೆಯಲ್ಲಿ ಈ ವರೆಗೂ ಯಾವುದೇ ತಪ್ಪುಗಳು ಕಂಡು ಬಂದಿಲ್ಲ, ಆ ಶಂಕೆ ನಿಮಗೆ ಬೇಡ ಧೈರ್ಯ ದಿಂದ ನಿಮ್ಮ ಬರವಣಿಗೆಯ ಕಾರ್ಯ ಮುಂದುವರೆಸಿ ಧನ್ಯವಾದಗಳು.