ಕಚ'ಗುಳಿಗೆ'-೦೩
ಗುಳಿಗೆಗಳ ಕಾಟ ಈ ಒತ್ತಡದ ಜೀವನದಲ್ಲಿ ಬೇಡದಿದ್ದರೂ ಬಿಡದಾ ಭೂತ. ಬಿಪಿಗೊ, ಥೈರಾಯಿಡ್ಡಿಗೊ, ಟೆಂಕ್ಷನ್ನಿಗೊ, ತಲೊನೋವಿಗೊ, ನೆಗಡಿಗೊ, ಜ್ವರಕ್ಕೊ - ಒಟ್ಟಾರೆ ಮಾತ್ರೆ ನುಂಗುತ್ತಲೆ ಇರಬೇಕು, ಕಾಸು ಕೊಟ್ಟು. ಕೆಲವನ್ನು ತಡೆಯಲಾಗದಿದ್ದರೂ ಸಹನೀಯವಾಗಿಸುವಂತೆ ಮಾಡುವ ಕಾಸಿಲ್ಲದ ಗುಳಿಗೆಗಳೆಂದರೆ ನಗೆಯ ಟಾನಿಕ್ ಮಾತ್ರ. ನಗೆ ಬಿರುಮಳೆಯಾದರೂ ಸರಿ, ಮುಗುಳ್ನಗೆಯಾದರೂ ಸರಿ, ತುಸು ಒತ್ತಡದಿಂದ ಬಿಡುಗಡೆ ಮಾಡಿ ಮುದಗೊಳಿಸುವುದು ಮಾತ್ರ ನಿಜ. ಕೆಲಸದ ಒತ್ತಡ, ಬಿಡುವಿಲ್ಲದ ಓಡಾಟ, ಚಿಂತೆ, ಚಿಂತನೆಗಳಿಗೆಲ್ಲ ಪ್ರಥಮ ಚಿಕಿತ್ಸೆಯೂ ನಗುವೆ; ಆನಂತರ ಮಿಕ್ಕಿದ್ದು. ಬಿದ್ದು ಬಿದ್ದು ನಗಿಸಲಲ್ಲದಿದ್ದರೂ, ಬಿಕ್ಕಿಬಿಕ್ಕಿ ಅಳಿಸದ ಮೆಲು ಹಾಸ್ಯದ ತೆಳು ಹಾಳೆಯಾಗಿ ಕಚ'ಗುಳಿಗೆ'ಗೆ ಮತ್ತಷ್ಟು ಗುಳಿಗೆ ಸೇರಿಸುವ ಯತ್ನ ಈ ಕಂತಿನಲ್ಲಿ. ವಾರಾಂತ್ಯದ ನಿರಾಳತೆಯ ಜತೆ ಒಂದಷ್ಟು ಬಿಡಿ ನಗೆಯ ಕಿಡಿ ಸಿಡಿಸಲೆಂಬ ಆಶಯದೊಂದಿಗೆ ಈ ಕಚ'ಗುಳಿಗೆ' - ೦೩ :-) ೦೧. ಉರುಳು ______________ ದೇಗುಲದ ಸುತ್ತ ಜನ ಹಾಕುತ್ತಾರೆ ವದ್ದೆಯಲೆ 'ಉರುಳು' ಮಾಡಿದ ಪಾಪಗಳು ಆಗದಿರಲೆಂದು ಕುತ್ತಿಗೆಗೆ 'ಉರುಳು' ! ೦೨. ಪ್ಲೀಸ್ ಹೇಳ್ಬೇಡಿ! ________________ ಸಂಗಾತಿ ಇನ್ನೊಬ್ಬಳಿರುವ ಸಂಗತಿ, ಸಂಗಾತಿಗೆ ಗೊತ್ತಾಗಬಾರದ ಸಂಗತಿ ! ೦೩. ಸಂದಿಗ ್ದ _________ ಹೆಂಡತಿ ತಮ್ಮ 'ಸಾಲಾ' ವಾಪಸ್ಸೆ ಕೊಡ ಕೈಸಾಲ :-( ೦೪. ಅಳಿಯನ ಮಾತು ________________ ನಿಜಕೂ ನೀವೆ ನನ್ನ ಬಲ :-) ಹೀಗೆ ಸದಾ ಕೊಡುತಿರಿ - ಹಣಕಾಸಿನ ಬೆಂಬಲ !! ೦೫. ಪ್ರಗತಿ ____________ ಈಗ ದೊಡ್ಡ ಸ್ಟೇಟಸ್ಸು ಸಣ್ಣವರಿಗು.. - ಫೇಸು ಬುಕ್ಕಿನ ಲಾಗು :-) ೦೬. ವರದಾ _____________ ಒಡೆದರೂ ದೇವರಿಗೆ ನೂರೆಂಟು ಕಾಯಿ ವರ ಕೊಡದೆ ನಗುವ - ಇನ್ನು ಸ್ವಲ್ಪ ಕಾಯಿ ! ೦೭. ಯಾವುದು ಕಷ್ಟ ? _____________________ ಬಟ್ಟೆ ಮಾಡಿದರೆ ಸಾಲದು ಮಡಿ, ಒಣಗಿಸಲು ಹತ್ತಬೇಕು ನಾಕೆ 'ಮಹಡಿ'! ಧನ್ಯವಾದಗಳೊಂದಿಗೆ ನಾಗೇಶ ಮೈಸೂರು
Comments
ಉ: ಕಚ'ಗುಳಿಗೆ'-೦೩
ಕಚಗುಳಿಗೆ -3 ಮೊದಲಿನೆರಡರ ಹಾಗ ಮನಕ್ಕ ಮುದನೀಡುತ್ತ, ಮುಖ ಅರಳಿಸಿದ ಚುಟುಕುಗಳು ನಾಗಾಶ ಜೀ, ವಂದನೆಗಳು
In reply to ಉ: ಕಚ'ಗುಳಿಗೆ'-೦೩ by lpitnal
ಉ: ಕಚ'ಗುಳಿಗೆ'-೦೩
ಇಟ್ನಾಳರೆ ನಮಸ್ಕಾರ, ಈ ಪುಟದಲ್ಲಿ ಅಕ್ಷರವೆಲ್ಲ ಕಲೆಸಿಕೊಂಡುಬಿಟ್ಟ ಕಾರಣ, ತಿದ್ದುಪಡಿಸಿದ ರೂಪವನ್ನು ಮತ್ತೊಂದು ಪುಟದಲ್ಲಿ ಹಾಕಿದ್ದೆ, ಈ ಕೆಳಗಿನ ಲಿಂಕಿನಲ್ಲಿ. ಓದಲು ತ್ರಾಸವಾಯ್ತೇನೊ, ಅದಕ್ಕೆ ಕ್ಷಮೆಯಿರಲಿ :-)
http://sampada.net/%E0%B2%95%E0%B2%9A%E0%B2%97%E0%B3%81%E0%B2%B3%E0%B2%B...
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು