ಮರಳಿ ಬಾ ನಮ್ಮ ಒಡೆಯ.
ರಾಜಾಧಿ ರಾಜ ಮೈಸೂರಿನ ಶ್ರೀಕಂಠದತ್ತ ಒಡೆಯಾ,
ಯದು ವಂಶದ ಕೊನೆಯ ಒಡೆಯ,
ನಮ್ಮ ರಾಜ, ಬಹುಪ್ರತಿಭೆಯ ಒಡೆಯ,
ನಿಮ್ಮಿಂದ ಇತ್ತು ಅರಮನೆಗೆ ಅಂದ,
ನಿಮ್ಮಿಂದ ಮೈಸೂರ ಜನತೆಗೆ ಮಹದಾನಂದ,
ನಮ್ಮ ಅರಮನೆಯ ಸೌಂದರ್ಯಕ್ಕೆ ಕಳಶಪ್ರಾಯರು ನೀವು,
ಚಿನ್ನದ ಅಂಬಾರಿಯ ಒಡೆಯರು ನೀವು ,
ಜನಾನುರಾಗಿ ಶ್ರೀಕಂಠದತ್ತ ಒಡೆಯರು ನೀವು,
ಒಡೆಯಾ ಎಲ್ಲ ಸಮಾಜಕ್ಕೆ ನಿಮ್ಮ ಕೊಡುಗೆ ಅಪಾರ,
ಶಿವನು ಕಂಠದಲ್ಲಿ ವಿಷವಿಟ್ಟುಕೊಂಡು ಜಗವ ರಕ್ಷಿಸಿದ,
ಶ್ರೀಕಂಠದತ್ತರು ಹೃದಯದಲ್ಲಿ ನೋವನ್ನು ಇಟ್ಟುಕೊಂಡು
ನಲಿವನ್ನು ಕೊಟ್ಟರು,
ಇಂದು ನಿಮ್ಮ ಹೃದಯ ಬಡಿತವೇ ನಿಂತು ಹೋಯಿತು....
ಕಳಚಿದಂತಾಯಿತು ಯದು ವಂಶದ ಕೊನೆಯ ಕೊಂಡಿ,
ಇಂದು ಬಡವಾಯಿತು ಮೈಸೂರು ಅರಸರ ರಾಜ ಸಿಂಹಾಸನ,
ಮತ್ತೆ ಮರಳಿ ಬಾ ನನ್ನ ಒಡೆಯ ನಮ್ಮ ಅರಮನೆಗೆ.....
Rating
Comments
ಉ: ಮರಳಿ ಬಾ ನಮ್ಮ ಒಡೆಯ.
ರವೀಂದ್ರ ಎನ್ ಅಂಗಡಿ ಯವರಿಗೆ ವಂದನೆಗಳು
ನಿಮ್ಮ ಕವನ 'ಮರಳಿ ಬಾ ಒಡೆಯ' ಓದಿದೆ, ನಮ್ಮನ್ನಗಲಿದ ಶ್ರೀಕಂಠದತ್ತ ಒಡೆಯರರ ಕುರಿತು ತುಂಬಾ ಅಪ್ಯಾಯಮಾನವಾದ ಅವರಿಗೆ ಶ್ರದ್ಧಾಂಜಲಿ ಪೂರ್ವಕ ಕವನ ನೀಡಿ ಅವರ ತುಬು ವ್ಯಕ್ತಿತ್ವದ ಪರಿಚಯ ಮಾಡಿಸಿದ್ದೀರಿ, ನಿಮ್ಮ ಬರವಣಿಗೆ ಹೀಗಯೆ ನಿರಂತರತೆಯನ್ನು ಕಾಯ್ದು ಕೊಳ್ಳಲಿ ಧನ್ಯವಾದಗಳೋಂದಿಗೆ.