ಅಹಲ್ಯೆ - ಲಕ್ಷ್ಮೀಕಾಂತ ಇಟ್ನಾಳ

ಅಹಲ್ಯೆ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಅಹಲ್ಯೆ         - ಲಕ್ಷ್ಮೀಕಾಂತ ಇಟ್ನಾಳ

 

ರಟ್ಟೆ ನರಗಳ ಹರಿದು

ನೆತ್ತರ ಹನಿಯ ಬಸಿದು

ಕಟ್ಟಿಹಳು ಒಂದು ಗೂಡು

 

ಮರಗಳಲಿ ಮರವಾಗಿ

ಹಸಿರನೇ ಉಸಿರಾಗಿ

ಉಡುತೊಡುತ ಆಡಿದವಳು

 

ನಿಂತ ನೆಲ ಕದಿಯಲು

ಕಾದಿಹರು ಹೊಂಚುತಲೆ

ಕದಂಬ ಬಾಹು ಮಾಯಾವಿಗಳು

 

ಬಾವುಟವು ಇಲ್ಲದ

ಪ್ರಕೃತಿಯ ಕುಡಿಯಿವಳು

ಪಾಶಕ್ಕೆ ಸಿಲುಕಿರುವ ಮುಗದಳಿವಳು

 

ನಿಂತಿರುವ ನೆಲೆಯಲ್ಲೆ,

ನೊಂದಿರುವ ಮನದಲ್ಲೆ

ಹಿಡಿದಿಹಳು ಜೀವ ಅಹಲ್ಯೆ

 

ಗುಡ್ಡ ನೆಲಸಮವಾಗಿ

ಕಾಡಿಗಾವರಣ ಮೂಡಿ

ಮತ್ತೆ ಕಲ್ಲಾಗಿಹಳು ಅಹಲ್ಯೆ

 

      (ಚಿತ್ರ ಕೃಪೆ : ಅಂತರ್ಜಾಲ)

 

Rating
No votes yet

Comments

Submitted by lpitnal Thu, 01/09/2014 - 22:05

ಗೆಳೆಯ ಸಂಪದ ನಿರ್ವಹಣೆ ಮಿತ್ರರಿಗೆ, ನಮಸ್ಕಾರಗಳು. ಸಂಪದ ದಲ್ಲಿ ಲೇಖನಗಳನ್ನು ಅಪ್ ಲೋಡ್ ಮಾಡುವಲ್ಲಿ ಎರರ್ ಬಂದು, ಪ್ಲೀಸ್ ಟ್ರೈ ಲೇಟರ್ ಎಂದು ಬಂದಿದ್ದಕ್ಕೆ ಈ ಅಚಾತುರ್ಯವಾಯಿತು. ದಯವಿಟ್ಟು ಇನ್ನೆರಡು ಪುಟಗಳನ್ನು ತೆಗೆದುಹಾಕಲು ವಿನಂತಿಸುವೆ. ತಮ್ಮ ಸಾವಿರಾರು ಕೆಲಸಗಳ ಮಧ್ಯ ಈ ಕೆಲಸವನ್ನು ತಾವು ದಯಮಾಡಿ, ಬಿಡುವಾದಾಗ, ಬಿಡುವಾದಲ್ಲಿ ಮಾಡಲು ವಿಷಾದದಿಂದ ವಿನಂತಿಸುವೆ. ತಮಗೆ ಈಗಲೇ ಸಾಕಷ್ಟು ಕೆಲಸವಿದ್ದು, ತಾವು ಅನ್ಯಥಾ ಭಾವಿಸಬಾರದು ಎಂದು ವಿನಂತಿಸುವೆ. ನಮಸ್ಕಾರಗಳು ಸರ್.-ತಮ್ಮ ಲಕ್ಷ್ಮೀಕಾಂತ ಇಟ್ನಾಳ

Submitted by nageshamysore Sat, 01/11/2014 - 06:52

ಇಟ್ನಾಳರೆ ನಮಸ್ಕಾರ,
.
ಅಹಲ್ಯೆ ಮತ್ತೆ ಕಲ್ಲಾದರೂ ಬಿಡದ ಕಬಂಧ ಬಾಹುಗಳೂ ಇರುತ್ತಾರೆ - "ಅಹಲ್ಯಾ ಕಲ್ಲು" ಅನ್ನೊ ಹೊಸ ಗ್ರಾನೈಟ್ ಬಿಜಿನೆಸ್ ಶುರು ಮಾಡಿದರೂ ಮಾಡಿಬಿಡಬಹುದು!
.
ಮತ್ತೆ ಕಲ್ಲಾದ ಭಾವ ಒಂದೆಡೆ ಹತಾಶೆ - ನಿರಾಶೆಯ ಪ್ರತೀಕವಾದರೆ, ಮತ್ತೊಂದು ಸ್ತರದಲ್ಲಿ ಸೃಷ್ಟಿಯ ಸ್ಥಿತಿ ಲಯವಾಗುವ ನೈಸರ್ಗಿಕ ನಿಯಮಕ್ಕೂ ಪ್ರತಿಮೆಯ ರೂಪದಲಿ ಸಾಂಕೇತಿಕವಾಗುತ್ತದೆ. ಮರುಸೃಷ್ಟಿಯ ರಾಮಪಾದ ಶೀಘ್ರವೆ ಮರಳಿನ್ಕಲ್ಲಾದ ಅಹಲ್ಯೆಯತ್ತ ನಡೆಯಲಿ, ಸ್ಪರ್ಷಿಸಲಿ ಎಂದು ಆಶಿಸೋಣ :-)
.
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು

Submitted by lpitnal Sat, 01/11/2014 - 21:13

In reply to by nageshamysore

ನಾಗೇಶ ಜಿ, ತಮ್ಮ ತೆಳುಹಾಸ್ಯದ ಹಾಗೂ ವಿಮರ್ಶೆಗಳೆರಡನ್ನೂ ಸೂಸಿದ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು