ಸಮಾನತೆ, ಸಮಬಾಳ್ವೆ
ಬಾಯಲ್ಲಿ ಸಮಾನತೆ
ಸಮಬಾಳ್ವೆಯ ಮಂತ್ರ
ಹಿಂದಡೆ ಎಲ್ಲವನು
ಮುಚ್ಚಿಡುವ ತಂತ್ರ.
ಸಮಾನತೆ, ಸಮಬಾಳ್ವೆಗಳು
ಬಿಳಿಯ ಹಾಳೆಯ ಮೇಲಿನ
ಕಪ್ಪು ಅಕ್ಷರಗಳು ಮಾತ್ರ.
ಇವು ಓದುವುದಕ್ಕೂ
ಮಾತನ್ನಾಡುವುದಕ್ಕೂ ಮಾತ್ರ
ಅನುಸರಿಸಿ ನಡೆಯುವದಕ್ಕಲ್ಲ
ಕೇವಲ ತೋರಿಕೆಗೆ ಮಾತ್ರ.
--ಮಂಜು ಹಿಚ್ಕಡ್
Rating
Comments
ಉ: ಸಮಾನತೆ, ಸಮಬಾಳ್ವೆ
ಆತ್ಮೀಯ ಮಂಜುರವರೇ, ಸಮಾನತ ಸಮಬಾಳ್ವ' ಗಳ ಆಚರಣೆಗಳಲ್ಲಿಯ ವೈರುಧ್ಯಗಳ ಕುರಿತು ತಮ್ಮ ಸಾತ್ವಿಕ ಸಿಟ್ಟು ಅರ್ಥವಾಗುವಂಥದ್ದೇ, ಆದರೂ ಭವಿಷ್ಯದಲ್ಲಿ ನಂಬಿಕೆ ಕಳೆದುಕೊಳ್ಳದೇ ಮುನ್ನಡಿಯಿಡುವಾ ಗೆಳೆಯರೆ, ಬದುಕಿನ ನೊಗ ಎಳೆಯೋಣ, ಆಶಾವಾದಿಯಾಗಿರೋಣ, ಮುಂದೊಂದು ದಿನ ಇನ್ನೂ ಉತ್ತಮ ದಿನ ಬಂದಾವು ಎಲ್ಲರಿಗು ಸಮಬಾಳು ಸಮಪಾಲು ಆಗಬಹುದೇನೊ,..
In reply to ಉ: ಸಮಾನತೆ, ಸಮಬಾಳ್ವೆ by lpitnal
ಉ: ಸಮಾನತೆ, ಸಮಬಾಳ್ವೆ
ಇಟ್ನಾಳ್ ಸರ್ ನಿಮ್ಮ ಪ್ರತಿಕ್ರಿಯೆ ಹಾಗೂ ಭರವಸೆಗಳಿಗೆ ಧನ್ಯವಾದಗಳು, ಹಾಗೆ ನಿಮ್ಮ ಕಥೆಗಳು, ಕವನಗಳು, ಲೇಖನಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ.