ನೀ ನನ್ನ ಜೊತೆಗಿರಲು...
ಆ ನಿನ್ನ ನಯನಗಳು
ನನ್ನನೇಕೋ ಕೆಣಕುತಿವೆ
ಆ ನಯನಗಳ ನೋಟಕೆ
ಅದರಗಳೇಕೋ ಅದರುತಿವೆ.
ಆ ಪ್ರೀತಿ ಹಂದರದಿ
ಭಿತಿಗೆ ಎಡೆಯುಂಟೆ
ಆ ಸರಸದ ನೋಟದಲಿ
ವಿರಸಕ್ಕೆ ಎಡೆಯುಂಟೆ.
ಆ ನಿನ್ನ ಮೌನದ ನೋಟಕೆ
ಮಾತಿಗೆ ಎಡೆಯುಂಟೆ
ಪ್ರೀತಿಗೆ ಮೌನದ ಲೇಪಕೆ
ಮಾತು ಬೇಕೆನಿಸುವುದುಂಟೆ.
ಮಾತಿಗೆ ಮೌನದ ಲೇಪವಿರಲು
ಸರಸಕ್ಕೆ ವಿರಸದ ಲೇಪವಿರಲು
ಹೊತ್ತು ಕಳೆದದ್ದು ತಿಳಿಯುವುದುಂಟೆ
ಜನ್ಮ ಕಳೆದರೂ ಮುಗಿಯುವುದುಂಟೆ
ಈ ಸರಸ ಸಲ್ಲಾಪ.
ನೀ ಹತ್ತಿರ ಸುಳಿಯುತ್ತಿರಲು
ಮೈ ಮನಸುಗಳು ನಿಂತಲ್ಲಿ ನಿಲ್ಲದೇ
ನಿನ್ನ ಸುತ್ತ ಸುತ್ತುತ್ತಲೇ ಇರುತ್ತವೆ
ಗಡಿಯಾರದ ಮುಳ್ಳುಗಳಂತೆ
ಕಂಡ ಕನಸುಗಳ ದಾರಿಯಲಿ
ನೀ ನನ್ನ ಜೊತೆಗಿರಲು
ಈ ಬದುಕು ಸಗ್ಗವಾಗಿರದೇ
ನರಕ ಆಗುವುದುಂಟೆ.
--ಮಂಜು ಹಿಚ್ಕಡ್
Rating
Comments
ಉ: ನೀ ನನ್ನ ಜೊತೆಗಿರಲು...
ಮಂಜುರವರೆ, 'ಜನ್ಮ ಕಳೆದರೂ ಮುಗಿಯದ ..ನಿಮ್ಮ ಸರಸ ಸಲ್ಲಾಪದ' ಲಹರಿ ಚೆನ್ನಾಗಿದೆ . ಆ ಭಾವವಂತೂ ಸದಾ ಜತೆಯಾಗಿರಲಿ ಎಂದು ಹಾರೈಸುತ್ತ :-)
ಧನ್ಯವಾದಗಳು.
ನಾಗೇಶ ಮೈಸೂರು
In reply to ಉ: ನೀ ನನ್ನ ಜೊತೆಗಿರಲು... by nageshamysore
ಉ: ನೀ ನನ್ನ ಜೊತೆಗಿರಲು...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ನಾಗೇಶ್ ಸರ್