ಕಚ'ಗುಳಿಗೆ' - 06

ಕಚ'ಗುಳಿಗೆ' - 06

ಈ ಕಂತಿನ ಚಿನಕುರುಳಿಗಳು : ಪ್ರೇಯಸಿ, ಭಾವ-ವಾಸ್ತವ, ಅಂಟು ರೋಗ, ಸಂದೇಹ, ಪವಿತ್ರ ಜಲ , ಹೊಗಳಿಕೆ. ಎಲ್ಲಾ ಬೇರೆ ಬೇರೆ ಥೀಮುಗಳ ಕಲಸುಮೇಲೋಗರ. ಟುಸ್ ಪಟಾಕಿಯೊ, ಇಲ್ಲ ಕುದುರೆ ಪಟಾಕಿಯೊ ನೋಡುವ (ಕಡೆಗೆ ಚಿನಕುರುಳಿಯಾದರೂ ಆದೀತಾ?) :-)

ಪ್ರೇಯಸಿ
___________

ಪ್ರೀತಿಯೆಂಬ 
ಸಾಫ್ಟವೇರು
ಓಡಿಸಲು,
ಇರಲೇಬೇಕಾದ
ಹಾರ್ಡ್ವೇರು !

ಭಾವ-ವಾಸ್ತವ
_______________

ಚಳಿಯಾಗುತಿದೆ
ನಲ್ಲೇ
ನಿನ್ನನೀಗ
ಬಿಗಿದಪ್ಪಲೇ ?
'ಹೋಗಿ ತನ್ರಿ ನೀರು'
ಖಾಲಿಯಾಗಿದೆ 
ಕೊಳದಪ್ಪಲೆ !

ಅಂಟು ರೋಗ 
______________

ಏನಪ್ಪಾ 
ಭಾನಾಗಡಿ,
ಗಡಿಬಿಡಿ..
ಎಡ್ಸ್ 
ಆಗಿಬಿಟ್ಟಿದ್ದರೆ
ನೆಗಡಿ ! ?

ಸಂದೇಹ
__________

ಪಾಪ 
ಶಿವೆ
ಅರ್ಧನಾರಿ ;
ಹೇಗೆ
ಉಡುತ್ತಾಳೆ
ಅರ್ಧ- ಸ್ಯಾರಿ ?

ಪವಿತ್ರ ಜಲ 
______________

ಗೋ ಮೂತ್ರ ?
ಗಂಜಲೆ..
ಹಸುಗೂಸಿನ ಮೂತ್ರ ?
ಗಂಗಾ-ಜಲೆ..
ದೊಡ್ಡವರಿಗೆ ಮಾತ್ರ - 
ಬರಿ ಸಕ್ಕರೆ ಕಾಯಿಲೆ!

ಹೊಗಳಿಕೆ
___________

ಬಿಡು ಪ್ರಿಯೆ,
ಕತ್ತಿಗೇಕೆ 
ಫಳ ಫಳ ನೆಕ್ಲೇಸು;
ರುಂಡ ಕೂತಿದೆ
ಮುಂಡದೊಳಗೆ,
ನೀನೇ
'ನೆಕ್ ಲೆಸ್ಸು' !

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by H A Patil Wed, 01/22/2014 - 19:51

ನಾಗೇಶ ಮೈಸೂರು ರವರಿಗೆ ವಂದನೆಗಳು
ಕಚಗುಳಿಗೆ ‍ 6 ಚೆನ್ನಾಗಿ ಮೂಡಿ ಬಂದಿದೆ, ಎಲ್ಲ ಚುಟುಕುಗಳು ಹ್ಯೂಮರಸ್ ಆಗಿವೆ, ಓದಿಸಿಕೊಂಡು ಹೋಗುತ್ತವೆ, ಲವಬಲವಿಕೆಯ ಬರವಣಿಗೆ ಧನ್ಯವಾದಗಳು.

Submitted by nageshamysore Thu, 01/23/2014 - 21:19

In reply to by H A Patil

ಪಾಟೀಲರೆ ನಮಸ್ಕಾರ,
ಲವಲವಿಕೆಯ ಚುಟುಕಗಳಿಗೆ ತಮ್ಮ ಪ್ರೋತ್ಸಾಹ ಅಭಿಮಾನದ ಶ್ರೀ ರಕ್ಷೆ ಹೀಗೆ ನಿರಂತರವಾಗಿರಲಿ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by makara Thu, 01/23/2014 - 08:37

ನಾಗೇಶರೆ,
ಇಷ್ಟು ದಿನಗಳ ನಂತರ ಈಗ ಬಿಡುವಾಗಿ ನಿಮ್ಮ ಚುಟುಕುಗಳನ್ನು ಓದಿದೆ; ನಿಮ್ಮಲ್ಲಿನ್ನೂ ಹುಡುಗುತನವಿದೆ ಎಂದು ನಿರೂಪಿಸುತ್ತಿವೆ ಈ ಕಚಗುಳಿಗಳು :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Thu, 01/23/2014 - 21:23

In reply to by makara

ಶ್ರೀಧರರೆ ನಮಸ್ಕಾರ,
ನೀವು ಪೂರ್ತಿ ಲಲಿತೆಯಲ್ಲಿ ಮುಳುಗಿದ್ದ ಕಾರಣ, ಸಮಯವಾಗುತ್ತಿರಲಿಲ್ಲವಲ್ಲ. ಹುಡುಗತನದ ಕಾರಣಕಿಂತ - ಇಪ್ಪತ್ತು ವರ್ಷದ ಗ್ಯಾಪಿನ ಸಾಲವೆಲ್ಲ ಈಗ ತೀರಬೇಕಲ್ಲ? ಅಲ್ಲದೆ ಸಂಪದದಲ್ಲಿ ಎಲ್ಲಾ ರೀತಿಯ ಓದುಗರು (ಟಾರ್ಗೆಟ್ ಆಡಿಯೆನ್ಸ್) ಇರುವುದರಿಂದ ಕೆಲವರಿಗೆ ಈ ಸರಳ ಚುಟುಕಗಳು ಹಿಡಿಸಬಹುದೆಂಬ ಆಶಯದಿಂದ ಸೇರಿಸುತ್ತಿದ್ದೇನೆ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು