ಸಾಮಾಜಿಕ ಜಾಲತಾಣ - ೧

ಸಾಮಾಜಿಕ ಜಾಲತಾಣ - ೧

"ಏ ಮಗ ಅಲ್ಲಿ ನೋಡೋ ಏನೋ ಫಿಗರ್ ಅದು , ಶಿಷ್ಯ ಪಕ್ಕದು ನೋಡೋ ಏನು ಕಲರ್ , ಮಗ ಬಾರೋ ಮಾತಾಡಿಸೋಣ " ಅಂತ ಹೇಳುತ್ತಾ ಶರ್ಟ್ ಜೇಬ್ಬ್ ಇಂದ ಮೊಬೈಲ್ ತೆಗೆದು ಕೊಳುತ್ತ ಒಬ್ಬ ರೋಡ್ ರೋಮಿಯೋ ಹೇಳಿದ.

ಇದನ ಕೇಳಿದ ಪಕದವ " ಉ ಮಚ್ಚಿ , ಸೂಪರ್ ಫಿಗರ್ಸ್ , ಅದು ಈ ಸೌಥೆಂಡ್ ಸರ್ಕಲ್ ಸಿಗ್ನಲ್ ನಲ್ಲಿ ಇಂತ beauties " ಅಂತ ಕೈ ಅಲ್ಲಿ ಹಿಡಿದೀದ್ದ ಸಿಗ್ರಟ್ಟೆ ನೆಲದ ಮೇಲೆ ಹಾಕಿ ಕಾಲಿಂದ ತುಳಿತ್ತಾ ಇನ್ನೊಬ ಹೇಳಿದ.

"ಮಚ್ಚಿ ಬಾರೋ ಸಿಗ್ನಲ್ ಬಿಡೋ ಅಷ್ಟರಲ್ಲಿ ಅ ಫಿಗರ್ಸ್ ನ ಮಾತಾಡಿಸಿ ಬಿಡೋಣ , ಯಾರನದರು ಪಟ್ಟೈಸಿ ಬಿಡೋಣ " ಅಂತ ಹೇಳುತ್ತಾ ಇಬ್ಬರು ಹುಡುಗರು ಸಿಗ್ನಲ್ ದಾಟೋಕ್ಕೆ ನಿಂತಿದ್ದ ಮೂರ ಜನ ಹುಡುಗಿರತ್ತ ನಡೆದರೂ. ಇವರು ತಮ್ಮ ಹತ್ತಿರ ಬರುವುದನ ಗಮನಿಸಿದ ಹುಡುಗಿಯರಿಗೆ ಗಾಬರಿ ಆಗಲು ಶುರುವಾಯಿತು. ಆ ಹುಡುಗಿಯರ ಹಿಂದೆ ಒಬ್ಬ ಹುಡುಗ ನಿಂತಿದ್ದ , ಅವನು ತನ್ನ ಮೊಬೈಲ್ನ ಈ ಹುಡುಗರು ಬರುವ ಕಡೆಗೆ ಹಿಡಿದು ಫೋಟೋಗ್ರಾಫರ್ನಂತೆ ನಿಂತಿದ್ದ.

ಆ ಇಬ್ಬರು ಹುಡುಗರು ಹುಡುಗಿಯರ ಹಿಂದೆ ಬಂದು ನಿಂತರು. " ನೋಡೋ ಮಚ್ಚಿ , ನಾವು ಬಂದಿದಕ್ಕೆ ಒಳ್ಳಗೆ ಒಳ್ಳಗೆ ಖುಷಿ ಪಡುತ್ತಾ ಇವೆ ಹಕ್ಕಿಗಳು , ಬಾರೋ ಮಾತಾಡಿಸೋಣ ಅಂತ ಹೇಳುತ್ತಾ ಒಬ್ಬ ಹುಡುಗ ಒಬ್ಬ ಹುಡುಗಿಯ ಹಿಂದಕ್ಕೆ ತನ್ನ ಕೈ ಇಂದ ಮುಟ್ಟಿದ. ಹುಡುಗಿ ಗಾಬರಿ ಆಗಿ ತುಸು ಮುಂದೆ ಹೋದಳು. ತಮ್ಮ ಹಿಂದೆ ಬಂದು ನಿಂತ ದಡುತ್ತಿ ಕಾಯದ ಹುಡುಗರನ ತಿರುಗಿ ನೋಡಿದ ಒಬ್ಬಳು ಹುಡುಗಿಯಾ ಕಾಲು ಗಳು ನಡುಗಲು ಶುರುವಾದವು. ಹೆಲ್ಪ್ ಹೆಲ್ಪ್ ಅಂತ ಕೂಗಿ ಕೊಳೋಣ ಅಂತ ಯೋಚಿಸುತ್ತ ಇದ್ದಳು. ಈವ್ ಟೀಸಿಂಗ್ ಅನ್ನೋದು ಒಂದು ಸಾಮಾಜಿಕ ಪಿಡುಗು ಹಾಗಿದೆ. ಅದನ ಅನುಭವಿಸಿದ ಮತು ಅನುಭವಿಸುತ್ತ ಇರುವ ಹುಡುಗಿಯರ ಕಷ್ಟ ಹೇಳತಿರದು.

ಇನ್ನು ಒಬ್ಬ ಹುಡುಗ "ಯಾಕ ಬುಲ್ ಬುಲ್ ಮಾತಾಡಕಿಲ್ಲವ " ಅಂತ ಹೇಳುತ್ತಾ ಒಬ್ಬ ಹುಡುಗಿಯ ಕಣ್ಣು ಮುಂದಕ್ಕೆ ಕೈ ಚಾಚ್ಚಿದ. ಅಷ್ಟರಲ್ಲಿ ಸಿಗ್ನಲ್ ಬಿಟ್ಟು ಮೂರ ಜನ ಹುಡುಗಿಯರ ಅಲ್ಲಿಂದ ವೇಗವಾಗಿ ನಡೆದು ಮುಂದಕ್ಕೆ ಹೋದರು. ಇದ್ದನೆಲ್ಲ ಒಬ್ಬ ಹುಡುಗ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡ , ಅವನೇ ಶಂಕರ ದಿ ಸಾಫ್ಟ್ವೇರ್ ಇಂಜಿನಿಯರ್.

ಈ ರೀತಿಯ ಘಟನೆ ಗಳು ಬೆಂಗಳೂರಿನಲ್ಲಿ ದಿನ ನಿತ್ಯ ಎಷ್ಟೋ ನಡಿಯುತ್ತ ಇರುತ್ತೆ ಅದು ಬಿಡಿ. ಶಂಕರ್ ತಾನು ರೆಕಾರ್ಡ್ ಮಾಡಿದ ವೀಡಿಯೊವನು ಫೇಮಸ್ ಸೋಶಿಯಲ್ ಮೀಡಿಯಾ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ. ಅವನು ಅಪ್ಲೋಡ್ ಮಾಡಿ ಅರ್ಧ ಗಂಟೆ ಒಳ್ಳಗೆ ಅದಕ್ಕೆ ನೂರ್ ಲೈಕ್ಸ ಬಂದವು. ಈ ವೀಡಿಯೊ ನ ನೋಡಿದ ಶಂಕರನ ಸ್ನೇಹಿತ ಅರವಿಂದ್ ಅವನಿಗೆ ಪರಿಚಯ ಇದ್ದ ಇನ್ಸ್ಪೆಕ್ಟರ್ ಶ್ರೀಕಾಂತ್ ಪಾಟಿಲ್ ಗೆ ಶೇರ್ ಮಾಡಿದ. ಶ್ರೀಕಾಂತ್ ಪಾಟಿಲ್ ವೀಡಿಯೊವನ ನೋಡಿ ತನ್ನ ಸುಪೀರಿಯರ್ ಒಪ್ಪಿಗೆ ಪಡೆದು ಈ ಕೇಸ್ ನ ಇನ್ವೆಸ್ಟಿಗೇಷನ್ ಮಾಡೋಕ್ಕೆ ಡಿಸೈಡ್ ಮಾಡಿದ. ಸಾರ್ವಜನಿಕರ ಪ್ರತಿಕಿರ್ಯೇ ನೋಡಿದ ಶ್ರೀಕಾಂತ್ ಸುಪೀರಿಯರ್ ಇನ್ವೆಸ್ಟಿಗೇಷನ್ ಗೆ ಅಸ್ತು ಅಂದರು.

ಶ್ರೀಕಾಂತ್ ಸೈಬರ್ ಪೋಲಿಸ್ ಗೆ ಈ ವೀಡಿಯೊ ಕಳಿಸಿ , ಅದರಲ್ಲಿ ಈವ್ ಟೀಸಿಂಗ್ ಮಾಡಿದ ಹುಡುಗರ ಫೋಟೋ ಎಕ್ಷಟ್ರಾಕ್ಟ ಮಾಡಿ ತಮ್ಮಗೆ ಕಳಿಸುವಂತೆ ಕೋರಿದ. ಇನ್ಸ್ಪೆಕ್ಟರ್ ಶ್ರೀಕಾಂತ್ ಕೇಳಿದ ಹಾಗೆ ಸೈಬರ್ ಪೋಲಿಸ್ ಫೋರೆನ್ಸಿಕ್ ಲ್ಯಾಬ್ ಎಕ್ಸ್ಪರ್ಟ್ಸ ಗಳ ಸಹಾಯದಿಂದ ಈವ್ ಟೀಸಿಂಗ್ ಮಾಡಿದ ಹುಡುಗರ ಫೋಟೋ ಎಕ್ಷಟ್ರಾಕ್ಟ ಮಾಡಿ ಕಳಿಸಿತು. ಶ್ರೀಕಾಂತ್ ಫೋಟೋ ಗಳನ ಹಿಡಿದು RTO ಆಫೀಸ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಡಾಟಾ  , ಎಲೆಕ್ಷನ್ ಬೋರ್ಡ್ ನಲ್ಲಿ ವೋತೆರ್ ID  ಡಾಟಾ ಸಹಾಯದಿಂದ ಫೋಟೋ ಟ್ರ್ಯಾಕ್ ಮಾಡಿಸಿದರು. ಇಬ್ಬರು ಹುಡುಗರ ಅಡ್ರೆಸ್ ಕಲೆಕ್ಟ್ ಮಾಡಿ ಅವರ ಪತ್ತೆ ಮಾಡಿದರು. ಆಮೇಲೆ ಅರೆಸ್ಟ್ ಮಾಡಿದರು. ಇದೆಲ್ಲ ಟಿವಿ ವಾಹಿನಿ ಗಳಲ್ಲಿ ಪ್ರಚರವಾದವು. ನ್ಯೂಸ್ ಪೇಪರ್ ಗಳಲ್ಲಿ ಬಂದವು. ಆದರೆ ನಮ್ಮ ಕಾನೂನಿನಲ್ಲಿ ಈ ತಪ್ಪಿಗೆ ಅಂತ ದೊಡ್ಡ ಶಿಕ್ಷೆ ಇಲ್ಲ , ಆ ಹುಡುಗರಿಗೆ ತಲಾ ಒಂದು ಸಾವಿರ ಫೈನ್ ಹಾಕಿ ಬಿಟ್ಟು ಕಳಿಸಿದರು.

ಫೇಸ್ಬುಕ್ ಅನ್ನೋ ಈ ಸೋಶಿಯಲ್ ಮೀಡಿಯಾ ದಿಂದ ಇಂತಹ ಕೃತ್ಯ ಗಳನ ಬಯಲು ಮಾಡಲು ಆಗಿದೆ. ಸಾಮಾಜಿಕ ಬದಲಾವಣೆಯು ಸಾಧ್ಯ ಆಗಿದೆ , ಅದನ ಮತ್ತೆ ಮುಂದೆ ಚರ್ಚೆ ಮಾಡೋಣ.

ಶಂಕರ್ ಒಂದು ದೊಡ್ಡ ಸಾಫ್ಟ್ವೇರ್ ಕಂಪನಿ ಅಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾ ಇದ್ದಾನೆ. ಅವನು ಹುಟ್ಟಿ ದೊಡ್ಡವನು ಆಗಿದು ಈ ಮಹಾನಗರಿ ಬೆಂಗಳೂರಿನಲ್ಲಿ. ಅಪ್ಪ ಅಮ್ಮ ಇಬ್ಬರು ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾ ಇದ್ದಾರೆ. ಶಂಕರ್ ಈಗಿನ ಸಮಾಜದ ಚಿಂತನೆಗಳನ ಉಳ್ಳವನು. ಅವನಿಗೆ ಸೋಶಿಯಲ್ ಮೀಡಿಯಾ ನು ಗೊತ್ತು , ಮಾಲ್ ಸಂಸುಕ್ರುತಿ ಕೂಡ ಗೊತ್ತು. ಬೆಂಗಳೂರ್ ಅಂತ ಸಿಟಿಲ್ಲಿ  ಇದ್ದವನಿಗೆ ಮಾಲ್ ಸಂಸ್ಕುರ್ತಿ ಗೊತ್ತು ಇರದ ವಿಷಯ ವೇನು ಅಲ್ಲ ಅನುತ್ತಿರ . ಪೀಟಿಕೆ ಜಾಸ್ತಿ ಆಯಿತು ಅನಿಸುತ್ತೆ.

"ಲೋ ಶಂಕರ , ಏನೋ ಮಾಡುತ್ತಾ ಇದಿಯ , ರೂಂ ಒಳ್ಳಗೆ ಸೇರಿಕೊಂಡು ಯಾವಾಗಲು ಆ ಹಾಳಾದ ಕಂಪ್ಯೂಟರ್ ಮುಂದೆ ಇರುತ್ತಿಯಲ್ಲೋ , ಬಾರೋ ಆಚೆ , ಹೋಗಿ ಸ್ವಲ್ಪ ಹೊರಗಡೆ ತಿರುಗಾಡಿ ಕೊಂಡು ಬಾರೋ , ಅದೇನು ಹುಡುಗ ನೋ ಏನೋ , ಸೊಂಟ ಗಿಂಟ ನೋವು ಬರೋಲ್ಲವ ಇದಕ್ಕೆ " ಅಂತ ಶಂಕರನ ಅಮ್ಮ ಅಡುಗೆ ಮನೆ ಇಂದ ಗೊಣಗುತ್ತ ಇದ್ದರು. ಇದನ ಕೇಳಿ ರೂಂ ಬಾಗಿಲು ತೆಗೆದು ಹೊರ ಬಂದ ಶಂಕರ
"ಏನಮ್ಮ ಅದು , ಗೊಣಗುತ್ತ ಇದಿಯ , ಯಾಕಮ ಏನು ಆಯಿತು " ಅಂತ ಆಕಳಿಸುತ್ತಾ ಅಡುಗೆ ಮನೆ ಕಡೆ ನಡೆದ.

"ಲೋ ಮಗನೆ , ನಾಳೆ ಊರಿಂದ ನಿಮ್ಮ ಮಾವನ ಮಗಳು ಶಾಲಿನಿ ಬರುತ್ತಾ ಇದ್ದಾಳೆ , ನೀನು ಬೆಳ್ಳಿಗೆ ನೆ ಮೆಜೆಸ್ಟಿಕ್ ಗೆ ಹೋಗಿ ಅವಳನ ಮನೆಗೆ ಕರೆದು ಕೊಂಡು ಬಾ , ಮರೆತು ಹೋಗಿ ಬಿಟ್ಟಿಯ ಜೋಕ್ಕೆ , ಆ ಹುಡುಗಿ ಇದೆ ಮೊದಲು ಬೆಂಗಳೂರಿಗೆ ಬರುತ್ತಾ ಇರೋದು , ಭಯ ಆದಳು"

" ಸರಿ ಕಣಮ್ಮ " ಅಂತ ಹೇಳಿ ಶಂಕರ ಮತ್ತೆ ಹೋಗಿ ರೂಂ ಬಾಗಿಲು ಹಾಕಿ ಕೊಂಡ.