ಮೂಷಿಕ ವದನ

ಮೂಷಿಕ ವದನ

        ಎಲ್ಲರಿಗು ತಿಳಿದಂತೆ ಮೂಷಿಕ ಗಣಪತಿ ದೇವರ ವಾಹನ. ಆದರೆ ಮೂಷಿಕ ಮನೆಯಲಿ ಸೇರಿಕೊಂಡರೆ ಆಗೋ ಪಜೀತಿ ಅಷ್ಟು ಇಷ್ಟು ಅಲ್ಲ. ಬಟ್ಟೆ , ದಿನಸಿ ಸಾಮಾನು ತುಂಬಿರುವ ಕವರ್ ಎಲ್ಲವು ಅದರ ಪಾಲು ಆಗುತೆ. ಮೂಷಿಕನ ಹೊಡೆಯೋದು ಅಥವಾ ಹಿಡಿಯುವುದು ಕೂಡ ಅಷ್ಟು ಸುಲಭ ಕೆಲಸವಲ.

ಒಮ್ಮೆ ನಾನು ಯಾವುದೊ ಕೆಲಸದ ಮೇರೆಗೆ ನನ್ನ ಸ್ನೇಹಿತ ಅಶೋಕ್  ಮನೆಗೆ ಹೋಗಬೇಕಾಗಿ ಬಂತು. ಅವನ ಮನೆ ಸಿಂಗಲ್ ಬೆಡ್ರೂಮ್ ಇರುವಂಥದು. ಆ ಸಿಂಗಲ್ ರೂಮಿನಲ್ಲೇ ಅವನ ಮತ್ತು ಅವನ ಅರ್ಧಾಂಗಿ ಸುಮಾ ರ ಬಟ್ಟೆ ಮತ್ತು ಇತ್ತರೆ ಮನೆ ಸಾಮನುಗಳ್ಳನೆಲ್ಲ ಇಟ್ಟಿರುತ್ತಾರೆ. ಜೊತೆಯಲ್ಲಿ ಅಶೋಕನ ತಮ್ಮ ಶ್ರೀಧರ್ ಗೆ ಸಂಬಂಧ ಪಟ್ಟ ವಸ್ತುಗಳು ಇವೆ. ನಾನು ಅಶೋಕ್ ಮನೆಗೆ ಹೋದಾಗ ಈ ಮೂವರು ಯಾವುದೊ ದೊಡ್ಡ ಕಾರ್ಯ ಮಾಡುತಿರುವಂತೆ ಕೂಗು ಆಡುತ್ತಾ ಇದ್ದರು. ಅಶೋಕನ ಕೈ ಅಲ್ಲಿ ಒಂದು ದೊಣ್ಣೆ , ಸುಮಾ ಕೈ ಅಲ್ಲಿ ಒಂದು ಪರಕೆ , ಶ್ರೀಧರ್ ಕೈ ಅಲ್ಲಿ ಒಂದು ಬೆಡ್ ಶೀಟ್ ಇತ್ತು. ನಾನು ಇವರ ಕೈ ಅಲ್ಲಿ ಇದ್ದ ವಸ್ತುಗಳನ ನೋಡಿ ಒಮ್ಮೆ ಗಾಬರಿ ಆದೆ , ಎಲ್ಲಿ ನನ್ನ ಗ್ರಹಚಾರ ಕೆಟ್ಟಿದೆಯೋ ಅಂತ . ಯಾಕಪ್ಪ ಬಂದೆ ಅಂದು ಕೊಂಡು ಅವರ ಮನೆ ಒಳ್ಳಗೆ ಹೋದೆ. ನಾನು ಬಂದಿದನು ನೋಡಿದ ಸುಮಾ ನನ್ನನು ನಗು ಮುಖದಿಂದಲೇ ಸ್ವಾಗತಿಸಿದಳು. ಅಶೋಕ್ ಕೂಡ ಅಷ್ಟೇ ಪ್ರೀತಿಯಿಂದ ಬರ ಮಾಡಿಕೊಂಡನು. ನಾನು ಇವರ ಕೈ ಅಲ್ಲಿ ಇದ್ದ ವಸ್ತು ಗಳ ಬಗೆ ಕೇಳಿದೆ , ಅದಕ್ಕೆ ಅಶೋಕ್ ಮೂಷಿಕ ವಧನಕೆ ಸಿದ್ದರಾಗಿರುವುದನ ಹೇಳಿದ. ನೀನು ಒಂದು ಕೈ ಜೋಡಿಸು ಅಂತ ಹೇಳಿದ. ನಾನು ಈ ಸಾಹಸಕೆ ಕೈ ಹಾಕಿದೆ. ನನ್ನ ಕೈ ಗೆ ಸುಮಾ ಒಂದು ಮಗಚ್ಚೆ ಕೈ ತಂದು ಕೊಟ್ಟಳು. ಎಲ್ಲರು ರೂಮಿನ ಒಳ್ಳಗೆ ಹೋದೆವು. ಶ್ರೀಧರ್ ರೂಮಿನ ಬಾಗಿಲು ಹಾಕಿದ. ನಾಲ್ಕು ಜನರು ಸ್ಕ್ವೇರ್ ಆಕರದಲ್ಲಿ ನಿಂತೆವು.

ಮೂಷಿಕ ನಾಲ್ವರ ಮಧ್ಯ ಓಡುತ್ತಾ ಬಂತು. ಶ್ರೀಧರ ಅದನ ಬೆಡ್ ಶೀಟ್ನಲ್ಲಿ ಹಿಡಿಯೋದಕ್ಕೆ ಅಂತ ಒಂದೇ ಡೈವ್ ಅದರ ಕಡೆ ಹಾಕಿದ , ಆದರೆ ಮೂಷಿಕ ಸಿಗದೇ ಮಂಚದ ಕೆಳಗೆ ಓಡಿ ಹೋಯಿತು. ಶ್ರೀಧರ್ ನೆಲದ ಮೇಲೆ ಡೈವ್ ಹಾಕಿದ ರಭಸಕೆ ಅವನ ಮುಖಕೆ ಪೆಟ್ಟು ಬಿದ್ದು ಅವನ ಮುಖ ಚಹರೆ ಆಂಜನೇಯನಂತೆ ಆಯಿತು. ಅವನು ನೋವು ತಾಳಲಾರದೆ ಬೆಡ್ ಶೀಟ್ ಇಂದ ಮುಖ ಮುಚ್ಚಿಕೊಂಡು , ಮೂಷಿಕನಿಗೆ ಶಾಪ ಹಾಕುತ್ತ ಮೇಲೆ ಇದನು. ಅಶೋಕ ಮಂಚದ ಕೆಳಕ್ಕೆ ಬಾಗಿ ತನ್ನ ಕೈ ಅಲ್ಲಿ ಇದ್ದ ದೊಣ್ಣೆ ಇಂದ ನೆಲಕ್ಕೆ ಜೋರಾಗಿ ಬಡಿದನು, ಅದರ ಶಬ್ದಕ್ಕೆ ಮೂಷಿಕ ಮಂಚದ ಒಳ್ಳಗಿಂದ ಹೊರಗೆ ಬಂತು. ಅಶೋಕ ಅದನ ಹೊಡೆಯಲು ವೇಗವಾಗಿ ಸುಮಾ ಬಾಗಿಲು ತೆಗಿ ಬೇಡ ಅಂತ ಕೂಗುತ್ತ ಹೆಜ್ಜೆ ಇಟ್ಟನು, ನೆಲದ ಮೇಲೆ ನೀರು ಇರುವುದನ ಗಮನಿಸದೆ ಹೆಜ್ಜೆ ಇಟ್ಟನು , ಕಾಲು ಜಾರಿ ಕಂಟ್ರೋಲ್ ತಪ್ಪಿ ರೂಮಿನ ಶೆಲ್ಫ್ ನಲ್ಲಿ ಇದ್ದ ಅವನ ಮತ್ತು ಅವನ ಹೆಂಡತಿ  ಫೋಟೋ ಗೆ ದೊಣ್ಣೆ ಇಂದ ಜೋರಾಗಿ ಹೊಡೆದನು , ಫೋಟೋ ಪಕದಲ್ಲಿ ಇದ್ದ ಎಣ್ಣೆ ಬಾಟಲಿಗು ದೊಣ್ಣೆ ತಾಗಿ ಅದು ಕೆಳಗೆ ಬಿದ್ದು ಚೂರು ಚೂರು ಆಗಿ ಹೋಯಿತು. ಇದನ ಕಂಡ ಸುಮಾ ಕೆಂಡ ಮಂಡಲ ಆಗಿ ಹೋದಳು.

"ರೀ ಅಷ್ಟು ಕಣ್ಣು ಕಾಣಿಸೋಲವ ನಿಮ್ಮಗೆ , ನಮ್ಮ ಮ್ಯಾರೇಜ್ ಫೋಟೋ ಹೊಡೆದು ಹಾಕಿ ಬಿಟ್ರಿ , ನಿಮ್ಮ ಯೋಗೆತೆಗೆ ಬೆಂಕಿ ಹಾಕ , ಒಂದು ಇಲಿ ಹೊಡೆಯೋಕೆ ಆಗಿಲ್ಲ ಅಂದರೆ ನೀವು ಯಾವ ಸೀಮೆ ಗಂಡಸರುಗಳು , ನೀವು ಅಷ್ಟೇ , ಆ ಹರೀಶ್ ಅವರು ಅಷ್ಟೇ ಎಲ್ಲ ನಾಲಯಕು " ಅಂತ ರೇಗಿದಳು. ಇದನ ಕೇಳಿದ ನನ್ನಗೆ ಇದು ಬೇಕಿತ ಅನಿಸಿತು.

ನಾನು " ಲೇ ಅಶೋಕ ನಿನ್ನ ಹೆಂಡತಿ ಕೈ ಅಲ್ಲಿ ಅನಿಸಿಕೊಳ್ಳೋಕೆ ಇಲ್ಲಿಗೆ ಕರೆಸಿದಿಯ , ಏನೋ " ಅಂದೇ , ಅದಕೆ ಆವಾ "ಲೇ ಮಗ ಬಿಡೋ ಅವಳ ಮಾತನ , ಅವಳು ಹೇಳಿದರಲಿ ತಪ್ಪು ಏನು ಇಲ್ಲ ಬಿಡು " ಅಂದ . ನಾನು ಹಾಗಾದರೆ ನಾನು ಏನು ಅಂತ ಕನ್ಫ್ಯೂಷನ್ ಸ್ಟಾರ್ಟ್ ಆಗಿ ಹೋಯಿತು.

"ಹರೀಶ್ ಅಣ್ಣ ತಪ್ಪು ತಿಳಿಬೇಡಿ , ಸುಮ್ಮನೆ ರೇಗಿಸಿದೆ ಅಂತ ಸುಮಾ ಹೇಳಿದಳು. "ಹೋಗಲಿ ಬಿಡಮ್ಮ " ಅಂತ ಹೇಳುತ್ತಾ ಮೂಷಿಕನ ನೋಡಿ ಕೋಪ ದಿಂದ ಅದನ ಹೊಡೆಯಲು ವೇಗವಾಗಿ ಮುನ್ನುಗಿದೆ , ನಾನು ನೆಲದ ಮೇಲೆ ಎಣ್ಣೆ ಚೆಲ್ಲಿದನು ಮರೆತು ಕಾಲು ಇಟ್ಟ ಪರಿಣಾಮದಿಂದ ನಿಯಂತ್ರಣ ತಪ್ಪಿ ರೂಂ ಬಾಗಿಲಿಗೆ ಜೋರಾಗಿ ಗುದ್ದಿದೆ , ಸರಿಯಾಗಿ ಚಿಲಕ ಹಾಕದ ಬಾಗಿಲು ಓಪನ್ ಆಗಿ ನಾನು ಹಾಲ್ ಒಳ್ಳಗೆ ಹೋಗಿ ಬಿದ್ದೆ. ಬಿದ್ದ ರಭಸಕೆ ನನ್ನ ಮೊಣ ಕೈ ಗೆ ಬಲವಾದ ಪೆಟ್ಟು ಬಿತ್ತು, ಇದನ ನೋಡಿದ ಸುಮಾ ಬಿದ್ದು ಬಿದ್ದು ನಗಲು ಶುರು ಮಾಡಿದಳು , ನನಗು ಆ ನೋವಿನಲು ನಗು ಬಂತು. ಸುಮಾ ಮತ್ತೆ ಅಶೋಕ  ಬಂದು ಕೈ ಹಿಡಿದು ಮೇಲೆ ಹೇಳಲು ಸಹಾಯ ಮಾಡಿದರು.

ಮೇಲೆ ಎದ್ದು ನಿಂತೇ , ಮೂಷಿಕ ಮತ್ತೆ ನನ್ನ ಬಲ ಕಾಲಿನ ಮೇಲೆ ಹತ್ತಿ ಇನ್ನೊದು ದಿಕ್ಕಿಗೆ ಓಡಲು ನನ್ನ ಕಾಲಿನ ಮೇಲೆ ಹತ್ತಿತು, ಇದನ ಗಮನಿಸಿದ ಸುಮಾ ತನ್ನ ಕೈ ಅಲ್ಲಿ ಹಿಡಿದಿದ ಪೊರಕೆ ಇಂದ ನನ್ನ ಕಾಲಿಗೆ ಜೋರಾಗಿ ಹೊಡೆದಳು. ಮೂಷಿಕ ಅವಳ ಏಟ್ಟಿಗೆ ಸಿಗದೇ ನನ್ನಗೆ ಪೆಟ್ಟು ಬಿತ್ತು , ಅಯ್ಯೋ ಅನುತ್ತ ಕಾಲು ಮೇಲಕ್ಕೆ ಎತ್ತಿಕೊಂಡೆ , ಸುಮಾ ನನ್ನ ನೋಡುತ್ತಾ "ನಿಮ್ಮಗೆ ಇದೇನೋ ಹೊಸದಲ್ಲ ಬಿಡಿ " ಅಂತ ಹೇಳಿದಳು . ಇದರ ಅರ್ಥ ಏನು ಅಂತ ಯೋಚಿಸುತ ಇರಬೇಕಾದರೆ ಅಶೋಕ " ಲೇ ಮಾಮ , ಬಿಡೋ ಎಷ್ಟೋ ಹುಡುಗೀರ ಕೈ" ಅಂತ ಹೇಳುವಾಗಲೇ " ಲೇ ಮಾರಾಯ , ಸುಮಾ ಮುಂದೆ ಏನೋ ನಿನದು , ಬಿಡೋ , ಫ್ರೆಂಡ್ ನ ವೈಫ್ ಗೆ ಪರಿಚಿಸೋದೋ ಹೀಗೆ ಏನೋ" ಅಂತ ಜೋರಾಗಿ ಹೇಳಿದೆ . ಎಲ್ಲರು ನಕ್ಕು ಸುಮ್ಮನೆ ಆದೆವು . ಕೊನೆಗೂ ಮೂಷಿಕ ನಮ್ಮ ಕೈ ಗೆ ಸಿಗಲೇ ಇಲ್ಲ.

                              
                                                                                                                                  ಬರೆದ ಬಡಪಾಯಿ ,
                                                                                                                                                       ಹರೀಶ್ ಎಸ್ ಕೆ