ಒಳಿತು-ಕೆಡುಕಿನ ಯೋಚನೆ (ಶ್ರೀ ನರಸಿಂಹ 76)

ಒಳಿತು-ಕೆಡುಕಿನ ಯೋಚನೆ (ಶ್ರೀ ನರಸಿಂಹ 76)

ಎಲ್ಲ ಯೋಚನೆಗಳು ಎಲ್ಲರಲಿ ಬಂದು ಹೋಗುವುದು

ಬರುವ ಸಮಯವದು ಮಾತ್ರವೆ  ಬದಲು ಆಗುವುದು

ಸಾಗರದಲಿ  ರೌದ್ರ, ಶಾಂತತೆಯ ಅಲೆಗಳಿರುವಂತೆ

ಮನದೊಳೇಳುವ ಕೆಟ್ಟ,ಒಳ್ಳೆಯ ಯೋಚನೆಗಳಂತೆ

 

ಮನದಿ ಬರುವ ಯೋಚನೆಗಳಂತೆ ನೀ ನಡೆಯದಿರು

ಅರಿಯದೆ ಅದರೊಳಿತು,ಕೆಡುಕ ಮುಂದಡಿಯಿಡದಿರು

ಜಗಕೊಳಿತಾಗುವ ಯೋಚನೆಗಳೆ ಮನದಿ ಬರಬೇಕು

ಜಗದಲಿಹ ಎಲ್ಲರಲಿ,ಎಲ್ಲದರಲಿ ನಿನ್ನ ನೀ ಕಾಣಬೇಕು

 

ಎಲ್ಲ ಯೋಚನೆಗಳಿಂದಲಿ ನೀ ಮುಕ್ತಗೊಳಿಸಬೇಕಿಹುದು ಮನಸನು

ಸಾಧಿಸಿದನು ಮಾಡುತನವರತ ಶ್ರೀನರಸಿಂಹನ ನಾಮ ಜಪವನು

Rating
No votes yet

Comments

Submitted by kavinagaraj Tue, 01/07/2014 - 11:49

ಹೃದಯ ಮತ್ತು ಮೆದುಳಿನ ವಿಚಾರಗಳಲ್ಲಿ ಸಂದಿಗ್ಧತೆ ಬಂದಾಗ ಹೃದಯದ ಮಾತು ಕೇಳಬೇಕಂತೆ! ಇದಕ್ಕೆ ಪೂರಕವಾಗಿ ಮೂಡಿದೆ ನಿಮ್ಮ ಒಳಿತು-ಕೆಡುಕಿನ ಯೋಚನೆಗಳು! ಧನ್ಯವಾದ, ಸತೀಶರೇ.

Submitted by nageshamysore Tue, 01/07/2014 - 19:00

ಸತೀಶರೆ ನಮಸ್ಕಾರ "ಯೋಚನಾ ಮುಕ್ತ ಮನವಿರೆ, ಚಿಂತೆಗಳೆಲ್ಲ ಪತನ, ಅದ ಸಾಧಿಸಿದವ ಗೆದ್ದ, ಸಾಧನೆಯೆ ಜೀವನ ಯುದ್ಧ" :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by sathishnasa Tue, 01/07/2014 - 21:05

In reply to by nageshamysore

ಧನ್ಯವಾದಗಳು ನಾಗೇಶ್ ರವರೇ >>"ಯೋಚನಾ ಮುಕ್ತ ಮನವಿರೆ, ಚಿಂತೆಗಳೆಲ್ಲ ಪತನ, ಅದ ಸಾಧಿಸಿದವ ಗೆದ್ದ, ಸಾಧನೆಯೆ ಜೀವನ ಯುದ್ಧ" :-)<< ಇದುವೆ ಮುಕ್ತಿಯಲ್ಲವೆ ಮತ್ತೊಮ್ಮೆ ಧನ್ಯವಾದಗಳೊಂದಿಗೆ....ಸತೀಶ್