" ಸಂಕ್ರಾಂತಿ "
ರೈತನು ಬೆಳೆದ ಪೈರು ಚಂದ,
ಕೂಡಿಬಾಳಿದರೆ ನಾಡು ಚಂದ,
ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿ,
ರವಿಯು ಆಯನ ಬದಲಿಸುವ ಸಂಕ್ರಾಂತಿ ,
ಹಾಡುತ ಕುಣಿಯುತ ಬಂದಿದೆ ಸಂಕ್ರಾಂತಿ ,
ನಗಿಸುತ ಕುಣಿಸಲು ಬಂದಿದೆ ಸಂಕ್ರಾಂತಿ ,
ಕಹಿಯನು ಮರೆತು ಸಿಹಿಯನು ತರುವ ಸಂಕ್ರಾಂತಿ ,
ದ್ವೇಷವ ಮರೆಸಿ ಸ್ನೇಹವ ಬೆಳೆಸಲು ಬಂದಿದೆ ಸಂಕ್ರಾಂತಿ ,
ಪ್ರತಿ ವರ್ಷವು ಒಳಿತನು ತರಲಿ ಈ ಸಂಕ್ರಾಂತಿ ,
ಕೆಡಕನು ತೊರೆದು ಒಳಿತನು ಬಯಸೋಣ,
ಎಳ್ಳು-ಬೆಲ್ಲವ ಬೀರಿ ಹರ್ಷವ ತರಿಸೋಣ,
ಎಲ್ಲರು ಸಂಭ್ರಮದಿಂದ ಸಂಕ್ರಾಂತಿ ಆಚರಿಸೋಣ.
Rating
Comments
ಉ: " ಸಂಕ್ರಾಂತಿ "
ರವೀಂದ್ರ ಎನ್ ಅಂಗಡಿ ಯವರಿಗೆ ವಂದನೆಗಳು
ಸಂಕ್ರಾಂತಿ ಒಂದು ಸಾಂಧರ್ಭಿಕ ಅಷ್ಡೆ ಅರ್ಥಪೂರ್ಣ ಕವನ, ಅಂತ್ಯ ಪ್ರಾಸ ಚೆನ್ನಾಗಿದೆ, ಒಳ್ಳೆಯ ಸದಾಶಯದ ಕವನ ನೀಡಿದ್ದಿರಿ ಧನ್ಯವಾದಗಳು.
In reply to ಉ: " ಸಂಕ್ರಾಂತಿ " by H A Patil
ಉ: " ಸಂಕ್ರಾಂತಿ "
ನಮಸ್ಕಾಗಳು ಸರ್
ಸಂಕ್ರಾಂತಿ ಕವನದ ಮೆಚ್ಚುಗೆಗೆ ಧನ್ಯವಾದಗಳು.
ಉ: " ಸಂಕ್ರಾಂತಿ "
ರವೀಂದ್ರರೆ, ಸರಳವಾಗಿ ಸೊಗಸಾದ "ಸಂಕ್ರಾಂತಿ" ಆಚರಿಸಿಕೊಂಡಿದ್ದೀರ, ಸುಂದರ ಸಂಕ್ರಾಂತಿ ಸಂದೇಶದೊಂದಿಗೆ. ಸಂಕ್ರಾಂತಿಯ ಹಾರೈಕೆ ನಿರಂತರವಾಗಿರಲೆಂದು ಹಾರೈಸೋಣ :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: " ಸಂಕ್ರಾಂತಿ " by nageshamysore
ಉ: " ಸಂಕ್ರಾಂತಿ "
ನಮಸ್ಕಾಗಳು ಸರ್
ಕವನದ ಮೆಚ್ಚುಗೆಗೆ ಹಾಗು ಹಬ್ಬದ ಶುಭಾಶೆಯಗಳಿಗೆ ಘನ್ಯವಾದಗಳು.
In reply to ಉ: " ಸಂಕ್ರಾಂತಿ " by ravindra n angadi
ಉ: " ಸಂಕ್ರಾಂತಿ "
(ಸರ್ ಕ್ಷಮಿಸಿ.)
ನಮಸ್ಕಾಗಳು ಸರ್
ಕವನದ ಮೆಚ್ಚುಗೆಗೆ ಹಾಗು ಹಬ್ಬದ ಶುಭಾಶೆಯಗಳಿಗೆ ಧನ್ಯವಾದಗಳು.