ದಶಮಾಂಶ ಪದ್ದತಿ ನಮಗೆಷ್ಟು ಗೊತ್ತು?

ದಶಮಾಂಶ ಪದ್ದತಿ ನಮಗೆಷ್ಟು ಗೊತ್ತು?

ದಶಮಾಂಶ ಪದ್ದತಿ ಬಗ್ಗೆ  ನಮಗೆ ಎಷ್ಟು ಗೊತ್ತು!

ಈ ಶ್ಲೋಕವು ಬ್ರಹ್ಮಾಂಡ ಪುರಾಣದಲ್ಲಿದೆ, ಎಂಬ ಮಾಹಿತಿ ಇದೆ.

ಏಕಂ ದಶ ಶತಂ ಚೈವ ಸಹಸ್ರಮಯುತಂ  ತಥಾ |
ಲಕ್ಷಂ ನಿಯುತಂ ಚೈವ ಕೋಟಿರರ್ಭುದಮೇವ ಚ ||೧||

ಅರ್ಥ:
ಒಂದು, ಹತ್ತು, ನೂರು, ಸಾವಿರ,ಹತ್ತು ಸಾವಿರ,ಲಕ್ಷ, ಹತ್ತು ಲಕ್ಷ ಮತ್ತು ಕೋಟಿ ಹೀಗೆಯೇ ಹತ್ತು ಕೋಟಿ

ವೃಂಧ: ಖರ್ವೋ ನಿಖರ್ವಶ್ಚ ಶಂಖ: ಪದ್ಮಂ ಚ ಸಾಗರ: |
ಅಂತ್ಯಂ ಮಧ್ಯಂ ಪರಾರ್ದ್ಧ್ಯಂ ಚ ದಶವೃದ್ಧ್ಯಾ ಯಥಾ ಕ್ರಮಮ್ ||೨||

ಅರ್ಥ:
ವೃಂದ, ಖರ್ವ,ನಿಖರ್ವ,ಶಂಖ, ಪದ್ಮ, ಸಾಗರ, ಅಂತ್ಯ, ಮಧ್ಯ ಮತ್ತು ಪರಾರ್ಧ್ಯ. ಹೀಗೆ ಯಥಾಕ್ರಮವಾಗಿ ಹತ್ತರಿಂದ ಗುಣಿಸಿ ವೃದ್ಧಿಯನ್ನು ಮಾಡಿಕೊಳ್ಳಬೇಕು.

ಅಂದರೆ
ಒಂದು= 1
ಹತ್ತು =  10
ನೂರು = 100
ಸಾವಿರ = 1000
ಹತ್ತು ಸಾವಿರ = 10,000
ಲಕ್ಷ = 1,00,000
ಹತ್ತು ಲಕ್ಷ = 10,00,000
ಕೋಟಿ = 1,00,00,000
ಹತ್ತು ಕೋಟಿ = 10,00,00,000
ವೃಂದ = ನೂರು ಕೋಟಿ = 100,00,00,000
ಖರ್ವ = ಸಾವಿರ ಕೋಟಿ = 1,000,00,00,000
ನಿಖರ್ವ = ಹತ್ತು ಸಾವಿರ ಕೋಟಿ = 10,000,00,00,000
ಶಂಖ = ಲಕ್ಷ ಕೋಟಿ = 1,00,000,00,00,000
ಪದ್ಮ = ಹತ್ತು ಲಕ್ಷ ಕೋಟಿ = 10,00,000,00,00,000
ಸಾಗರ = ಕೋಟಿ ಕೋಟಿ = 1,00,00,000,00,00,000
ಅಂತ್ಯ = ಹತ್ತು ಕೋಟಿ ಕೋಟಿ = 10,00,00,000,00,00,000
ಮಧ್ಯ = ನೂರು ಕೋಟಿ ಕೋಟಿ = 100,0000,000,00,00,000
ಪರಾರ್ಧ್ಯ = ಸಾವಿರ ಕೋಟಿ ಕೋಟಿ = 1,000,00,00,000,00,00,000

1 ರ ಪಕ್ಕ 17 ಸೊನ್ನೆಗಳಿಗೆ ನಿಂತಿದೆ. 

ಇದನ್ನೇ ಯಾರಾದರೂ ಆಂಗ್ಲ ಭಾಷೆಯಲ್ಲಿ  ತರ್ಜಿಮೆ ಮಾಡಿ ಕಾಮೆಂಟಿಸಿದರೆ ಸಂತೋಷ.

Rating
No votes yet

Comments

Submitted by ಗಣೇಶ Tue, 01/21/2014 - 23:56

ಹರಿಹರಪುರಶ್ರೀಧರ್ ಅವರೆ,
ಹಳ್ಳಿಯಲ್ಲಿ ತೋಟ ಇದ್ದವರ ಅನುಭವ- ಒಂದು ಕ್ಷಣ ಮೊದಲು ಹಾಯಾಗಿದ್ದ ಸ್ಥಳ, ಅದೆಲ್ಲಿ ಇರುತ್ತವೋ ಮಂಗಗಳು ನೂರಾರು ಧಾಳಿ ಮಾಡಿ ತೋಟ ಸತ್ಯಾನಾಶ ಮಾಡಿಬಿಡುವವು.
ಮಂಗಗಳ ನಾಯಕ ಸುಗ್ರೀವನೇ ಯುದ್ಧಕ್ಕೆ ಹೊರಟಾಗ, ಅದೂ ರಾಮನ ಸಹಾಯಕ್ಕೆ..ಮಂಗಗಳ ಸಂಖ್ಯೆ ಇನ್ನೆಷ್ಟಿರಬಹುದು!! ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ, ರಾವಣನಿಗೆ ಮಂಗಗಳ ಸಂಖ್ಯೆ ಬಗ್ಗೆ ವರದಿ ಬರುವುದು-
"ಶತಂಕೋಟಿ ಸಹಸ್ರಾಣಾಮ್............................................................................ಮಹೌಘ ಇತಿ ವಿಶ್ರುತ:"
ಶಂಕು(1,000,000,000,000)-One trillion
ಮಹಾಶಂಕು-(100,000,000,000,000,000)-One hundred quadrillion.
ಹೀಗೇ ಒಂದರ ಪಕ್ಕ ೧೭ ಸೊನ್ನೆ ಅಂದಿರಲ್ಲಾ, ಅದಕ್ಕೂ ಮುಂದೆ ಹೋಗಿದೆ. ಒಂದರ ಪಕ್ಕ ೨೩? ೨೮?೩೩?...೬೩ಸೊನ್ನೆವರೆಗೂ ವಾಲ್ಮೀಕೀ ರಾಮಾಯಣದಲ್ಲಿ ಉಲ್ಲೇಖವಿದೆ! 100,000,000,000,000,000,000,000,000,000,000,000,000,000,000,000,000,000,000,000,000 ಇದು ಮಹೌಘ!! One hundred novemdecillion
ಈ ಕೊಂಡಿ ಸಹ ನೋಡಿ- http://en.wikipedia.org/wiki/Names_of_large_numbers

Submitted by nageshamysore Wed, 01/22/2014 - 03:20

In reply to by ಗಣೇಶ

ಹರಿಹರಪುರ ಶ್ರೀಧರರೆ, ಗಣೇಶ್ ಜಿ, ತುಂಬಾ ಕುತೂಹಲಕಾರಿ ಸಂಗತಿ ತಿಳಿಸಿಕೊಟ್ಟಿದ್ದೀರ. ನನ್ನ ಮಗ ಇದೆ ಪ್ರಶ್ನೆ ಕೇಳಿದಾಗ ಗೂಗಲ್ ಕುರಿತು ಮಾತ್ರ ಹೇಳಿದ್ದೆ (ಒಂದರ ಪಕ್ಕ ನೂರು ಸೊನ್ನೆ). ಈಗ ವಿಕಿ ಲಿಂಕು 303ರವರೆಗೂ ಇದೆ. ರಾಮಾಯಣದಲ್ಲಿ ಮಹೌಘದ ಮಾಹಿತಿಯೂ ಕುತೂಹಲಕಾರಿ. ಈಗ ಮಹಾಭಾರತದ ಅಕ್ಷೋಹಿಣಿ ಎಂದರೆ ಎಷ್ಟು ದೊಡ್ಡದಿರಬಹುದು (ಹತ್ತರ ಪಕ್ಕ ಎಷ್ಟು ಸೊನ್ನೆ) ಅನ್ನುವ ಕುತೂಹಲ ಮೂಡಿದೆ! ಇಂಗ್ಲೀಷಿನಲ್ಲಿ ಕೆಲವೊಮ್ಮೆ ದೊಡ್ಡ ಸಂಖ್ಯೆ ಹೇಳುವಾಗ ' ಜಿಲಿಯನ್' ಅನ್ನುವ ಪದ ಬಳಸುತ್ತಾರೆ. ಬಹುಶಃ ಇದು ಸಮಗ್ರವಾಗಿ ದೊಡ್ಡ ಸಂಖ್ಯೆಯನ್ನು ಹೇಳುವ ಆಡುಮಾತಿನ ಬಳಕೆಯ ಪದವಿರಬೇಕು (ಲಕ್ಷ್ಯಾಂತರ, ಕೋಟ್ಯಾಂತರ ಅನ್ನುವ ಹಾಗೆ)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by hariharapurasridhar Wed, 01/22/2014 - 08:31

In reply to by ಗಣೇಶ

ಗಣೇಶ್ ಜಿ ನೀವು ಮೇಲೆ ಗಮನಿಸಿರಬಹುದು 1 ರ ಪಕ್ಕ 17 ಸೊನ್ನೆಗಳಿಗೆ ನಿಂತಿದೆ " ಎಂದು ಬರೆದಿರುವೆ. ಆದರೆ ನಿಲ್ಲಿಸಿರುವೆ ಎಂದು ಬರೆ ಬೇಕಿತ್ತು. ನೀವು ತಿಳಿಸಿರುವ ಅಂಶಗಳು ಬಹಳ ಉತ್ತಮ ವಾದ ಅಂಶಗಳು. ನನ್ನ ಬಿನ್ನಹ ವೆಂದರೆ 17 ಸೊನ್ನೆಯವರೆಗೂ ಗುಣಿಸು ಪದ್ದತಿಯಲ್ಲಿ ಬರೆಯಲು ಸಾಧ್ಯವಾಯ್ತು. ಮುಂದೆ ಅದನ್ನೇ 63 ಸಂಖ್ಯೆಯ ವರೆಗೂ ಮುಂದುವರೆಸಿದರೆ ನಿಜಕ್ಕೂ ಅದೊಂದು ಅದ್ಭುತ. ಸ್ವಿಸ್ ಹಣವನ್ನು ಲೆಕ್ಖ ಮಾಡುವುದು ಸುಲಭ. ಅಥವಾ ನಮ್ಮ ಪುರಾತನ ಸಂಖ್ಯಾ ಶಾಸ್ತ್ರ ಗೊತ್ತಿರುವವರು ಮಾತ್ರ ಇಂಥಾ ಖದೀಮರು " ಮಹಾಘೌ " ಡಾಲರನ್ನು ಸ್ವಿಸ್ ಬ್ಯಾಂಕ್ ನಲ್ಲಿಟ್ಟಿದ್ದಾರೆಂದು ತಿಳ್:ಇಸಬಹುದಲ್ಲವೇ? ಮಾಹಿತಿಗಾಗಿ ನಿಮಗೆ ಧನ್ಯವಾದಗಳು. ವಿಕಿಪಿಡಿಯ ನೋಡುವೆ.

Submitted by hariharapurasridhar Wed, 01/22/2014 - 08:55

In reply to by hariharapurasridhar

ಶ್ರೀ ಗಣೆಶ್ ಅವರೇ, ವಿಕಿಪಿಡಿಯಾದಲ್ಲಿನ ಮಾಹಿತಿ ನೋಡಿದೆ. ಅದನ್ನು ಇಲ್ಲಿ ಪ್ರಕಟಿಸಲು ಸಾಧ್ಯವಿಲ್ಲದ ಕಾರನ ಕೆಳಗಿನ ಕೊಂಡಿಯಲ್ಲಿ ಪ್ರಕಟಿಸಿರುವೆ. http://vedabharatihassan.blogspot.in/2014/01/name-short-scale-u.html ಇದರಲ್ಲಿ short schale and long schale ಎಂಬ ಎರಡು ಪಟ್ತಿ ಇವೆ. ಅದರ ಬಗ್ಗೆ ಸ್ವಲ್ಪ ವಿವರಣೆ ನಿಮಗೆ ತಿಳಿದಿದ್ದರೆ ತಿಳಿಸುವಿರಾ?