"ತಂಗಿಗೆ ಆಣ್ಣನ ಹಾರೈಕೆ "
ನೀನಾಗು ಸ್ವಾತಿ ಮುತ್ತಿನ ಮಳೆ ಹನಿಯ ಹಾಗೆ,
ನೀನಾಗು ಮುಂಜಾನೆ ಸೂರ್ಯನ ಕಿರಣದ ಹಾಗೆ,
ನೀನಾಗು ಮರುಭೂಮಿಯಲ್ಲಿನ ಮಳೆ ಹನಿಯ ಹಾಗೆ,
ನೀನಿರು ಸದಾ ಸ್ನೇಹ ಜೀವಿಯ ಹಾಗೆ,
ನೀನಾಗು ಸಮುದ್ರದ ತೆರೆಯ ಹಾಗೆ,
ಆದರೆ ಯಾರನ್ನೂನೋಯಿಸಬೇಡ ,
ನಿನಗೆ ಅಸತ್ಯ ಕಂಡು ಬಂದರೆ ಅದಕ್ಕೆ ಹೂಂದಿಕೂಳ್ಳಬೇಡ,
ನೀನಾಗು ಸತ್ಯಕ್ಕೆ ಶರಣು,ನೀನಾಗದಿರು ಸುಳ್ಳಿಗೆ ಶರಣು,
ಇದು ನಾನು ನನ್ನ ತಂಗ್ಗಿಗೆ ಹೇಳತ್ತಿರುವ,
ಹಾರೈಕೆಯ ಮಾತು.
Rating
Comments
ಉ: "ತಂಗಿಗೆ ಆಣ್ಣನ ಹಾರೈಕೆ "
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
' ತಂಗಿಗೆ ಅಣ್ಣನ ಹಾರೈಕೆ' ಕವನ ಓದಿದೆ.ಬಹಳ ಭಾವನಾತ್ಮಕವಾಗಿ ತಂಗಿಗೆ ಕಿವಿಮಾತು ಹೇಳುವ ನಿಮ್ಮ ಭಾವನಾತ್ಮಕ ಶೈಲಿ ಹಿಡಿಸಿತು, ಹೀಗೆಯೆ ಬರೆಯುತ್ತ ಹೋಗಿ ಜೊತೆ ಜೊತೆಗೆ ಅವುಗಳನ್ನು ಒಂದು ಕಡೆಗೆ ಸಂಗ್ರಹಿಟ್ಟುಕೊಳ್ಳುತ್ತ ಹೋಗಿ ಮುಂದೆ ನಿಮಗೆ ಸಂಕಲನ ರೂಪದಲ್ಲಿ ತರಬೇಕೆನಿಸಿದಾಗ ಸಹಾಯಕ್ಕೆ ಬರುತ್ತೆ, ಧನ್ಯವಾದಗಳು.