ಸಂಪದದ ಹಳೆಯಸಹಪಾಠಿಗಳ ನೆನೆದು
ಸಂಪದದ ಹಳೆಯಸಹಪಾಠಿಗಳ ನೆನೆದು
ಸಂಪದ ತೆರೆದಾಗ ನನ್ನ ಹಳೆಯ ಶಾಲೆಯ
ಹೊಕ್ಕಂತಾಗಿ, ಹೊಸ ಹೊಸ ಹೆಸರುಗಳ
ಕಂಡು, ನನ್ನೊಂದಿಗಿದ್ದ ಸಕ್ರಿಯ ಸಂಪಧಿಗರ
ಹೆಸರುಗಳು ಇತಿಹಾಸದ ಪುಟ ಸೇರಿರುವುದ
ನೋಡಿ, ಶಾಲೆಯಲ್ಲಿದ್ದ ಹಳೆಯ ಸಹಪಾಠಿಗಳ
ನೆನೆದಂತಾಗಿ, ಏನೋ ಖಾಲಿತನ ಕಾಡಿತು
ನಾ ಹಿಂದೆ ಬರೆಯುತ್ತಿದ್ದ ಪ್ರತಿ ಕವಿತೆಗಳ
ತಿದ್ದಿ ತೀಡಿ, ಪ್ರೋತ್ಸಾಹಿಸಿ, ಸ್ಪೂರ್ತಿಯಿತ್ತು
ಸದಾ ನನ್ನೊಂದಿಗೆ ಇದ್ದ ನಾ ಹೆಚ್ಚು ಕಂಡಿರದ
ನನ್ನ ಸಂಪದ ಸಹಪಾಠಿಗಳ ನೆನೆದಿಂದು
ಮನಸಿನಲಿ ಖಾಲಿ ಮನೋಭಾವ ಮೂಡಿದೆ
ಸಂಪದ ಸಮ್ಮಿಲನದಲಿ ಭೇಟಿ ಮಾಡಿದ ಎಲ್ಲರ
ನೆನೆದು ಬೀಳ್ಕೊಟ್ಟ ವಿದ್ಯಾರ್ಥಿಗಳ ಹಳೆಯ
ನೆನಪಿನಂತೆ, ಒಂದೊಂದಾಗೆ ನೆನಪಿನ ಬುತ್ತಿ ಬಿಚ್ಚಿ,
ಇವರುಗಳು ಮತ್ತೊಮ್ಮೆ ಏಕೆ ಸಕ್ರಿಯರಾಗಬಾರದು
ಎಂದೆನಿಸಿ, ಜೊತೆಗೆ ಹೊಸಬರನ್ನೂ ಸ್ವಾಗತಿಸಿ
ಸಂಪದದ ಅಂಗಳದಲಿ ಸಕ್ರಿಯನಾಗುವಾಸೆ
- ತೇಜಸ್ವಿ.ಎ.ಸಿ
Rating
Comments
ಉ: ಸಂಪದದ ಹಳೆಯಸಹಪಾಠಿಗಳ ನೆನೆದು
ತೇಜಸ್ವಿ, ಸಂಪದ ಗೆಳೆಯರನ್ನು ಮಿಸ್ ಮಾಡಿಕೊಂಡ ತಮ್ಮ ಕವನ ಇಷ್ಟವಾಯಿತು. ಹಳಬರಿಲ್ಲದೆ ಸಂಪದ ಸ್ವಲ್ಪ ಸೊರಗಿದರೂ ಕಂಟೆಂಟ್ ನಲ್ಲಿ ಅವರುಗಳ ಅಭಾವ ಕಾಣುತ್ತಿಲ್ಲ. ಆದರೂ ಹಳೇ ಮಿತ್ರರೊಂದಿಗಿನ ಸ್ನೇಹ ವಿರಸ ತಾವು ಹೇಳಿದ ಹಾಗೆ ಹಳೆಯ ಸಹಪಾಠಿಗಳ ನೆನಪಿನ ಥರ. ಮರೆಯಲು ಆಗೋಲ್ಲ, ಮತ್ತೊಮ್ಮೆ ಕಾಣುವ ತವಕ.
ಉ: ಸಂಪದದ ಹಳೆಯಸಹಪಾಠಿಗಳ ನೆನೆದು
ನಿಮ್ಮ ಆಸೆ ಈಡೇರಲಿ ಎಂಬುದೆ ನನ್ನ ಹಾರೈಕೆ.....ಸತೀಶ್