ಸುಕೀರ್ತಿ ಮಂದಿರದ ಚಿನ್ನದ ಕಳಸ - ಲಕ್ಷ್ಮೀಕಾಂತ ಇಟ್ನಾಳ

ಸುಕೀರ್ತಿ ಮಂದಿರದ ಚಿನ್ನದ ಕಳಸ - ಲಕ್ಷ್ಮೀಕಾಂತ ಇಟ್ನಾಳ

ಸುಕೀರ್ತಿ ಮಂದಿರದ ಚಿನ್ನದ ಕಳಸ    - ಲಕ್ಷ್ಮೀಕಾಂತ ಇಟ್ನಾಳ

ಅರಮನೆಯ ವಾಸ
ಬಡಜನರ ಸಹವಾಸ
ಸುಕೀರ್ತಿ ಮಂದಿರದ ಮರೆಯಾದ ಕಳಸ
ಕಾವೇರಿಯ ಹನಿಹನಿಯಲಿ ಕಂಬನಿಯ ವಿಳಾಸ

ಸುಖ ಸುಪ್ಪತ್ತಿಗೆಯ ಭರತ
ಕಷ್ಟ ಕಾರ್ಪಣ್ಯಗಳಿಗೆ ಮಿಡಿತ
ದೀನ ದೈನ್ಯರ ಕಣ್ಣೀರ ಅರಿತ
ಕರುಣೆದುಂಬಿದ ಮಾನವಂತ ಮಹಾಂತ

ಲಕ್ಷ ಲಕ್ಷ ಜನಮನಗಳ ಒಡೆಯ
ಸಾಮಾನ್ಯರ ಅಭಿಮಾನಿ ಹೃದಯ
ಗಣಮಾನ್ಯ ಸಿಂಧು ಮೈಸೂರ ಬಂಧು
ನಿಮಗಿದೋ ವಂದನೆ,  ಇದೋ, ನಿಮಗೆ ವಂದನೆ

Rating
No votes yet

Comments

Submitted by H A Patil Wed, 12/11/2013 - 19:30

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಸುಕೀರ್ತಿ ಮಂದಿರದ ಚಿನ್ನದ ಕಳಸ' ಈ ತಲೆಬರಹ ನೋಡುತ್ತಿದ್ದಂತೆ ಏನು ಬರೆದಿದ್ದಾರೆ ಎನ್ನುವ ಕುತೂಹಲ ನನಗಾಯಿತು, ಅಗಲಿದ ಮೈಸೂರು ಮಹಾರಾಜರ ಕುರಿತು ಸರಳವಾಗಿ ಮನಮುಟ್ಟುವಂತೆ ಬರೆದಿದ್ದೀರಿ, ಅವರಿಗೆ ನಿಮ್ಮ ವಂದನೆಗಳೊಂದಿಗೆ ನನ್ನ ನಮಗಳು ಕೂಡ.