ಬಾಳಿನ ಏಳು ಬೀಳು (ಶ್ರೀ ನರಸಿಂಹ 73)

ಬಾಳಿನ ಏಳು ಬೀಳು (ಶ್ರೀ ನರಸಿಂಹ 73)

ಉಂಡು ಎಸೆದ ಎಲೆಯಂತೆ ನಡೆಯುತಿಹುದೆಮ್ಮ ಬಾಳು

ಮೇಲೊಮ್ಮೆ, ಕೆಳಗೊಮ್ಮೆ  ಅಂತೆಮ್ಮ ಬಾಳ ಏಳು ಬೀಳು

ಗಾಳಿಯಿಂದಲೆಲೆ ಉಪ್ಪರಿಗೆಯಲೊಮ್ಮೆ,, ತಿಪ್ಪೆಯಲೊಮ್ಮೆ

ವಿಧಿಯ ಆಟದಿಂದಲೆಮ್ಮ ಬಾಳು ಮೇಲೊಮ್ಮೆ,,ಕೆಳಗೊಮ್ಮೆ

 

ನಡೆಯುವ ಹಾದಿಯೊಳು ಏರು, ಇಳಿಜಾರುಗಳಿರುವಂತೆ

ಸಹಜ  ಬಾಳಿನ ಪಥದಲ್ಲಿ ಏಳು, ಬೀಳುಗಳೆಂಬುವವಂತೆ

ಏಳ್ಗೆಯಲಿರುವಾಗ ನೀ ದೈವವ  ಮರೆತು ಅಹಮಿಸದಿರು

ಕಷ್ಟಗಳು ಬಂತೆಂದು ದೈವವ ನಿಂದಿಸುತಲಿ ಕೊರಗದಿರು

 

ವಿಧಿಯ ಲಿಖಿತದಂತೆ ಬಾಳಿನ ಪಥದಲ್ಲಿ ಏಳು,ಬೀಳುಗಳಿಹವು

ವಿಧಿಯ ಬರಹವ ಬದಲಿಸೆ ಪಡೆ ನೀ ಶ್ರೀ ನರಸಿಂಹನ ಒಲವು

Rating
No votes yet

Comments

Submitted by kavinagaraj Tue, 12/17/2013 - 10:21

ಸ ಕಿಲ್ಬಿಷಮತ್ರ ಸಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)
[ಅತ್ರ] ಈ ಈಶ್ವರೀಯ ನ್ಯಾಯವಿಧಾನದಲ್ಲಿ [ಕಿಲ್ಬಿಷಂ] ಯಾವ ಒಡಕೂ, ದೋಷವೂ ಇಲ್ಲ. [ಆಧಾರಃ ನ ಅಸ್ತಿ] ಬೇರೆ ಯಾವ ಆಧಾರವೂ ಇಲ್ಲ. [ಯತ್ ಮಿತ್ರೈಃ ಸಮ್] ಸ್ನೇಹಿತರ ಮಧ್ಯೆ ಸೇರಿಕೊಂಡು [ಅಮಮಾನ ಏತಿ] ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ [ನ] ಇಲ್ಲ. [ನ ಏತತ್ ಅನೂನಂ ಪಾತ್ರಮ್] ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ [ನಿಹಿತಮ್] ಗೂಢವಾಗಿ ಇಡಲ್ಪಟ್ಟಿದೆ. [ಪಕ್ವಃ] ಬೇಸಿದ ಅನ್ನ, ಕರ್ಮಫಲವಿಪಾಕ [ಪಕ್ತಾರಮ್] ಅದನ್ನು ಪಾಕ ಮಾಡಿದವನನ್ನು ಪುನಃ [ಆ ವಿಶಾತಿ] ಮರಳಿ ಪ್ರವೇಶಿಸಿಯೇ ತೀರುತ್ತದೆ.
"ಮಾಡಿದ್ದುಣ್ಣೋ ಮಹರಾಯ"! ವಿಧಿಲಿಖಿತಕ್ಕೆ ಕಾರಣರು ನಾವೇ!!

Submitted by sathishnasa Tue, 12/17/2013 - 21:49

In reply to by kavinagaraj

>>>"ಮಾಡಿದ್ದುಣ್ಣೋ ಮಹರಾಯ"! ವಿಧಿಲಿಖಿತಕ್ಕೆ ಕಾರಣರು ನಾವೇ!!<<< ಸತ್ಯವಾದ ಮಾತು ನಾಗರಾಜ್ ರವರೇ, ಧನ್ಯವಾದಗಳೊಂದಿಗೆ....ಸತೀಶ್

Submitted by ಗಣೇಶ Tue, 12/17/2013 - 23:45

ಏಳ್ಗೆಯಲಿರುವಾಗ ನೀ ದೈವವ ಮರೆತು ಅಹಮಿಸದಿರು
ಕಷ್ಟಗಳು ಬಂತೆಂದು ದೈವವ ನಿಂದಿಸುತಲಿ ಕೊರಗದಿರು
ಸತೀಷರೆ, ಏಳ್ಗೆಯಲ್ಲಿರುವಾಗ ದೈವದ ನೆನಪೇ ಬರುವುದಿಲ್ಲ..ಅದೇ ಕಷ್ಟ.

Submitted by sathishnasa Wed, 12/18/2013 - 21:17

In reply to by ಗಣೇಶ

ನಿಮ್ಮ ಮಾತು ನಿಜ ಗಣೇಶ್ ರವರೇ ಸಂಕಟ ಬಂದಾಗ ತಾನೆ ಎಲ್ಲರು " ವೆಂಕಟರಮಣ " ನನ್ನು ನೆನೆಯುವುದು . ಧನ್ಯವಾದಗಳೊಂದಿಗೆ....ಸತೀಶ್