AAP ಹೊಸದೋ ಅಥವಾ ಬರಿ ಹೊಸ ಮೂಖವೊ! ಕಾಲವೇ ಉತ್ತರಿಸಲಿ
ಆಮ್ ಅದ್ಮಿ ಪಕ್ಷದ ಜಯ ಹೊಸ ರಾಜಕೀಯವನ್ನ ಆರಂಭಿಸಿದೆಯೇ? ಇದು ಸದ್ಯದ ಚರ್ಚಿತ ವಿಷಯ
ಸದ್ಯಕ್ಕೆ ಉತ್ತರ ಇಲ್ಲ, ಇನ್ನೇನು ಕೆಲವೇ ತಿಂಗಳುಗಳಲ್ಲಿ ಗೋತ್ತಾಗಲಿದೆ!
ಸದ್ಯದ ಮಾಹಿತಿಯ ಪ್ರಾಕಾರ ಅದಕ್ಕು ಮತ್ತು ಇನ್ನಿತರೆ ರಾಜಕೀಯ ಪಕ್ಷಗಳೀಗೂ ಅಂತರ ಬಹಳ ಹೆಚ್ಛೇನೊ ಇಲ್ಲ
ಉದಾ: 33 ಜನ ಉಮೇದುವಾರರು ಕೋಟ್ಯಾಧಿಪತಿಗಳು, ಒಟ್ಟಾರೆ ತಲಾ ಅಸ್ತಿ 2.51 ಕೋಟಿ ರೊ, 5 ಜನರ ಮೇಲೆ ಕ್ರಿಮಿನಲ್ ಮೊಕದಮ್ಮೆಗಳಿದ್ದು, ಇವರು ಅಮ್ ಅದ್ಮಿಗಳೇ?
Comments
ಉ: AAP ಹೊಸದೋ ಅಥವಾ ಬರಿ ಹೊಸ ಮೂಖವೊ! ಕಾಲವೇ ಉತ್ತರಿಸಲಿ
ಆಮ್ ಆದ್ಮಿ ಪಕ್ಷದಲ್ಲಿ ಕೆಲವು ಕೋಟ್ಯಾಧೀಶರು ಇದ್ದರೆ ಅದು ಅಪರಾಧ ಆಗುತ್ತದೆಯೇ? ದೆಹಲಿಯಂಥ ಮಹಾನಗರದಲ್ಲಿ ಒಂದು ಸ್ವಂತ ಮನೆ, ಫ್ಲಾಟ್ ಅಥವಾ ಸಣ್ಣ ಜಮೀನು ಹೊಂದಿದ್ದವರೂ ಕೋಟ್ಯಾಧಿಪತಿಗಳೇ ಏಕೆಂದರೆ ಅಲ್ಲಿ ಜಮೀನಿನ/ಮನೆ/ಫ್ಲಾಟ್ ಬೆಲೆ ದುಬಾರಿಯಾಗಿದೆ. ಹೀಗಾಗಿ ಮಧ್ಯಮ ವರ್ಗದ ಒಬ್ಬ ವ್ಯಕ್ತಿಯೂ ಅಲ್ಲಿ ಆಸ್ತಿಯ ಲೆಕ್ಕ ನೋಡಿದರೆ ಕೋಟ್ಯಾಧಿಪತಿಯಾಗಿ ಕಂಡುಬರಬಹುದು. ಅಭ್ಯರ್ಥಿಗಳು ನ್ಯಾಯಯುತ ಮಾರ್ಗದಲ್ಲಿ ಹಣ ಗಳಿಸಿ ಕೋಟ್ಯಾಧೀಶರಾಗಿದ್ದರೆ ಅದರಲ್ಲಿ ಆಕ್ಷೇಪಿಸುವಂಥದ್ದು ಏನೂ ಇಲ್ಲ ಬದಲು ಸ್ಥಿತಿವಂತರು ದೇಶದ ರಾಜಕೀಯವನ್ನು ಬದಲಿಸಲು ಸಾರ್ವಜನಿಕ ಬದುಕಿಗೆ ಬರುತ್ತಿರುವ ಬಗ್ಗೆ ಸಂತೋಷ ಪಡಬೇಕು ಮತ್ತು ಪ್ರೋತ್ಸಾಹಿಸಬೇಕು. ಗಟ್ಟಿಯಾದ ಜೀವನೋಪಾಯದ ಹಾದಿ ಇರುವವರು ರಾಜಕೀಯಕ್ಕೆ ಬಂದರೆ ಒಳ್ಳೆಯದೇ ಏಕೆಂದರೆ ಅವರು ತಮ್ಮ ಶಾಸಕತ್ವದ ಅವಧಿಯಲ್ಲಿ ಅನೈತಿಕ ಮಾರ್ಗಗಳ ಮೂಲಕ ತಮ್ಮ ಮುಂದಿನ ಜೀವನೋಪಾಯಕ್ಕಾಗಿ ಹಣ ಸಂಗ್ರಹಿಸಬೇಕಾದ ಜರೂರತ್ತು ಇರುವುದಿಲ್ಲ. ಆಮ್ ಆದ್ಮಿ ಪಕ್ಷ ಜನತೆಯ ದೇಣಿಗೆಯ ಹಣದಿಂದ ಚುನಾವಣಾ ಖರ್ಚುಗಳನ್ನು ನ್ಯಾಯಯುತ ಮಿತಿಯೊಳಗೆ ನಿರ್ವಹಿಸುವ ಕಾರಣ ಅನೈತಿಕ ಮಾರ್ಗಗಳಿಂದ ಹಣ ಗಳಿಸಬೇಕಾದ ಭ್ರಷ್ಟಾಚಾರದ ಮೂಲಭೂತ ಕಾರಣವನ್ನು ನಿವಾರಿಸಿಕೊಂಡಿದೆ. ಹೀಗಾಗಿ ಅವರು ತೋರಿಸಿದ ಹಾದಿ ದೇಶದ ರಾಜಕೀಯದ ಬದಲಾವಣೆಗೆ ಸಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ. ಆಮ್ ಆದ್ಮಿ ಪಕ್ಷದ ಕೆಲವರ ಮೇಲೆ ಕ್ರಿಮಿನಲ್ ಕೇಸು ಇರುವುದು ಅವರು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಭಾಗಿಯಾದದ್ದಕ್ಕಾಗಿ ಹಾಕಿದ್ದೇ ಹೊರತು ಯಾರನ್ನೋ ಕೊಲೆ, ದರೋಡೆಯಂಥ ಅಪರಾಧ ಮಾಡಿದ್ದಕ್ಕಾಗಿ ಹಾಕಿದ ಕೇಸು ಅಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.