ಮುಗಿಯಲಾರದ ಪಯಣ

ಮುಗಿಯಲಾರದ ಪಯಣ

ನಾನು ಸ್ವಾಮಿ ವಿವೇಕಾನಂದರ ಹಾಗೆ ಸನ್ಯಾಸಿಯಾಗಬೇಕೆಂದುಕೊಂಡೆ,

ಆದರೆ ಸಂಸಾರಿಯಾದೆ,

ನಾನು ಮಹಾತ್ಮಾ ಗಾಂಧೀಜಿಯ ಹಾಗೆ ಸತ್ಯ ಹೇಳಲು ಹೊರಟೆ,

 ಆದರೆ ಸುಳ್ಳಿನ ಸುಳಿಯಲ್ಲಿ ಸಿಲುಕಿಕೊಂಡೆ,

ನಾನು ಎಲ್ಲೋ ಹೋಗಬೇಕೆಂದು ಹೊರಟೆ ,

ಆದರೆ ದಾರಿ ಕಾಣದೆ ಇಲ್ಲಿಯೇ ಉಳಿದೆ,

ನಾನು ಗುರು ಇಲ್ಲದೆ ಗುರಿ ಇಲ್ಲದೆ ನಡೆದು ಬಂದೆ,

ದಾರಿಯಲ್ಲಿ ಕಲ್ಲು ಮುಳ್ಳುಗಳನ್ನು ತುಳಿದು ಬಂದೆ,

ಅಂದು ಗುರುವಿನ ಅವಶ್ಯಕತೆ ಇತ್ತು,

 ಇಂದು ಹಣದ ಅವಶ್ಯಕತೆ ಇದೆ,

ಇದು ಮುಗಿಯಲಾರದ ಪಯಣ.......

Rating
No votes yet

Comments

Submitted by bhalle Sat, 01/04/2014 - 19:33

ಅಂದು ನನಗೆ ತಿಳಿ ಹೇಳ್ತಿದ್ರು, ನಾ ಕೇಳಲಿಲ್ಲ
ಇಂದು ನಾ ಹೇಳ್ತಿದ್ದೇನೆ, ಕೇಳೋರಿಲ್ಲ!

Submitted by sathishnasa Sat, 01/04/2014 - 21:09

ಸತ್ಯವಾದ ಮಾತು ಭಲ್ಲೆಯವರೆ, ಹಾಗೆಯೇ ಒಳ್ಳೆಯ ಕವನ ರವೀಂದ್ರರವರೇ....ಸತೀಶ್

Submitted by lpitnal Sun, 01/05/2014 - 09:58

ರವೀಂದ್ರ ರವರೇ,ತಮ್ಮ ಕವನ ಮೆಚ್ಚುಗೆಯಾಯಿತು. ಮನುಷ್ಯನಿಗೆ ಬೇಕಾದ ಸಮಯದಲ್ಲಿ ಬೇಕಾದದ್ದು ದೊರೆತರೆ ಅದೇ ಸ್ವರ್ಗ. ಹೆಚ್ಚು ಹೆಚ್ಚು ಬೇಡಿಕೆ ಇಡುತ್ತ ಹೋದರೆ, ಶಾಂತಿ ನೆಮ್ಮದಿ ಗಳ ಸ್ವರ್ಗಗಳಿಂದ ದೂರ ದೂರ ಸರಿಯುತ್ತೇವೆ. ಧನ್ಯವಾದಗಳು

Submitted by ravindra n angadi Mon, 01/06/2014 - 16:34

In reply to by lpitnal

ನಮಸ್ಕಾರಗಳು ಸರ್
ನಿಮ್ಮ ಪ್ರತಿಕ್ರಿಯಗೆ ನನ್ನ ಧನ್ಯವಾದಗಳು ನಿಮ್ಮ ಮಾತು ನಿಜ ಸರ್ ಆಸೆಯೆ ದ:ಖಕ್ಕೆ ಮೂಲ, ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಹಿರಿಯರ ಅನುಭವದ
ಮಾತು ಸುಳ್ಲಲ್ಲ. ಸರ್ ಸದಾ ಇರಲಿ ನಿಮ್ಮ ನುಡಿಗಳು ನಮ್ಮ ಬರಹಗಳಿಗೆ.

Submitted by H A Patil Sun, 01/05/2014 - 17:59

ರವೀಂದ್ರ ಎನ್ ಅಂಗಡಿ ಯವರಿಗೆ ವಂದನೆಗಳು
ಮುಗಿಯಲಾರದ ಪಯಣ ಒಂದು ಸಶಕ್ತ ಕವನ, ಪ್ರತಿಯೊಬ್ಬ ಮನುಷ್ಯ ತನ್ನೊಳಗೆ ತಾನು ಸ್ವವಿಮರ್ಶೆ ಮಾಡಿಕೊಳ್ಳ ಬೇಕಾದ ಕವನ, ಓದುಗನನ್ನು ಚಿಂತನೆಗೆ ಹಚ್ಚುವಂತಹುದು, ಧನ್ಯವಾದಗಳು.

Submitted by ravindra n angadi Mon, 01/06/2014 - 16:46

In reply to by H A Patil

ನಮಸ್ಕಾರಗಳು ಸರ್
ನಿಮ್ಮ ಪ್ರತಿಕ್ರಿಯಗೆ ನನ್ನ ಧನ್ಯವಾದಗಳು ನಿಮ್ಮ ಪ್ರತಿಕ್ರಿಯಂದ ನನಗೆ ಬರಿಯವು ಚೈತನ್ಯ ಹೆಚ್ಚಾಗಿದೆ
ಧನ್ಯವಾದಗಳು

Submitted by ravindra n angadi Mon, 01/06/2014 - 16:16

ನಮಸ್ಕಾರಗಳು ಸರ್
ನಿಮ್ಮ ಪ್ರತಿಕ್ರಿಯಗೆ ನನ್ನ ಧನ್ಯವಾದಗಳು ನಿಮ್ಮ ಮಾತು ನಿಜ ಸರ್ " ಹಿತ್ತಲ ಗಿಡ ಮದ್ದಲ್ಲ" ಎಂಬ ಮಾತು ಸತ್ಯ.

Submitted by nageshamysore Tue, 01/07/2014 - 19:14

ರವೀಂದ್ರರೆ ನಮಸ್ಕಾರ,
ಏನೋ ಆಗುವ ಆಸೆ, ಇನ್ನೇನೊ ಆದ ಹತಾಶೆ ಬಹುಶಃ ಪ್ರತಿಯೊಬ್ಬರ ಜೀವನದಲಿ ಒಂದಲ್ಲ ಒಂದು ರೀತಿ ಕಾಡುವ ಅಂಶ. ಅದರ ಸರಳ ರೂಪದ ಚಿತ್ರಣ ಚೆನ್ನಾಗಿ ಮೂಡಿದೆ. ಧನ್ಯವಾದಗಳು :-)
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು

Submitted by ravindra n angadi Thu, 01/09/2014 - 12:02

In reply to by nageshamysore

ನಮಸ್ಕಾರ ಸರ್
ನಿಮ್ಮ ಪ್ರತಿ ಕ್ರಿಯಗೆ ಧನ್ಯವಾದಗಳು ಸರ್ ಪ್ರತಿಯೊಬ್ಬರ ಜೀವನದಲ್ಲಿ " ಮುಂದೆ ಗುರಿ ಹಿಂದೆ ಗುರು ಇದ್ದರೆ " ಜನ್ಮ ಸಾರ್ಥಕವಾಗುತ್ತದೆ.