ಸಾಲುಗಳು - 3 (ನನ್ನ ಸ್ತೇಟಸ್)
ಸಾಲುಗಳು - 3 (ನನ್ನ ಸ್ಟೇಟಸ್)
16
ಶಾಲೆ ಮತ್ತು ಬಾರ್ ಗಳು ಅಕ್ಕಪಕ್ಕದಲ್ಲಿದ್ದರೆ ಬಾರ್ ಏಕೆ ಸ್ಥಳಾಂತರಿಸಬೇಕು, ಶಾಲೆಯನ್ನೆ ಎತ್ತಿ ದೂರ ಹಾಕಿ! ಕೆಲಸವಾಯಿತಲ್ಲ !
17
ಮೊದಲಲ್ಲಿ ನಾನು ಕಛೇರಿಯ ಕಾಗದ ಪತ್ರಗಳನ್ನು ಬರೆಯುವಾಗ ತುಂಬ ಚಿಂತೆ ಮಾಡುತ್ತಿದ್ದೆ, ಸರಿಯೊ ತಪ್ಪೋ ಎಂದು, ಸ್ವಲ್ಪ ಕಾಲದಲ್ಲಿ ಒಬ್ಬ ಹಿರಿಯ ಅಧಿಕಾರಿ ಹೇಳಿದರು,
"ಆಫೀಸ್ ಕರೆಸ್ಪಾಂಡೆನ್ಸ್ ನಲ್ಲಿ ನೀವು ಪತ್ರ ಬರೆಯುವುದೆ ಮುಖ್ಯವಾಗಿರುತ್ತೆ, ನೀವು ಎಷ್ಟು ಬೇಗ ಸ್ಪಂದಿಸಿದ್ದೀರಿ ಅನ್ನುವುದೇ ಮುಖ್ಯ. ಹಾಗು ನೀವು ಏನು ಹೇಳಬೇಕೆಂದಿರುವರೊ ಅದು ಸಂಬಂದಿಸಿದವರಿಗೆ ಅರ್ಥವಾಗುವಂತೆ ಇದ್ದರೆ ಸರಿ. ಏನಾದರು ಅನುಮಾನವಿದ್ದರೆ ಅವರೇ ಕ್ಲಾರಿಫಿಕೇಶನ್ ಕೇಳುತ್ತಾರೆ.
ಉಳಿದಂತೆ ನೀವು ಗ್ರಾಮರ್ ಸರಿಯಿಲ್ಲ ಎಂದೋ, ಅಥವ ಸ್ಪೆಲಿಂಗ್ ತಪ್ಪ್ಪಾಯಿತೋ ಎಂದೊ , ನನ್ನ ಇಂಗ್ಲೀಶ್ ಶೈಲಿ ಸರಿ ಇಲ್ಲ ಎಂದೋ ಚಿಂತಿಸುವ ಅಗತ್ಯವಿಲ್ಲ."
ಬಹುಶಃ ಅವರು ಹೇಳಿರುವುದು ಸರಿ ಎಂದೆ ನನಗೆ ಅನ್ನಿಸುತ್ತೆ
18
ಭಾರತದ ಬಹುತೇಕ ರಾಜಕೀಯ ಪಕ್ಷಗಳು ಕಾರ್ಮಿಕ ಸಂಘಟನೆಗಳಂತೆ ವರ್ತಿಸುತ್ತವೆ. ಆಡಳಿತವನ್ನು ರಚನಾತ್ಮಕವಾಗಿ ವಿರೋಧಿಸುವುದು ಅವುಗಳಿಗೆ ಗೊತ್ತು, ಆದರೆ ಅವರಿಗೆ ಅಧಿಕಾರ ಕೊಟ್ಟಲ್ಲಿ ರಚನಾತ್ಮಕವಾಗಿ ಆಡಳಿತ ನಡೆಸುವ ಶಕ್ತಿ ಯುಕ್ತಿ ಸಿದ್ದತೆ ಅನುಭವಗಳಿಲ್ಲ.
19
tablet ಅಂದರೆ ನುಂಗುವುದು ಅಂದುಕೊಂಡಿದ್ದೆ!
20
ಮನುಷ್ಯ ತನ್ನ ಬಗ್ಗೆ ತನಗೆ ನಂಬಿಕೆ ಇಲ್ಲದಾದಾಗ ದೇವರನ್ನು ಸೃಷ್ಟಿಸಿದ !
ಈಗ ದೇವರನ್ನು ನಂಬುವದಿಲ್ಲ !
? ?
21
ಅದ್ಭುತ
====
ಸುತ್ತಲೂ ಗಡಿಯ ಆಚೆ ಸದಾ ಕಾಡುವ ಶತ್ರುಗಳು. ಒಂದು ಕಡೆ ಚೀನ, ಮತ್ತೊಂದು ಪಾಕಿಸ್ತಾನ, ಬಾಂಗ್ಲ, ಮತ್ತೆ ಶ್ರೀಲಂಕ_ತಮಿಳು ಘರ್ಷಣೆ ಯಾವ ದಿಕ್ಕಿನಲ್ಲೂ ಭಾರತ ಸುರಕ್ಷಿತೆ ಅಥವ ನೆಮ್ಮದಿಯಾಗಿಲ್ಲ.
ರಾಜ್ಯಗಳ ನಡುವೆ ಬಾಷೆಯ, ನೀರಿನ, ನೆಲದ ವಿವಾದಗಳು, ಕಡ್ಡಿಗೀರಿದರೆ ಬಗ್ಗೆಂದು ಹತ್ತಿಕೊಳ್ಳುವ ಬೆಂಕಿ.
ರಾಜಕೀಯ ದಿವಾಳಿತನ, ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೆ ಪರಭಾರೆ ಮಾಡಲು, ಅಡವಿಡಲು ಸಿದ್ದವಾಗಿರುವ ರಾಜಕಾರಣಿಗಳು,.
ಹಣಕ್ಕಾಗಿ ತಮ್ಮತನವನ್ನೆ ಮಾರಿಕೊಂಡು ದೇಶವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿರುವ ಸರ್ಕಾರಿ ಅಧಿಕಾರಿಗಳು, ವ್ಯಾಪರಸ್ತರು, ಕಂಪನಿ ಮಾಲಿಕರು.
ಮತ್ತೆ ಮತೀಯ ಘರ್ಷಣೆಗಳು,
ಹಿಂದೂ ಮುಸ್ಲೀಂ ದ್ವೇಷ. ಮುಗಿಯದ ಭಯೋತ್ಪಾದನೆ, ಹಿಂದೂ ಹಾಗು ಮುಸಲ್ಮಾನರು ಪರಸ್ಪರ ನಂಬದ ಸನ್ನಿವೇಶ, ಹಾಗೆ ಸನ್ನಿ ಹಿಡಿದ ವರ್ತನೆ.
ಕ್ರಿಶ್ಚಿಯನ್ನರು ಹಿಂದೂಗಳ ಮತ ಪರಿವರ್ತನೆ ಮಾಡುವರೆಂಬ ಚರ್ಚಗಳ ಮೇಲಿನ ಆರೋಪ, ಅದಕ್ಕೆ ಹೊರದೇಶಗಳಿಂದಲೂ ಕುಮ್ಮಕ್ಕು ಇದೆಯೆಂದು ಸಂಶಯ.
ಉಳಿದ ಮತೀಯರು ನೆಮ್ಮದಿಯಲ್ಲೇನು ಇಲ್ಲ ಬುದ್ದನ ಆಲಯಗಳಲ್ಲು ಬಾಂಬ್ ಸ್ಪೋಟ.
ಮತದ ವಿಷಯ ಬಂದಲ್ಲಿ ಅನ್ಯರನ್ನು ದ್ವೇಷಿಸುವ ಜನ, ತಮ್ಮ ಮತದೊಳಗಾದರು ಸಹನೆ ಸಹವರ್ತಿಗಳೆ ?
ಮೇಲು ಕೀಳಿನ ಆರೋಪ, ಜಾತಿಗಳ ಮಧ್ಯ ಬಗೆಹರಿಯದ ಯುಗಯುಗಗಳ ಜಗಳಗಳು
ಮೇಲು ಜಾತಿಯವರ ಬಗ್ಗೆ ಉಳಿದವರ ಮುಗಿಯದ ದ್ವೇಷ,
ಮೇಲು ಜಾತಿ ಅಂದು ಕೊಳ್ಳುವ ಸಹ ಉಳಿದ ಎಲ್ಲ ಜಾತಿಗಳು ತನಗಿಂತ ಉಳಿದವರು ಕೆಳಗೆ ಅಂದು ಕೊಳ್ಳುವ ಕುಹಕ,
ಪ್ರತಿ ಜಾತಿಯವನು ಸಹ ತನ್ನ ಕೆಳಗೆ ಮತ್ತೊಂದು ಜಾತಿ ಇದೆ ಎಂದು ತಾನು ಶ್ರೇಷ್ಟ ಎಂದು ಭಾವಿಸುತ್ತ ಹೊರಗೆ ಮಾತ್ರ
ಜಾತೀಯತೆಗೆ ಕಾರಣ ಮಾತ್ರ ತಾನಲ್ಲ ತನಗಿಂತ ಮೇಲಿನವರು ಎಂದು ಅರೋಪಿಸುತ್ತ ಕೀಳು ಸಂತಸ ಪಡುವುದು,
ತಾನು ಸಹ ಜಾತೀಯತೆಯನ್ನೆ ಆಚರಿಸುತ್ತ, ಹೊರಗೆ ಅಷಾಡಭೂತಿತನ ಪ್ರದರ್ಶಿಸುವುದು,
ಎಲ್ಲರನ್ನು ತಿದ್ದುತ್ತ ಸಮಾಜವನ್ನು ಸರಿದಾರಿಯಲ್ಲಿ ಕರೆದೊಯ್ಯಬೇಕಾದ
ದಾರ್ಮಿಕ ಮುಖಂಡರು, ನಾಯಕರು, ಶಾಲೆಯ ಗುರುಗಳು, ವಿಜ್ಞಾನಿಗಳು, ಸಾಹಿತಿಗಳು ಎಲ್ಲರೂ ತಮ್ಮ ಕರ್ತವ್ಯದಲ್ಲಿ ವಿಫಲರಾಗಿ ತಾವು ಸಹ ವ್ಯವಸ್ಥೆಯ ಒಂದು ಕ್ರೂರ ಭಾಗವಾಗಿರುವ ವಿಪರ್ಯಾಸ.
...
ಇಷ್ಟೆಲ್ಲ ಅವ್ಯವಸ್ಥೆಯ ನಡುವೆ
.
ನೂರಹತ್ತು ಕೋಟಿಗೂ ಮೀರಿದ ಭಾರತೀಯರು
ಒಂದೇ ನೆಲದಲ್ಲಿ ಸಹಬಾಳ್ವೆ ನಡೆಸುತ್ತ ಇರುವರು ಎಂಬುದು
ಪ್ರಪಂಚದ ದೊಡ್ಡ ಅದ್ಭುತವಲ್ಲವೇ
22
ಮೋಸ
======
ಯುಗ ಯುಗಗಳಿಂದಲೂ ಮೋಸ ಮಾಡುತ್ತ ಬಂದ
ಗಂಡು
ಕರೆಯಬಹುದು ಅವನನ್ನು ಮೋಸಗಾರನೆಂದು.
ಯುಗ ಯುಗಗಳಿಂದಲೂ ಮೋಸ ಹೋಗುತ್ತಲೇ ಬಂದ
ಹೆಣ್ಣು
ಮತ್ತೆ ಮೋಸ ಹೋದರೆ ಕರೆಯಬಹುದೇ ಅವಳನ್ನು ....
ಅಮಾಯಕಳೆಂದು?
23
ಇಂದಿನ ಜೀವನ
========
ಪ್ರತಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ತಪ್ಪು . ಯಾವುದೇ ವಿಷಯಕ್ಕು ಎಷ್ಟು ಬೇಕೊ ಅಷ್ಟೇ ಪ್ರಾಧಾನ್ಯತೆಯನ್ನು ಕೊಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.
24
Dirty fellow ಬಯ್ದರೂ ತಲೆಬಗ್ಗಿಸಿ ಕೂತಿದ್ದವರು
ಕೊಳಕು ಮುಂಡೇದೆ... ಅಂದ ತಕ್ಷಣ ಜಗಳಕ್ಕೆ ಬರೋದು ಅದ್ಯಾಕೋ ?
25
ನಿಮ್ಮ ಕೆಲಸವನ್ನು ಪ್ರೀತಿಸಿ.....
ಈ ದಿನ ತಿಂಗಳ ಕಡೇ ದಿನ, ಯಥಾ ಪ್ರಕಾರ ಒಂದು ಸೆಕ್ಷನ್ ನಲ್ಲಿ ಕೆಲಸಗಾರರೊಬ್ಬರು ರಿಟೈರ್ಡ್ ಆಗುತ್ತಿದ್ದರು, ನಾನು ಎರಡು ವರ್ಷಗಳ ಕಾಲ ಅದೇ ಸೆಕ್ಷನ್ ಗೆ ಅಧಿಕಾರಿಯಾಗಿದ್ದವನು, ಹಾಗಾಗಿ ನನ್ನನ್ನೂ ಕರೆದಿದ್ದರು. ಯಥಾಪ್ರಕಾರ ಎಲ್ಲ ವಿಧಿಗಳು ಮುಗಿದ ನಂತರ ಕಡೆಯಲ್ಲಿ ಆತ ಮಾತನಾಡಿ. ಕಡೆಯಲ್ಲಿ ಒಂದು ಮಾತು ಹೇಳಿದರು,
"ನೀವು ಮಾಡುವ ಕೆಲಸವನ್ನು ಪ್ರೀತಿಸಿ, ಆಗ ಬರುವ ಎಂತದೇ ಸಮಸ್ಯೆಗಳನ್ನು ಬಗೆಹರಿಸುವುದು ಸುಲುಭ ಅನ್ನಿಸುತ್ತೆ...."
ನಿಜವಲ್ಲವೇ , ಬಹಳಷ್ಟು ಜನ ತಾವು ಮಾಡುವ ಕೆಲಸವನ್ನು ಪ್ರೀತಿಸುವದೇ ಇಲ್ಲ, ದಿನ ನಿತ್ಯ ಸಾವಿರ ಗೊಣಗಾಟಗಳು ಅತೃಪ್ತಿ, ತನಗೆ ಸಿಕ್ಕಿರುವ ಕೆಲಸ ಸರಿ ಇಲ್ಲ, ನನ್ನ ಓದಿಗೆ ತಕ್ಕದಾಗಿಲ್ಲ .... ಮಾನೋಟನಸ್ ಬೇಸರ, ...... ಹೀಗೆ. ನಾವು ಮಾಡುವ ಕೆಲಸದಲ್ಲಿ ಯಾವ ಪ್ರೀತಿಯೂ ಇಲ್ಲದೇ ನಾವು ಹೇಗೆ ನಮ್ಮ ಕೆಲಸಕ್ಕೆ ನ್ಯಾಯ ಒದಗಿಸಬಲ್ಲೆವು? ನಮ್ಮ ಸಂಬಳಕ್ಕೆ ನ್ಯಾಯ ಒದಗಿಸಬಲ್ಲೆವು ಅಲ್ಲವೇ.
ನಮಗೆ ದಾರಿ ತೋರಲು ,ಕರೆ ಕೊಡಲು ದೊಡ್ಡ ದೊಡ್ಡ ವ್ಯಕ್ತಿಗಳು, ನಾಯಕರೇ ಆಗಬೇಕಿಲ್ಲ ನಾವು ಗ್ರೂಪ್ 'C' ಎಂದು ಕರೆಯುವ ಕೆಲಸಗಾರರು ತಿಳಿದಿರುತ್ತಾರೆ, ಆದರೆ ಕೇಳಿಸಿಕೊಳ್ಳುವರು ಇರುವದಿಲ್ಲ , ಈಗೀಗ ಎಲ್ಲರೂ 'ವಿಮರ್ಶಕರೇ'
ಚಿತ್ರಗಳು
DRINK AND DRIVE :https://fbcdn-sphotos-c-a.akamaihd.net/hphotos-ak-frc3/p480x480/1452469_...
ಸೀರಿಯಲ್ ಹುಚ್ಚು : https://fbcdn-sphotos-f-a.akamaihd.net/hphotos-ak-ash4/p480x480/1450086_...
Comments
ಉ: ಸಾಲುಗಳು - 3 (ನನ್ನ ಸ್ತೇಟಸ್)
ಪಾರ್ಥ ಸರ್,
ಇದು ಕೇವಲ ನಿಮ್ಮ ಸ್ಟೇಟಸ್ ಅಲ್ಲ ಎಲ್ಲರ ಸ್ಟೇಟಸ್ ಆಗಿದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ಸಾಲುಗಳು - 3 (ನನ್ನ ಸ್ತೇಟಸ್) by makara
ಉ: ಸಾಲುಗಳು - 3 (ನನ್ನ ಸ್ತೇಟಸ್)
ಹೌದು ಶ್ರೀಧರ್ ಸಾರ್ ಈದೀಗ ಬಹುಶಃ ಈ ಭಾವಗಳು ಎಲ್ಲರ ಸ್ಟೇಟಸ್ ಆಗಿದೆ !
ಉ: ಸಾಲುಗಳು - 3 (ನನ್ನ ಸ್ತೇಟಸ್)
ಎಂದಿನಂತೆ ಸೂಪರ್ ಸಾಲುಗಳು. ಚಿತ್ರಗಳೂ ಸಹ.
೨೧ ಸಾಲುಗಳು.... ಅದ್ಭುತ ಅಲ್ಲ- ಸಹವಾಸ ದೋಷ :)