ಮೂಢ ನಂಭಿಕೆಗಳು ಮತ್ತು ನರೇಂದ್ರ ದಾಬೋಲ್ಕರ್
ಭಾರತದಲ್ಲಿ ಮೂಢ ನಂಬಿಕೆಯು ಸಾಮಾಜಿಕ ಸಮಸ್ಯೆಯ ಜೊತೆಗೆ ಅಲೌಕಿಕ ಕಾರಣತ್ವವನ್ನು ಸೂಚಿಸುತ್ತಿದೆ. ಕೆಲವರು ಮೂಢ ನಂಬಿಕೆಯನ್ನು ಪದ್ದತಿಗಳೆಂದು ಪರಿಗಣಿಸಿ ಕೊಂಡಿರುವುದು ದುರಾದೃಷ್ಟಕರ ಮತ್ತು ಅವೈಜ್ಞಾನಿಕವು ಕೂಡ. ಮೌಢ್ಯಾಚರಣೆಗಳು ಒಂದೇ ರೀತಿಯಲ್ಲಿದ್ದರೂ ಅವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ನಿಂಬೆಹಣ್ಣನ್ನು ಮಂತ್ರಿಸಿ ಕೊಡುವುದು, ಮೆಣಸಿನಕಾಯಿ ಮಂತ್ರಿಸಿ ಕೊಡುವುದು, ಮಾಟ-ಮಂತ್ರದಿಂದ ಸುಡುವುದು ಮುಂತಾದ ರೀತಿಯಲ್ಲಿವೆ. ಬಹುಶಃ ಇಷ್ಟೆಲ್ಲಾ ಮೂಢ ನಂಬಿಕೆಗಳು ಇಂದಿಗೂ ಮುಂದುವರಿದುಕೊಂಡು ಬರುತ್ತಿರುವುದು ಶಿಕ್ಷಣದ ಕೊರತೆಯಿಂದಲೆ ಎಂದೆನಿಸುತ್ತದೆ. ೧೮೧೧ ರಲ್ಲಿ ರಾಜಾರಾಮ್ ಮೊಹನ್ ರಾಯ್ ರವರು ಹೋರಾಡಿದ್ದು ಇದೇ ಕಾರಣಕ್ಕಾಗಿ, ಪತಿಯು ಸತ್ತ ಮೇಲೆ ಜೀವಂತ ಚಿತೆಯೇರುವ ಪದ್ದತಿ ಭಾರತದಲ್ಲಿ ದೊಡ್ಡ ಪಿಡುಗಾಗಿದ್ದರಿಂದಲೇ ಅಂದಿನ ಬ್ರಿಟಿಷ್ ಗವರ್ನರ್ ಲಾರ್ಡ ವಿಲಿಯಂ ಬೆಂಟಿಕ್ ೧೮೨೯ರಲ್ಲಿ ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಬಿಟ್ಟಿದ್ದು.
ಸೆಪ್ಟೆಂಬರ್ ೪,೧೯೮೭ರಲ್ಲಿ ರಾಜಸ್ಥಾನದ ಶಿಖಾರಿ ಜಿಲ್ಲೆಯಲ್ಲಿ ರೂಪ್ ಕನ್ವರ್ ಎಂಬ ೧೮ ವರ್ಷದ ಯುವಕ ಸಾವನ್ನಪ್ಪುತ್ತಾನೆ. ಅವನಿಗೆ ಆಗಷ್ಟೆ ಮದುವೆಯಗಿ ೭ ತಿಂಗಳು ಕಳೆದಿರುತ್ತವೆ. ಪತಿಯ ಸಾವು ಸಂಭವಿಸಿ ಅವನನ್ನು ಸುಡುವಾಗ ಅವನ ಪತ್ನಿಯನ್ನು ಚಿತೆಗೆ ತಳ್ಳಲೆತ್ನಿಸಿದ ಪ್ರಸಂಗ ಜರುಗುತ್ತದೆ. ಇದಾದ ಬಳಿಕ ೨೦೦೭ ರಲ್ಲಿ ಮಧ್ಯ ಪ್ರದೇಶದ ಪನ್ನಾ ಜಿಲ್ಲಲೆಯೊಂದರಲ್ಲಿ ಇಂಥಹದೇ ಘಟನೆ ಮರುಕಳಿಸಿ ೬೫ ವರ್ಷದ ಮಹಿಳೆಯನ್ನು ಪತಿಯ ಚಿತೆಗೆ ಬಲಂತವಾಗಿ ಕೂರಿಸಲು ಪ್ರಯತ್ನಿಸಿದಂತ ಅಮಾನವೀಯ ಘಟನೆ ನಡೆಯುತ್ತದೆ. ೨೦೦೮ ರಲ್ಲಿ ಛತ್ತಿಸ್ ಘಡ್ ನ ರಾಯಪುರದಲ್ಲಿ ೭೫ ವರ್ಷದ ಮಹಿಳೆಯನ್ನು ಸತಿ ಸಹಗಮನ ಮಾಡಲು ಹೊರಟಿದ್ದು ಬೆಳಕಿಗೆ ಬರುತ್ತದೆ. ಇಂಥಹ ಪ್ರಕರಣಗಳು ಸಾಕಷ್ಟು ನಡೆಯುತ್ತಿರುವುದರ ಜೊತೆಗೆ ಮುಂದುವರಿದ ಭಾಗಗಳಾಗಿ ಪರಿಣಮಿಸುತ್ತಿವೆ. ಆದ್ದರಿಂದ ಧಾರ್ಮಿಕ ಕಂದಾಚಾರಗಳ ಹೆಸರಿನಲ್ಲಿ ಜೀವ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರೆ ತಪ್ಪಾಗಲಾರದು.
ಜ್ಯೋತಿಷ್ಯವು ಭಾರತದಲ್ಲಿ ಪ್ರಧಾನ ಪಾತ್ರ ವಹಿಸುದರೊಂದಿಗೆ ಜಾತಕ, ಶ್ರೇಯಸ್ಸು, ವಿವಾಹ, ನಿವೇಶನ ಮುಂತಾದ ರೀತಿಯಲ್ಲಿ ಅದು ಜನರಿಗೆ ನಿರ್ದೇಶನ ನೀಡುತ್ತಿದೆ. ಯಾವುದೇ ಒಬ್ಬ ವ್ಯಕ್ತಿ, ಕುಟುಂಬ,ಉದ್ಯಮ,ತಂತ್ರಜ್ಞಾನ ಮತ್ತು ವಿಜ್ಞಾನ ಮುಂತಾದವು ಸೇರಿದಂತೆ ಜ್ಯೋತಿಷ್ಯದ ಪ್ರಭಾವಕ್ಕೆ ಒಳಗಾಗಿವೆ. ಆದರೆ ಇದು ಸಾಧ್ಯವೇ? ಯಾವುದೇ ಕಾರಣಕ್ಕು ಸಾದ್ಯವಿಲ್ಲ. ಆದರೂ ಕೂಡ ಇಂತವರ ಬಳಿ ಹೋಗುವವರು ಹಾಗೂ ಬರುವವರ ಸಂಖ್ಯೆ ಗಣನಿಯವಾಗಿ ಹೆಚ್ಚುತ್ತಲೇ ಇದೆ. ಜಾಗತಿಕ ಮಟ್ಟದಲ್ಲಿ ಭಾರತವು ಗುರುತಿಸಿ ಕೊಂಡಿದ್ದರೂ ಕೂಡ ರಾಕೆಟ್ ಉಡಾವಣೆಯ ಸಮಯವನ್ನು ಜ್ಯೋತಿಷ್ಯದಿಂದ ತಿಳಿದುಕೊಳ್ಳುವ ವಿಕೃತ ಸಂಸ್ಕ್ರುತಿ ಉದ್ಭವವಾಗಿದೆ. ತಿರುಪತಿಯಲ್ಲಿ ರಾಕೆಟ್ ಉಡಾವಣೆಗು ಮುಂಚೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಒಬ್ಬ ವಿಜ್ಞಾನಿಯಾಗಿ ಇಂಥಹ ಅನಾಗರೀಕ ಸಂಸ್ಕ್ರುತಿಯನ್ನು ಈ ಜನರಿಗೆ ಕೊಡುತ್ತಾರೆಂದು ನಾನು ಭಾವಿಸಿರಲಿಲ್ಲ. ದೇವರ ಮೊರೆ ಹೋಗುವ ಮೂಲಕ ಇಡೀ ವಿಜ್ಞಾನ ಸಂಕುಲಕ್ಕೆ ಅಪಮಾನವೆಸಗಿದ ಇವರು ಈ ಸಮಾಜಕ್ಕೆ ಏನು ತಾನೆ ನೀಡ್ಯಾರು.
೨೧ ಸೆಪ್ಟಂಬರ್ ೧೯೯೫ ರಂದು ದೆಹಲಿಯಲ್ಲಿ ಗಣೇಶನ ವಿಗ್ರಹ ಹಾಲು ಕುಡಿಯಿತು ಎಂಬ ಘಟನೆ ನಡೆಯಿತು. ಅದನ್ನು ನೋಡಲು ಸಾಕಷ್ಟು ಜನ, ಸುದ್ದಿಯ ಮೇಲೆ ಸುದ್ದಿಯಾಗ ತೊಡಗಿ ಎಲ್ಲರು ಅತ್ತ ತಿರುಗಿ ನೋಡುವಂತಾಯಿತು. ಅಲ್ಲಿ ಒಂದು ನಿರ್ಜೀವ ವಸ್ತು ಹಾಲು ಕುಡಿಯುವುದುಂಟೆ? ಅದು ಸಾಧ್ಯವೆ? ಆದರೂ ಜನರು ಅದನ್ನು ಮೆಚ್ಚಿ ಕೊಂಡಾಡಿದರು. ಅನಂತರ " ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಕೌನ್ಸಿಲ್ " ನ ಯಶ್ಪಾಲ್ ಎನ್ನುವ ವಿಜ್ಞಾನಿ ಕ್ಯಾಪಿಲರಿ ಕ್ರಿಯೆಯಿಂದ ಹಾಲಿನೊಂದಿಗೆ ಕೆಂಪುಬಣ್ಣ ಬೆರಿಸುವುದರ ಮೂಲಕ ಇಂತಹುದನ್ನು ಕೃತಕವಾಗಿ ನಾವೆ ಮಾಡಬಹುದು ಎಂದು ಹೇಳುವುದರ ಮೂಲಕ ಅದನ್ನು ಸುಳ್ಳು ಮಾಡಿದರು. ಇದು ದೈವಿಕ ಸ್ವರೂಪದಲ್ಲ, ಇದೆಲ್ಲ ಕಪಟತನ ಎಂದು ನಿರೂಪಿಸಿದಾಗಿಯೂ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಿವಿಯೆ ಹೊರತು ಕಡಿಮೆಯಾಗಿಲ್ಲ.
ನಾವು ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾಗಿಯೂ ಪ್ರಾಣಿ-ಪಕ್ಷಿತ್ಯಾಗ, ಮುಟ್ಟಿನ ನಿಷೇದ, ಸತಿ ಸಹಗಮನ, ಬಲಿದಾನ, ವಾಮಾಚಾರ, ಯಜ್ಞ ಮುಂತಾದವು ಸೇರಿದದಂತೆ ನಿಂತಿಲ್ಲದಂತಾಗಿದೆ. ನಮ್ಮ ಭಾರತದಂತಹ ಹಳ್ಳಿಗಳಲ್ಲಿ ಇಂದಿಗೂ ಈ ವಾಮಾಚಾರದಂತಹ ಮೌಡ್ಯ ಸಂಸ್ಕ್ರುತಿಗಳು ನಡೆದುಕೊಂಡು ಬರುತ್ತಿವೆ. ಇದನ್ನು ಪಾಶ್ಚಿಮಾತ್ಯರು ಬ್ಲಾಕ್ ಮ್ಯಾಜಿಕ್ ಎಂದು ಕರೆಯುತ್ತಾರೆ. ಹಣಕಾಸು ಹಾಗೂ ಮುಂತಾದ ಸಮಸ್ಯೆಗಳಿಗೆ ಸಂಬಂದಿಸಿದಂತೆ ಇದರ ಮೊರೆ ಹೋಗುತ್ತಿರುವವರು ಅತಿಯಾಗಿ ಮಹಿಳೆಯರೇ ಆಗಿದ್ದಾರೆ. ೨೦೦೧ ಮತ್ತು ೨೦೦೬ ರ ನಡುವೆ ಅಸ್ಸಾಂನಲ್ಲಿ ೩೦೦ ಜನರು ಕೊಲ್ಲಲ್ಪಟ್ಟಿರುತ್ತಾರೆ, ಅವರೆಲ್ಲ ವಾಮಾಚಾರಕ್ಕೆ ಬಲಿಯಾಗಿದವರು. ೨೦೦೫ ಮತ್ತು ೨೦೧೦ ರ ನಡುವೆ ೩೫ ಜನ ಒರಿಸ್ಸಾದಲ್ಲಿ ವಾಮಾಚಾರಕ್ಕೆ ಬಳಕೆಯಾಗಿದ್ದಾರೆ, ಅನಂತರ ಇತ್ತೀಚಿಗೆ ಸೆಪ್ಟೆಂಬರ್ ೨೦೧೩ ರಲ್ಲಿ ಛತ್ತೀಸ್ ಘಡ್ ರಾಜ್ಯದಲ್ಲಿ ಅಮ್ಮ ಹಾಗೂ ಮಗಳು ಇಬ್ಬರನ್ನು ವಾಮಾಚಾರದ ಹೆಸರಿನಲ್ಲಿ ಅತ್ಯಾಚಾರ ಮಾಡಿದ್ದಾರೆ. ಇಂತಹ ಕ್ರೂರ ಸಂಸ್ಕ್ರುತಿ ಮತ್ತು ಅಸಭ್ಯ ಮೌಡ್ಯತೆಯನ್ನು ಭಾರತದಲ್ಲಿ ಬಿಟ್ಟು ಬೇರೆಲ್ಲು ಕಾಣಲಿಕ್ಕೆ ಸಾಧ್ಯವಿಲ್ಲ ಎಂದು ಕೊಂಡಿದ್ದೇನೆ. ಈ ಒಂದು ರೀತಿಯ ಮೌಡ್ಯತೆಗಳ ವಿರುದ್ದ ಹೋರಾಟಕ್ಕಿಳಿದು ನಿಂತವರು ನರೇಂದ್ರ ದಾಬೋಲ್ಕರ್. ಮಹಾರಾಷ್ಟ್ರದಾದ್ಯಂತ ಚಳವಳಿ ಮಾಡಿ ಇವುಗಳ ತಡೆಗೆ ಕಾನೂನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೀಳಿ ಕೆಲಸಗಳನ್ನೆ ಗೀಳು ಮಾಡಿಕೊಂಡಿದ್ದ ಹಿಂದೂ ಪರಂಪರೆಗೆ ಸೆಡ್ಡು ಹೊಡೆಯುವ ಮೂಲಕ ಹೊಸ ಆಯಾಮ ಕೊಟ್ಟಿದ್ದು ಇವರೆ.
ನರೇಂದ್ರ ದಾಬೋಕರ್ ಒಬ್ಬ ಭಾರತೀಯ ವಿಚಾರವಾದಿ ಹಾಗೂ ಮಹಾರಷ್ಟ್ರದಲ್ಲಿ ಲೇಖಕ ಜೊತೆಗೆ " ಅಂಧಶ್ರದ್ದ ನಿರ್ಮೂಲನ್ " ಸಮಿತಿಯ ಸಂಸ್ಥಾಪಕರೂ ಕೂಡ. ಇವರು ನವೆಂಬರ್ ೧,೧೯೪೫ರಂದು ಜನಿಸಿ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ನಂತರ ಕಾಲೇಜು ಶಿಕ್ಷಣ ವಿಲ್ಲಿಂಗ್ಸ್ ಕಾಲೇಜಿನಲ್ಲಿ ಪಡೆದುಕೊಂಡು ಅನಂತರ ಸರ್ಕಾರಿ ವೈದ್ಯಕೀಯ ಶಿಕ್ಷಣವನ್ನು ಮುಗಸಿದರು.
ದಾಬೋಲ್ಕರ್ ರವರು ಶಿಕ್ಷಣದ ನಂತರ ೧೨ ವರ್ಷಗಳು ಯಶಸ್ವಿ ವೈದ್ಯರಾಗಿ ಸೇವೆಸಲ್ಲಿಸಿ, ಅನಂತರ ಆಂದೋಲನಗಳಲ್ಲಿ ತೊಡಗಿಸಿಕೊಂಡು ೧೯೮೦ ರಲ್ಲಿ ಸಂಪೂರ್ಣ ಸಾಮಾಜಿಕ ಕಾರ್ಯಕರ್ತರಾದರು. ಮಹಾರಾಷ್ಟ್ರದಲ್ಲಿ ಅಖಿಲ ಭಾರತೀಯ ಅಂಧಶ್ರದ್ದ ನಿರ್ಮೂಲನ್ ಎಂಬ ಮೂಢ ನಂಬಿಕೆಯ ಕೇಂದ್ರ ಸ್ಥಾಪಿಸಿ. ಇದರ ಅಡಿಯಲ್ಲಿ ಮೂಢ ನಂಬಿಕೆಗಳ ವಿರುದ್ದ ಧ್ವನಿ ಎತ್ತಿ ನಿಂತರು. ಪವಡಾ, ಖಾಯಿಲೆ ಪರಿಹಾರ ಹಾಗೂ ಇನ್ನಿತರ ಸಮಜಿಕ ಅನಿಷ್ಟ ಪದ್ದತಿಗಳ ವಿರುದ್ದ ಬಂಡಾಯವೆದ್ದು ಪ್ರಚಾರಕ್ಕಿಳಿದು, ಮೂಡ ನಂಬಿಕೆಯ ಹಿಂಸಾಚಾರ ಕುರಿತಂತೆ ೧೯೯೦ ಮತ್ತು ೨೦೧೦ ರ ನಡುವೆ ಸಮಾನತೆಯ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ದಾಬೋಲ್ಕರ್, ಮೂಡ ನಂಬಿಕೆಯ ವಿರೋದಿಸಿ ಪುಸ್ತಕಗಳನ್ನು ಬರೆಯುತ್ತ ಮೂರು ಸಾವಿರಕ್ಕು ಹೆಚ್ಚು ಸಾರ್ವಜನಿಕ ಸಭೆಯಲ್ಲಿ ಇದರ ವಿರುದ್ದ ಕಿಡಿಕಾರಿದ್ದಾರೆ.
ಮೂಡ ನಂಬಿಕೆಯನ್ನು ಸಂಪೂರ್ಣವಾಗಿ ಕಾನೂನಿನೊಳಗೆ ಕಟ್ಟಿ ಹಾಕಬೇಕೆಂದು ೨೦೦೩ ರಲ್ಲಿ ವಿರೋದಿ ಮೂಡ ನಂಬಿಕೆ ಮತ್ತು ಬ್ಲಾಕ್ ಮ್ಯಾಜಿಕ್ ಬಿಲ್ ಅನ್ನು ಸಿದ್ದಪಡಿಸಿದರು. ಇದನ್ನು ರಾಜ್ಯ ಸರ್ಕಾರವು ಜುಲೈನಲ್ಲಿ ಅಂಗೀಕರಿಸಿಕೊಂಡು ಸುಶೀಲ್ ಕುಮಾರ್ ಸಿಂದೆಯ ಮೂಲಕ ಕೇಂದ್ರಕ್ಕೆ ಕಳುಹಿಸಿ ಬಿಲ್ಲನ್ನು ಪರಿಷ್ಕರಣೆ ಮಾಡಿಸಲಾಯಿತು. ಅದಾದ ಬಳಿಕ ೨೦೦೫ ರ ಚಳಿಗಾಲದ ಅಧಿವೇಶನದಲ್ಲಿ ಮೊದಲಬಾರಿಗೆ ಪರಿಚಯಿಸಲಾಗಿ ಈ ಬಿಲ್ಲನ್ನು ಡಿಸಂಬರ್ ೧೬, ೨೦೦೬ ರಂದು ಅಧಿವೇಶನದ ಕೊನೆಯ ದಿನ ಅಳವಡಿಸಿಕೊಂಡಿತು.
೨೫ ಫೆಬ್ರವರಿ ೨೦೦೬ ರಂದು ಬಿಲ್ ವಿರುದ್ದ ಸ್ಥಳೀಯ ಧಾರ್ಮಿಕ ಸಂಸ್ಥೆಗಳಾದ ಆರ್ಟ್ ಆಫ್ ಲಿವಿಂಗ್, ಹಿಂದೂ ಜಾಗರಣಾ ವೇದಿಕೆ ಹಾಗೂ ಮುಂತಾದ ಹಿಂದೂ ಸಂಘಟನೆಗಳು ಪುಣೆಯಲ್ಲಿ ಹೌಹರ ಮಾಡ ತೊಡಗಿ ಬಿಲ್ ಅನ್ನು ವಸಪಡಿಸಿಕೊಳ್ಳಲು ಪ್ರಯತ್ನಿಸಿದ್ದು ಉಂಟು, ಈ ಮಸೂದೆಯು ಧಾರ್ಮಿಕ ಸ್ವಾತಂತ್ರವನ್ನು ಉಲ್ಲಂಘಿಸುತ್ತಿದೆ ಎಂದು ಬೀದಿ ಬೀದಿಯಲ್ಲಿ ಕಿರುಚ ತೊಡಗಿದರು. ಇವರಿಗೆ ಹಿಂದೂ ಧರ್ಮದ ಅನಿಷ್ಟ ಪದ್ದತಿಗಳು ಹಾಗೂ ಮಾಟ-ಮಂತ್ರ ಮಾಡಿ ಜನರಿಗೆ ಮೋಸ ಮಾಡಿ ಬದುಕುವ ಆಚರಣೆಗಳನ್ನು ಧರ್ಮ ಎಂದು ಒಪ್ಪಿಕೊಳ್ಳುತ್ತಾರಲ್ಲ, ಇವರಿಗೆ ಏನೆನ್ನಬೇಕು ಎಂಬುದೇ ತಿಳಿಯುತ್ತಿಲ್ಲ. ಅಂದಿನ ಮಹಾರಾಷ್ಟ್ರ ಸರ್ಕಾರ ೨೦೦೬ ರಲ್ಲಿ ಮುಂಗಾರು ಅಧಿವೇಶನದಲ್ಲಿ ಪ್ರಸ್ತುತವಲ್ಲವೆಂದು ಮುಂದೂಡುವುದರ ಮೂಲಕ ಶಾಸಕಾಂಗವು ಮತ್ತೆ ೨೦೦೭ ರಲ್ಲಿ ೨ನೇ ಮನೆಗೆ ಕಳುಹಿಸಲಾಯಿತು. ನಾಲ್ಕು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಈ ಮಸೂದೆಯು ೮ ನವೆಂಬರ್ ೨೦೧೦ ರ ನಂತರ ಮತ್ತೆ ಇದು ಧ್ವನಿಯಾಗ ತೊಡಗಿತು. ಹಲವಾರು ಜನ ಸ್ಪಷ್ಟ ವ್ಯಾಖ್ಯಾನ ಹೊಂದಿಲ್ಲವೆಂದು ಟೀಕಿಸುತ್ತಿದ್ದರು. ಈ ಮಸೂದೆಯನ್ನು ಒಪ್ಪಿದವರಿಗಿಂತ ವಿರೋದಗಲನ್ನೆ ಎದುರಿಸಬೇಕಾಯಿತು. ಏಪ್ರಿಲ್ ೫, ೨೦೧೧ ರಂದು ದಾಬೋಲ್ಕರ್ ರವರು ದೂರದರ್ಶನ ಕಾರ್ಯಕ್ರಮದಲ್ಲಿ ಮೂಡ ನಂಬಿಕೆಯ ವಿರುದ್ದ ಮಾತನಾಡುತ್ತಾ ಸರ್ಕಾರದ ವಿರುದ್ದ ಟೀಕಿಸತೊಡಗಿದರು. ಇದಾದ ನಂತರ ಅಜಾದ್ ಮೈದಾನದಲ್ಲಿ ಜಾಗೃತಿಯ ಕಾರ್ಯಕ್ರಮವೂಂದು ಜರುಗಿತು. ಅದು ಏಪ್ರಿಲ್ ೭, ೨೦೧೧ ರಂದು ಆಗ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಸೂದೆಯನ್ನು ಬಜೆಟ್ ಅಧಿವೇಶನದಲ್ಲಿ ಮತ್ತೆ ಪರಿಚಯಿಸಿದರು. ಜುಲೈ ೭, ೧೯೯೫ ರಿಂದ ಮೂಡ ನಂಬಿಕೆಯ ಮಸೂದೆಯನ್ನು ಅಂಗೀಕರಿಸಿ ಕೊಳ್ಳುತ್ತೇವೆಂದು ಭರವಸೆ ನೀಡುತ್ತಾ ಬಂದಿದ್ದ ಸರ್ಕಾರ ಜುಲೈ ೭, ೨೦೧೧ ರಂದು ಯಶಸ್ವಿಯಾಗುವ ನಿಟ್ಟಿನಲ್ಲಿತ್ತು, ಆದರೆ ಸ್ಥಳೀಯ ಮುಖಂಡರು ಅದರ ವಿರುದ್ದ ತಿರುಗಿ ಬಿದ್ದಿದ್ದರಿಂದ ಮತ್ತೆ ವಿಫಲವಾಯಿತು.
ಅಂದು ಆಗಸ್ಟ್ ೨೦,೨೦೧೩ ದಾಬೋಲ್ಕರ್ ರವರು ವಾಕಿಂಗ್ ಹೋಗುವ ಸಂದರ್ಭದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಅವರ ಸಾವಿನಿಂದ ಮಹಾರಾಷ್ಟ್ರದಲ್ಲಿ ದೊಡ್ಡ ಕ್ರಾಂತಿಯೆ ನಡೆದು ಮಸೂದೆಯ ಬೇಡಿಕೆಯನ್ನು ಜೊತೆಗೆ ಪ್ರಚೋಧಿಸಿತು. ಅನ್ಯ ಮಾರ್ಗವಿಲ್ಲದೆ ಆಗಸ್ಟ್ ೨೧, ೨೦೧೩ ರಂದು ಮಹಾರಾಷ್ಟ್ರ ಸರ್ಕಾರ ಅನುಮೋದನೆ ನೀಡಬೇಕಾಯಿತು. ಮಹಾರಾಷ್ಟ್ರದ ಗವರ್ನರ್ ಕೆ, ಶಂಕರ್ ನಾರಾಯಣ್ ಅದೇ ಆಗಸ್ಟ್ ೨೪, ೨೦೧೩ ರಂದು ಸುಗ್ರೀವಾಜ್ಞೆಗೆ ಸಹಿ ಹಾಕಿ ಇದಕ್ಕೊಂದು ಹೊಸ ರೂಪ ಕೊಟ್ಟರು. ಪ್ರಸ್ತುತ ಮಸೂದೆಯು ಇಪ್ಪತ್ತೊಂಬತ್ತು ತಿದ್ದುಪಡಿಗಳಾಗಿದ್ದು ೧೨ ವಿಧಿಗಳನ್ನು ಒಳಗೊಂಡಿದೆ. ಈ ಮಸೂದೆಯನ್ನು ಉಲ್ಲಂಘಿಸಿದವರಿಗೆ ಕನಿಷ್ಟ ಶಿಕ್ಷೆ ೭ ವರ್ಷಗಳು ಜೊತೆಗೆ ಜಾಮೀನು ರಹಿತವು ಕೂಡ.
ಈ ಮಸೂದೆಯು ಜಾರಿಗೆ ಬಂದ ನಂತರ ಸೆಪ್ಟೆಂಬರ್ ೪, ೨೦೧೩ ರಂದು ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು. ಒಂದು ಪತ್ರಿಕೆಯಲ್ಲಿ ಏಡ್ಸ್, ಕ್ಯಾನ್ಸರ್ , ಮದುಮೇಹ ಮುಂತಾದ ಖಾಯಿಲೆಗಳನ್ನು ಪವಾಡದ ಮೂಲಕ ಪರಿಹರಿಸುತ್ತೇನೆಂದು ಪ್ರಚಾರ ಮಾಡಿದಾತನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಯಿತು. ಮಸೂದೆಯ ಜಾರಿಯ ನಂತರ ಪ್ರಕಟಣೆಗೊಂಡ ಮೊದಲ ಶಿಕ್ಷೆ ಇದಾಗಿದ್ದು, ಎಲ್ಲಾ ನಾಗರೀಕರನ್ನು ಬಡಿದೆಬ್ಬಿಸಿತು. ನರೇಂದ್ರ ದಬೋಲ್ಕರ್ ರವರ ಹೆಸರಿಗೆ ಹೊಸ ತಿರುವು ನೀಡಿತು. ಹಿಂದೂ ಧರ್ಮದಲ್ಲಿ ಮೂಡ ನಂಬಿಕೆಗಳು ಪ್ರತಿಯೊಬ್ಬರನ್ನು ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಗಿ ಹಾಗೂ ದೈಹಿಕವಾಗಿ ಘಾಸಿಗೊಳಿಸುತ್ತಿದೆ. ಅಂತಹ ಅನಿಷ್ಟ ಪದ್ದತಿಯ ವಿರುದ್ದ ಹೋರಾಟ ನಡೆಸಿ ಯಶಸ್ವಿಯಾದ ನರೇಂದ್ರ ದಾಬೋಲ್ಕರ್ ರವರಂತಹ ಪ್ರಜ್ಞಾವಂತ ಬುದ್ದಿ ಜೀವಿಗಳ ಅನಿವಾರ್ಯತೆ ಈ ಸಮಾಜಕ್ಕೆ ಬಹಳ ಅವಶ್ಯ. ಅವರ ಮಸೂದೆಯು ಮಹಾರಾಷ್ಟ್ರದಲ್ಲಿ ಮಾತ್ರ ಚಾಲ್ತಿಯಲ್ಲಿದ್ದರೆ ಸಾಲದು ಅಂತಹ ಕಾರ್ಯಗಳು ಪ್ರತಿ ರಾಜ್ಯದಲಗಲ್ಲೂ ಜರುಗಬೇಕು. ಈ ದೇಶ ಮೂಡ ನಂಬಿಕೆ ರಹಿತ ದೇಶವಾಗಬೇಕು. ಆಗಾದಲ್ಲಿ ಮಾತ್ರ ಭಾರತ ನಾಗರೀಕ ದೇಶವಾಗಲು ಸಾಧ್ಯ.