ಏಕ್ ಪುರಾನಾ ಮೌಸಮ್ ಲೌಟಾ (ಗಜಲ್) ಮೂಲ: ಗುಲ್ಜಾರ ಸಾಹಬ್ ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳ

ಏಕ್ ಪುರಾನಾ ಮೌಸಮ್ ಲೌಟಾ (ಗಜಲ್) ಮೂಲ: ಗುಲ್ಜಾರ ಸಾಹಬ್ ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳ

ಏಕ್ ಪುರಾನಾ ಮೌಸಮ್ ಲೌಟಾ (ಗಜಲ್)

ಮೂಲ: ಗುಲ್ಜಾರ ಸಾಹಬ್    ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳ

 

ಗತ ಋತುವೊಂದು ಮರಳಿತು, ನೆಪ್ಪಲಿ ನೆಂದ, ಮೂಡಗಾಳಿಯೂ ಸಹ,

ಹೀಗಾಗುವುದು ಬಲು ಅಪರೂಪ, ಅಗೋ, ಒಂಟಿತನವೂ ಸಹ,

 

ನೆಪ್ಪಿನ ಬುತ್ತಿ ಬಿಚ್ಚಲು, ಕಣ್ಣುಗಳು ಮಂಜು ಮಂಜು,

ಬಲು ಕೆಡುಕೆನಿಸಿತು, ನೀರಾಗಲು, ಗತಪಮಾನವೂ ಸಹ,

 

ಕಾಣುತ್ತಿವೆ ಬಿಂಬಗಳು ಎರಡೆರಡು, ಆವೇಶದ, ಈ ಕನ್ನಡಿಯಲ್ಲೂ,

ಬಂದಿಹುದು ನನ್ನೊಡನೆ, ಆ ನಿನ್ನ ಹಳೆಯ, ತೆವಲೂ ಸಹ

 

ನಿಶ್ಯಬ್ದದಾವರಣದೊಳು, ಬಲು ನೀರವ, ಮೌನವೊಂದಿದೆ,

ನನ್ನೊಡನೆ ಮಾತಾಡಿತದು, ಮಾತಾಡಿದೆ, ನಾನೂ ಸಹ

Rating
No votes yet

Comments

Submitted by H A Patil Mon, 01/13/2014 - 13:45

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಏಕ ಪುರಾನಾ ಮೌಸಮ್ ಲೌಟಾ ಕವಿ ಗುಲ್ಜಾರರ ಗಜಲ್ ನ್ನು ಕನ್ನಡೀಕರಿಸಿದ ರೀತಿ ಸೊಗಸಾಗಿದೆ, ಒಂದೊಂದು ನುಡಿಯೂ ಅರ್ಥಗರ್ಭಿತ ನುಡಿ. ಕೊನೆಯ ಸಾಲುಗಳು ......ನಿಶ್ಯಬ್ದದಾವರಣದೊಳು ಬಲಚು ನೀರವ ಮೌನವೊಂದಿದೆ, ನನ್ನೊಡನೆ ಮಾತಾಡಿತದು ನಾನೂ ಸಹ .....ನಾನು ಫೀದಾ ಆಗಿಬಿಟ್ಟೆ ಕವಿಗಳಾದ ಗುಲ್ಜಾರ್ ಮತ್ತು ಇಟ್ನಾಳ್ ಸಾಹೇಬರಿಗೆ, ಧನ್ಯವಾದಗಳು.

ಹಿರಿಯರಾದ ಪಾಟೀಲ ರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಾವು ಗಜಲ್ ನ್ನು ಮೆಚ್ಚಿಕೊಂಡ ರೀತಿಗೆ ಧನ್ಯ ಸರ್. ಮೇಲೆ 'ಸಾಹಬ್' ಬಿರುದು ಬೇರೆ. ಮುಜುಗುರದಲ್ಲಿ ಹಿಡಿಯಾದೆ....ಮತ್ತೊಮ್ಮೆ ವಂದನೆಗಳು ಸರ್,

ಆತ್ಮೀಯ ನಾಗೇಶ ಜಿ, ವಂದನೆಗಳು. ಗುಲ್ಜಾರ ರವರ ಗಜಲ್ ಗೆ ಸುಂದರವಾದ ಪ್ರತಿಕ್ರಿಯೆಗೆ, ಕುತೂಹಲದಿಂದ ಮೂಲವನ್ನೂ ಓದಿಕೊಂಡು ಪ್ರತಿಕ್ರಯಿಸಿರುವುದಕ್ಕೆ ಇನ್ನು ಖುಷಿಯಾಯಿತು. ಗಜಲ್ ನ ಸ್ವಾದವೇ ಸ್ವಾದ, ಅದರ ನಾದವೇ ಬೇರೆ, ಧನ್ಯವಾದಗಳು ನಾಗೇಶ ಜಿ.

ಇತ್ನಾಳರೆ, ನಾನೂ ನಿಮ್ಮ ಕವನ ನೋಡಿದ ಮೇಲೆಯೇ ಸರ್ಚ್ ಮಾಡಿ ಜಗಜಿತ್ ಹಾಡಿದ ಗಜಲ್ ಕೇಳಿದೆ. ಗುಲ್ಜಾರ್ ಬರೆದ ಕವನವೂ ಓದಿದೆ- http://ghazal.tripod.com/marasim.html. ನಮ್ಮ ಹಿಂದಿ ಅರಿವು ಅಷ್ಟಕಷ್ಟೇ ಇರುವುದರಿಂದ ಸ್ವಲ್ಪ ಅರ್ಥಮಾಡಿಕೊಳ್ಳಲು ಕಷ್ಟವಾಯಿತು. ನಿಮ್ಮ ಕವನವನ್ನು ಓದಿಕೊಂಡು ಅರ್ಥಮಾಡಿಕೊಂಡೆನು. ಬೇಸರಿಸದಿದ್ದರೆ ಒಂದು ಸಣ್ಣ ಸಲಹೆ- ಹಂಸಾನಂದಿಯವರು ಸಂಸ್ಕೃತ ಕವಿತೆಯ ಕನ್ನಡ ಅನುವಾದ ಕೊಡುವಾಗ ಕೆಲವು ವಿವರಗಳನ್ನು ಕೊಡುವಂತೆ, (ಈಗೀಗ ನಾಗೇಶರೂ ಬರೆಯುತ್ತಿರುವರು ), ತಾವೂ ಬರೆದರೆ ಚೆನ್ನಾಗಿರುತ್ತದೆ.

ಆತ್ಮೀಯ ಗಣೇಶ ರವರೇ, ತಮ್ಮ ಪ್ರತಿಕ್ರಿಯೆ ಓದಿದೆ.ತಾವಂದಂತೆ ತುಸು ವಿವರಣೆ ಇದ್ದಲ್ಲಿ ಬರಹಗಳ ಆಶಯ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ. ಎಲ್ಲೆಲ್ಲಿ ಸಾಧ್ಯವೊ ಅಂಥಲ್ಲಿ ಹೀಗೆ ಮಾಡಬಹುದು. ತಮ್ಮ ಉಪಯುಕ್ತ ಸಲಹೆಗೆ ಧನ್ಯ. ಇದರಲ್ಲಿ ಬೇಸರವೆಂಥದು ಗಣೇಶ ಜಿ. ಇಂತಹ ಚರ್ಚೆಗಳೇ ನಮ್ಮ್ಲಲ್ಲಿ ಆಗಬೇಕಾಗಿರುವುದು, ಯಾವಾಗಲೂ ವಸ್ತುನಿಷ್ಠವಾಗಿರುವುದರಿಂದ ಬರಹಗಾರರಿಗೆ ಬೆಳೆಯಲು ಅನುಕೂಲವಾಗುತ್ತದೆ. ಮುಕ್ತತೆ ಇದ್ದಷ್ಟು ಒಳ್ಳೆಯದು, ಎಲ್ಲರಿಗೂ ಕ್ಷೇಮ. ವಂದನೆಗಳೊಂದಿಗೆ , ತಮ್ಮವ, ಲಕ್ಷ್ಮೀಕಾಂತ ಇಟ್ನಾಳ

Submitted by shreekant.mishrikoti Tue, 01/14/2014 - 20:19

In reply to by ಗಣೇಶ

ಗಜಲ್ ನ ಅನುವಾದ ಮಾಡಿದ ಲಕ್ಷಿಕಾಂತ ಇಟ್ನಾಳರಿಗೂ ಮೂಲದ ಕೊಂಡಿ ಕೊಟ್ಟ ಗಣೇಶರಿಗೂ ವಂದನೆಗಳು . ಪುರ್ವಾಯಿ / ಪುರ್ವೈಯಾ ಅಂದರೆ ಪೂರ್ವದ ಗಾಳಿ ಮೂಡು/ಮೂಡಣ ಗಾಳಿ ಅಂತ ಗೊತ್ತಾಯಿತು . "ಮೂಡಣ ಗಾಳಿಗೆ ಸುಖಿಸಿ" ಕಂಬಾರರ ಹಾಡು ನೆನಪಾಯಿತು. ಹಾಗೇ ಕನ್ನಡದಲ್ಲಿ ಮೂಡಣಗಾಳಿ ಕುರಿತು ಹುಡುಕಿದಾಗ ಈ ಕೊಂಡಿಗಳು ಸಿಕ್ಕವು - http://kanaja.in/archives/45705 , http://kanaja.in/archives/35686

ಆತ್ಮೀಯ shreekant.mishrikoti ರವರಿಗೆ, ವಂದನೆಗಳು. ತಮ್ಮ ಪ್ರತಿಕ್ರಿಯೆ ನೋಡಿದೆ. ತುಂಬ ತಲೆಕೆಡಿಸಿಕೊಂಡು ಸುತ್ತಾಟ, ಹುಡುಕಾಟ ನಡೆಸಿದ್ದು ತಿಳಿಯಿತು. ಕಂಬಾರರನ್ನು ಟಚ್ ಮಾಡಿದ್ದೀರಿ. ಕಣಜದ ಶಬ್ದಗಳ ಕಣಜವನ್ನೂ ನೀಡಿದ್ದು ಖುಷಿಯಾಗಿಸಿತು.ಇಂಥವೆಲ್ಲ ಇರುತ್ತವೆಂದು ತಿಳಿದಿರಲೇ ಇಲ್ಲ. ಒಂದೊಂದು ಶಬ್ದಕ್ಕೂ ಸುಮ್ಮನೆ ಬಲು ತಲೆ ಕೆಡಿಸಿಕೊಂಡು ಸಿಗದೇ ಹುಡುಕುತ್ತಿರುತ್ತೇನೆ. ಸಿಗುವುದು ಕಡಿಮೆಯೇ, ಆದರು ನನ್ನದೇ ಒಂದು ತೀರ್ಮಾನಕ್ಕೆ ಬಂದು ಪದಪ್ರಯೋಗ ಮಾಡಿಬಿಡುತ್ತೇನೆ. ಹೀಗೆಯೇ ಹಿಂದಿ - ಇಂಗ್ಲೀಷ, ಹಾಗೂ ಉರ್ದು - ಇಂಗ್ಲೀಷ ಶಬ್ದಗಳ ಅರ್ಥಗಳು ಸಿಗುವ ಸರಳ ಕೊಂಡಿಗಳಿದ್ದರೆ, ಅವುಗಳನ್ನು ಗೆಳೆಯರು ನೀಡಿದಲ್ಲಿ ಕೃತಜ್ಞ. ತಮ್ಮ ಶ್ರಮಕ್ಕೆ ನಿಜಕ್ಕೂ ಧನ್ಯ. ಮತ್ತೊಮ್ಮೆ ವಂದನೆಗಳೊಂದಿಗೆ -ಲಕ್ಷ್ಮೀಕಾಂತ ಇಟ್ನಾಳ