ನನ್ನನು ಕರೆದೊಯ್ಯುವಿರ

ನನ್ನನು ಕರೆದೊಯ್ಯುವಿರ

ಚಿತ್ರ

ಒಡೆದು ಮೂಡಿದ ಹೊನ್ನ ರಶ್ಮಿಯಂಚಲಿ

ಸಾಲು ಸಾಲಾಗಿ ಚಲಿಸೊ ಹಕ್ಕಿಗಳೆ

ನಾನು ನಿಮ್ಮಂತೆಯೆ ಹಾರುವ ಆಸೆ

ನಾನು ನಿಮ್ಮಂತೆ ಮುಗಿಲ ಮುಟ್ಟುವ ಆಸೆ

ನನ್ನನು ಕರೆದೊಯ್ಯುವಿರ ಅಲ್ಲಿಗೆ

ನನ್ನನು ಕರೆದೊಯ್ಯುವಿರ

 

ತೆಂಗಿನ ನಾರ ಕೊಕ್ಕಲಿ ಬಂಧವ ಬಿಡಿಯಾಗಿ ಬಿಡಿಸಿ

ತಲೆ ಮ್ಯಾಗಳ ಸೂರ ಯುಕ್ತಿಲಿ ಎಣೆವಿರಿ ಒಂದೊಂದ ಕೂಡಿಸಿ

ಪ್ರಪಾತಕ್ಕೆ ಬಾಗಿದ ಮರದ ಕೊಂಬೆ ಅಂಚಿಗೆ 

ಹರಿವ ಗಂಗಿ ತಲಿಮ್ಯಾಲ ತೂಗುವ ಹಾಸಿಗೆ

ನೆಮ್ಮದಿ ಬದುಕು ಅಲ್ಲಿದೆ

ನಾ ಬರುವೆ ಆ ಗೂಡಿಗೆ

ನನ್ನನು ಕರೆದೊಯ್ಯುವಿರ ಅಲ್ಲಿಗೆ

ನನ್ನನು ಕರೆದೊಯ್ಯುವಿರ

 

 

ಯಾರದೊ ತೋಟಕೆ ಒಳ ನುಗ್ಗಿ ಎಗ್ಗಿಲ್ಲದೆ ಹಣ್ಣನ್ನು ತಿನ್ನುವಿರಿ

ಯಾವುದೊ ಹೊಲಕೆ ನೀವ್ ಹೋಗಿ ಶಂಕೆ ಇಲ್ಲದೆ ದವಸ ತಿನ್ನುವಿರಿ

ಬಾಯಾರಿಕೆಯಾದರೆ ಝರಿಯ ನೀರ ಕುಡಿದು

ಮರಲುವಿರಿ ಗೂಡಿಗೆ ಸಂತಸದಿ ನಲಿದು

ನಿರ್ಭಯದ ಬದುಕು ನಿಮ್ಮದು

ನಾ ಬರುವೆ ನಿಮ್ಮೂರಿಗೆ

ನನ್ನನು ಕರೆದೊಯ್ಯುವಿರ ಅಲ್ಲಿಗೆ

ನನ್ನನು ಕರೆದೊಯ್ಯುವಿರ

 

ಯಾರದು ಬಂಧನ ಅಲ್ಲಿಲ್ಲ ಸೀಮಿತ ಗಡಿಯೂ ಅಲ್ಲಿಲ್ಲ

ಮಾನವ ಜನ್ಮದಲಿ ಯಾಕೆ ಈ ಬದುಕು ಇಲವೆ ಇಲ್ಲ

ಜಂಜಾಟದ ಬದುಕು ಜೀವನದ ಉದ್ದಕ್ಕೂ 

ಪ್ರತಿ ಹಂತದಿ ನಿರ್ಭಂದ ಮನಸಿನ ಹಗಲಕ್ಕೂ

ಮಾನವ ಜನ್ಮವೆ ಬೇಡ 

ನಾ ಬರುವೆ ನಿಮ್ಮ ಬಳಿಗೆ

ನನ್ನನು ಕರೆದೊಯ್ಯುವಿರ ಅಲ್ಲಿಗೆ

ನನ್ನನು ಕರೆದೊಯ್ಯುವಿರ

Rating
No votes yet