"ಅನಂತನ ಅವಾಂತರ"

"ಅನಂತನ ಅವಾಂತರ"

ನಮಸ್ತೆ ಗೆಳೆಯರೆ,ಕಳೆದ ೨ ದಿನಗಳಿಂದ ಸಾಹಿತ್ಯ ಜಗತ್ತಿನಲ್ಲಿ ಮತ್ತೊಂದು ವಿವಾದ!!! ಒನ್ಸ್ ಅಗೈನ್ ಅನಂತಮೂರ್ತಿಯವರ ‍ಕೃಪಾಪೋಷಿತ!! ಬಹುಶಃ ಬಹುದಿನಗಳಿಂದ ಯಾವುದೇ ಸುದ್ದಿಯನ್ನು ಮಾಡಲಾಗದೆ ಒದ್ದಾಡಿರಬಹುದಾದ ಮೂರ್ತಿಗಳು ಶೂನ್ಯದ ಮೂಲಕವೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

              "ಭೈರಪ್ಪನವರು ಕಾದಂಬರಿಕಾರರೇ ಅಲ್ಲ" ಎಂಬ ಅವರ ಅಪಾಲಾಪ ಆರಂಭದಲ್ಲಿಯೇ ಇದೆ.ನಂತರ ಮೂರ್ತಿಯವರೆ ಹೇಳುತ್ತಾರೆ-"ಗೃಹಭಂಗ,ಪರ್ವ ಅತ್ತ್ಯುತ್ತಮ ಕಾದಂಬರಿಗಳು".!!! ಪಾಪ ಮೂರ್ತಿಯವರಿಗೆ ಗೊತ್ತಿಲ್ಲ-ಭೈರಪ್ಪನವರು ಇದುವರೆಗೆ ೨೧ ಕಾದಂಬರಿಗಳನ್ನು ಬರೆದಿದ್ದಾರೆ.ಅವು ಒಟ್ಟು ೧೨೮ ಮುದ್ರಣ ಕಂಡಿವೆ.ಸಾಹಿತ್ಯ ಚಿಂತನ ಗ್ರಂಥಗಳನ್ನು ಬರೆದಿದ್ದಾರೆ.ಅವು ೨೦ ಮುದ್ರಣ ಕಂಡಿವೆ.ಅವರ ೧೮ ಕೃತಿಗಳು ಸಂಸ್ಕೃತವೂ ಸೇರಿದಂತೆ ಭಾಷೆಗಳಿಗೆ ,ಕಾದಂಬರಿಗಳು ೧೪ ಭಾಷೆಗಳಿಗೆ ಅನುವಾದಿತವಾಗಿವೆ.(ಮಾಹಿತಿ-ಮತ್ತೂರು ಕೃಷ್ಣಮೂರ್ತಿ) ಬರೆದ ಮೂರ್ನಾಲ್ಕು ಕಾದಂಬರಿಗಳಲ್ಲಿ ಸಂಸ್ಕಾರವೊಂದನ್ನು ಬಿಟ್ಟರೆ, ಸತ್ತ್ವಯುತವಾದ ಮತ್ತಾವುದೇ ಕೃತಿ ನೀಡದ ಜ್ನಾನ(?)ಪೀಠಿಗಳಿಗೆ ಇದು ಗೊತ್ತಿಲ್ಲ.ಅವರ "ದಿವ್ಯ"ವಂತೂ ....ಇರಲಿ ಬಿಡಿ.ಮತ್ತದೇ ಹಳೆ ವಿಷಯ ಬೇಡ.ಪ್ರಸ್ತುತ ಭೈರಪ್ಪನವರು ಕಾದಂಬರಿಕಾರರೇ?ಅಲ್ಲವೇ? ಎಂಬುದು ಚರ್ಚಾಯೋಗ್ಯ ಸಂಗತಿಯೇ ಅಲ್ಲ.ಆದರೆ ಅದನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಮೂರ್ತಿಯವರದು.ಅದು ಯಾರೋ ಪಟ್ಟಶಿಷ್ಯರಿಂದ ತೆಗಳಿಕೆಯ ಪುಸ್ತಕ ಬರೆಸಿದಷ್ಟು ಸುಲಭವಲ್ಲ! ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿಗಷ್ಟೇ ಮತ್ತೂಬ್ಬ ಜ್ನಾನ(?)ಪೀಠಿ ಕಾರ್ನಾಡರಿಗೆ ನೀರಿಳಿಸಿದ್ದ ಭೈರಪ್ಪನವರ ಪ್ರತಿಕ್ರಿಯೆ ಇದಕ್ಕೆ ಏನಾಗಿರಬಹುದು..? Let's see

               ಒಟ್ಟಿನಲ್ಲಿ ಮತ್ತೆ ಕಲಹದ ರಸಕವಳ ಕನ್ನಡಿಗರಿಗೆ!!!!

Rating
No votes yet

Comments