ಪಂಡಿತ್ ಭೀಮಸೇನ ಜೋಶಿ

ಪಂಡಿತ್ ಭೀಮಸೇನ ಜೋಶಿ

ಗುಲ್ಝಾರ್ ಭೀಮಸೇನ ಜೋಶಿಯವರ ಕುರಿತು ತೆಗೆದಿರುವ ಈ ಡಾಕ್ಯುಮೆಂಟರಿ ಒಮ್ಮೆ ನೋಡಲೇಬೇಕಾದಂತಹ ವೀಡಿಯೋ.

ಭೀಮಸೇನ ಜೋಶಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕಲಿಯಬೇಕೆಂಬ ಹಠ ತೊಟ್ಟು ಮನೆ ಬಿಟ್ಟು ಹೋಗಿದ್ದರಂತೆ. ಸಂಗೀತ ಕಲಿಯಲು ಮನೆಗೆಲಸ ಮಾಡುತ್ತಿದ್ದರಂತೆ. ಗ್ವಾಲಿಯರ್ ನಲ್ಲಿ ಒಂದು ಹೊತ್ತು ಮಾತ್ರ ಊಟ. ಉಳಿದೆಲ್ಲ ಸಮಯ ಸಂಗೀತಾಭ್ಯಾಸ. ಗುರುಗಳಾದ ಸವಾಯಿ ಗಂಧರ್ವರು ತೀರಿ ಹೋದಾಗ ಭೀಮಸೇನರು ಹಾಡಿದ್ದನ್ನು ಅವರ ಜೊತೆಗಿನ ವಿದ್ಯಾರ್ಥಿಗಳಾಗಿದ್ದವರು ಭಾವುಕರಾಗಿ ನೆನೆಸಿಕೊಳ್ಳುವುದರ ಚಿತ್ರಣ ನೆನಪಿನಲ್ಲಿ ಉಳಿಯುವಂಥದ್ದು.

ಇಂತಹ ಕೆಲವು ವೀಡಿಯೋಗಳನ್ನು ಈಗ ಯೂಟ್ಯೂಬಿನಲ್ಲಿ ಅಪ್ಲೋಡ್ ಮಾಡುವ ಮೂಲಕ ಹೊಸ ಪೀಳಿಗೆಯವರಿಗೂ ಇದನ್ನು ಫಿಲ್ಮ್ಸ್ ಡಿವಿಶನ್ ಲಭ್ಯವಾಗಿಸಿದೆ.

Rating
No votes yet

Comments

Submitted by H A Patil Thu, 01/30/2014 - 17:30

ಹರಿ ಪ್ರಸಾದ ನಾಡಿಗರಿಗೆ ವಂದನೆಗಳು
ಭೀಮಸೇನ ಜೋಶಿ ಸಂಗೀತ ಯಾತ್ರೆ ಒಂದು ಗಂಧರ್ವ ಲೋಕದ ಒಂದು ಸುಂದರ ಪಯಣ, ಆದರೆ ಆ ಸಂಗೀತವನ್ನು ಕಂಠಸ್ತ ಮಾಡಿ ಕೊಳ್ಳಲು ಅವರು ಪಟ್ಟ ಕಷ್ಟ ವರ್ಣಿಸಲಸದಳ. ಕುಂದಗೋಳದಲ್ಲಿ ಸವಾಯಿ ಗಂಧರ್ವರಲ್ಲಿ ( ರಾಮಭಾವೂ ಕುಂದಗೋಳ್ಕರ ) ಸಂಗೀತ ಕಲಿಯಲು ಉತ್ತರ ಭಾರತದಿಂದ ಮರಳಿದಾಗ ಅವರ ಮನೆಯಲ್ಲಿ ಪ್ರತಿದಿನ ನೀರು ಹೊತ್ತು ಗುರುಗಳು ಕಲಿಸಿದ್ದನ್ನು ತನ್ನ ಕಂಥಗತ ಮಾಡಿಕೊಂಡು ಆವರು ಏರಿದ ಎತ್ತರ ಬೆರಗುಗೊಳಿಸುವಂತಹುದು, ಆ ನಂತರದಲ್ಲಿ ಅವರು ಮಾಡಿದ ಸಾಧನೆ ,ಏರಿದ ಎತ್ತರ ಅದು ಒಬ್ಬ ಸಾಧಕನ ದಾರಿ. ಧನ್ಯವಾದಗಳು..

Submitted by swara kamath Fri, 01/31/2014 - 17:11

‍ಫಿಲಂ ಡಿವಿಜನ್ ಗಾಗಿ ಗುಲ್ಜಾರ್ ಅವರು ಭಿಮಸೇನ್ ಜೋಷಿ ಅವರೊಂದಿಗೆ ನಡೆಸಿದ ಸಂದರ್ಶನದ ವಿಡಿಯೊ ಬಹಳ ಸೊಗಸಾಗಿದೆ.ನೋಡುತ್ತಿರುವ ಹಾಗೆ ಸಮಯ ಕಳೆದದ್ದೆ ಗೊತ್ತಾಗುವುದಿಲ್ಲ. ಇನ್ನೊಮ್ಮೆ ನೋಡಬೇಕೆನಿಸುತ್ತದೆ.ಅಂಥಹ ಒಂದು ಅವಕಾಶ ತಾವು ನಮಗೆ ಕಲ್ಪಿಸಿಕೊಟ್ಟು ಮನಸಂತೋಷ ಪಡಿಸಿದ್ದೀರಿ . ತುಂಬಾ ಧನ್ಯವಾದಗಳು ಹರಿಪ್ರಸಾದ್ ನಾಡಿಗ್ ಅವರೆ. ...... ರಮೇಶ ಕಾಮತ್