ಅಂಕೆಯ ಅಳು
---ಅಂಕೆಯ ಅಳು----
ಬಾಲ್ಯದಲ್ಲಿ ನನ್ನಲ್ಲಿದ್ದ
ಹರಿದ ಮಗ್ಗಿ ಪುಸ್ತಕದ ಮಗ್ಗುಲಿನ ಅಂಕೆಗಳು ಅಳುತ್ತಿವೆ,,,,
ಕಾರಣ ಇಷ್ಟೇ,,,
ಈಗ
ಯಾವುದೊ ದೇಶದವನು ನನಗೆ ಕೊಟ್ಟ ಸಂಬಳ ಎಣಿಸುವಾಗ
ಅವುಗಳ ಮೆಲುಕುಹಾಕುತ್ತೇನಲ್ಲ,
-----ಗೌರಿ----
ನನ್ನ ಮನೆಯ ಮುದ್ದು ಹಸು ಗೌರಿ,,,
ಮೊನ್ನೆ,,,,,, ಹಾಲು ಕೊಡುವ ತಳಿ ಅಲ್ಲವೆಂದು ಹುಸೇನಣ್ಣನಿಗೆ ಮಾರಿದರು,,
ನಿನ್ನೆ,,,,, ನನ್ನ ಅಕ್ಕ ಹೇಳಿದಳು, ಆಕೆಗೆ ಎದೆ ಹಾಲು ನಿಂತಿತಂತೆ,,,,