' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ಜನೆವರಿ 30 ಗಾಂಧೀಜಿಯವರ ಪುಣ್ಯತಿಥಿ, ಅವರು ಗತಿಸಿ ಹೋಗಿ 66 ವರ್ಷಗಳೇ ಸಂದು ಹೋಗಿವೆ.. ಅವರ ಸಮಕಾಲೀನ ಭಾರತೀಯ ನಾಯಕರ ಹೆಸರುಗಳೆ ಇಂದು ಮರೆತು ಹೋಗಿವೆ. ಆದರೆ ಮಹಾತ್ಮಾ ಗಾಂಧೀಜಿ ಯವರ ಆದರ್ಶಗಳನ್ನು ಬಿಡಿ ಆದರೆ ಹೆಸರು ಮಾತ್ರ ಇನ್ನೂ ಚಾಲ್ತಿಯಲ್ಲಿದೆ.ಅವರ ತತ್ವಾದರ್ಶಗಳು ಭಾರತ ಮಾತ್ರವೆ ಅಲ್ಲ ಜಗದ ಆಶಾಕಿರಣ. ಇನ್ನೂ ಒಂದು ನಿರೀಕ್ಷೆಯಿದೆ ಇಂದಲ್ಲ ನಾಳೆ ಸತ್ಯ ಧರ್ಮ ಅಹಿಂಸೆಗಳು ಈ ಜಗದ ತತ್ವಗಳಾದಾವು ಜಗತ್ತು ಮಾನವೀಯತೆಯ ದಾರಿ ಹಿಡಿದೀತು ಎಂದು. ಆದರೆ ವರ್ತಮಾನದ ಈ ಅಜಾಗರತೆಯ ಸ್ಥಿತಿ ನೋಡಿದರೆ ಗಾಂದಿ ತತ್ವಗಳು ಬರಿ ರಾಜಕಾರಣಿಗಳ ಮತ್ತು ಆಷಾಡಭೂತಿಗಳ ನಾಲೆಗೆಯ ಮೇಲೆ ಹೊರಳಾಡುವ ಪದಗಳು ಮಾತ್ರ ಅವು ಆಚರಣೆಗೆ ಅಲ್ಲ ಎಂದು. ಇಂದು ದೇಶದ ಎಲ್ಲ ರಂಗಗಳಲ್ಲೂ ಸ್ವಾರ್ಥ, ಸ್ವಜನ ಪಕ್ಷಪಾತ, ವ್ಯಕ್ತಿಗತ ಲಾಭ ನಷ್ಟಗಳ ಲೆಖ್ಖಾಚಾರಗಳು, ಒಳಗೊಂದು ಹೊರಗೋಂದು ಜೀವನ ರೀತಿಗಳು ಭಯ ಹುಟ್ಟಿಸುತ್ತಿವೆ. ಎಲ್ಲರೂ ನಮಗೆ ಅನ್ಯಾಯವಾಗಿದೆ ಅದಕ್ಕೆ ಬೇರೆ ಯವರು ಕಾರಣ ಎಂದು ಆರೋಪ ಹೊರಿಸುತ್ತ ಆತ್ಮ ವಂಚನೆಯ ಬದುಕು ಬದುಕುತ್ತಿದ್ದೇವೆ. ಇಂದಿನ ದಿನಗಳಲ್ಲಿ ಒಬ್ಬ ಹಿಪೋಕ್ರ್ಯಾಟ್ ಮಾತ್ರ ವರ್ತಮಾನದ ಲಾಭ ಪಡೆದು ಮೇಲೆ ಬರುವಂತಹ ಸ್ಥಿತಿ ಏರ್ಪಟ್ಟಿದೆ.
ಈಗ್ಗೆ ಬಹಳ ಹಿಂದೆ ಬೇಡ ಕೇವಲ ಮೂವತ್ತು ವರ್ಷಗಳ ಹಿಂದೆ ವ್ಯಕ್ತಿಗತ ಮತ್ತು ಸಾರ್ವಜನಿಕ ಜೀವನದಲ್ಲಿ ಅನೇಕ ಪ್ರಾಮಾಣಿಕ ವ್ಯಕ್ತಿಗಳನ್ನು ಎಲ್ಲ ಹಿನ್ನೆಲೆಯ ಎಲ್ಲ ಅಂತಸ್ತಿನ ಜನಗಳಲ್ಲಿ ಕಾಣಬಹುದಿತ್ತು. ಸಮಾಜದಲ್ಲಿ ಬಡತನವಿದ್ದರೂ ಹಲವು ಮೌಲ್ಯಗಳು ಸಾಮಾಜಿಕ ಬದುಕಿನಲ್ಲಿ ಇದ್ದವು. ಯಾರೂ ಆಡಂಬರಕ್ಕಾಗಿ ಮತ್ತು ತೋರಿಕೆಗಾಗಿ ಬದುಕುತ್ತಿರಲಿಲ್ಲ. ಮಾನವೀಯ ಮೌಲ್ಯಗಳು ಜೀವನ ಧರ್ಮಾವಾಗಿದ್ದವು. ಕ್ರಮೇಣ ಸರಕಾರಗಳ ಉದಾರಿಕರಣ ಬಡತನದ ರೇಖೆಯ ಕೆಳಗಿನ ಎಲ್ಲರಿಗೂ ಅವ”ಶ್ಯಕ ಉಚಿತ ಪಡಿತರ, ರೋಜಗಾರ ಯೋಜನೆಗಳು ಮತ್ತು ಎಲ್ಲ ಮಕ್ಕಳಗೆ ಪುಕ್ಕಟೆ ವಿದ್ಯಾಭ್ಯಾಸ,ಸಮವಸ್ತ್ರ, ಪುಸ್ತಕಗಳು, ಸೈಕಲ್, ಮಧ್ಯಾನ್ಹದ ಬಿಸಿಯೂಟ ಏನೆಲ್ಲ ಜನಪರ ಯೋಜನೆಗಳು. ಆದರೆ ವರ್ತಮಾನದ ಕಟುವಾಸ್ತವ ನೋಡಿ ಇಂದು ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುತ್ತ ಹೋಗುತ್ತಿವೆ. ಆಂಗ್ಲ ಮಾಧ್ಯಮಶಾಲೆಗಳು ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಇದಕ್ಕೆ ಗ್ರಾಮೀಣ ಪರಿಸರವೂ ಹೊರತಲ್ಲ. ಪದವೀಧರ ತರಬೇತಿ ಪಡೆದ ಶಿಕ್ಷಕ ವೃಂದವಿದ್ದರೂ ನಮಗೆ ಕಾನ್ವೆಂಟ್ ವ್ಯಾಮೋಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಖಾಸಗಿ ಶಾಲೆಗಳಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕ ವೃಂದದ ಕೊರತೆಯಿದೆ. ಇನ್ನೂ ಒಂದು ವಿಶೇಷವೆಂದರೆ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದೆ ಖಾಸಗಿ ಕಾನ್ವೆಂಟ್ ಗಳಿಗೆ ಸೇರಿಸುತ್ತಿರುವುದು.
ಉನ್ನತ ಶಿಕ್ಷಣ ಇಂದು ವ್ಯಾಪಾರಿ ಸರಕಾಗಿದೆ ಅದನ್ನು ಕೆಳಸ್ಥರದ ಜನರನ್ನು ಬಿಡಿ ಮೇಲ್ಮಧ್ಯಮ ವರ್ಗದವರಿಗೂ ಸಹ ಇದು ಇಂದಿನ ದಿನಗಳಲ್ಲಿ ಮರೀಚಿಕೆಯಾಗುತ್ತಿದೆ. ಅಂದರೆ ಪ್ರತಿಭೆ ಹಿಂದಕ್ಕಾಯಿತು ಹಣ ಮುಂದಕ್ಕಾಯಿತು. ಇದೊಂದು ತರಹದ ವ್ಯಾಪಾರಿಕರಣ. ವ್ಯಾಪಾರದಲ್ಲಿ ಹಣ ತೊಡಗಿಸುವವನಿಗೆ ಲಾಭ ಸಹಿತ ತಾನೂ ಹೂಡಿದ ಹಣ ಹಿಂದಕ್ಕೆ ಪಡೆಯುವ ಧೋರಣೆಯಲ್ಲದೆ ಬೇರೇನೂ ಇರಲು ಸಾಧ್ಯವಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಗ್ರಾಮ ನಗರಗಳ ಮತ್ತು ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುವುದು ವರ್ತಮಾನದ ಪ್ರಶ್ನೆ? ಈಗ ಆ ವರ್ಗ ಈ ವರ್ಗ, ಆ ಜಾತಿ ಈ ಜಾತಿ, ಮೇಲ್ವರ್ಗ ಕೆಳವರ್ಗ, ಸವರ್ಣೀಯ ದಲಿತ, ಶ್ರೀಮಂತ ಮತ್ತು ಬಡವ ಎನ್ನುವ ವರ್ಗೀಕರಣ ಸಲ್ಲದಂತಹ ಸ್ಥಿತಿಗೆ ದೇಶ ತಲುಪಿದೆ. ಈ ಹಿಂದೆ ನೌಕೆರಿ ಎನ್ನುವುದು ಭೂಮಿ ಕಾಣಿಯಿಲ್ಲದ, ಕಸುಬು ಗೊತ್ತಿಲ್ಲದ ಮತ್ತು ಭಂಡವಾಳವಿಲ್ಲದವರ ಅನಿವಾರ್ಯದ ಆಯ್ಕೆ ಯಾಗಿತ್ತು. ಸ್ವಲ್ಪ ಮಟ್ಟಿಗಿನ ಪ್ರಾಮಾಣಿಕತೆ ಕೆಲವರಲ್ಲಿಯಾದರೂ ಇರತ್ತಿತ್ತು. ಆದರೆ ಇಂದು ನೈಕರಿ ಎನ್ನುವುದು ಉಳ್ಳವರ ಸ್ವತ್ತಾಗಿದೆ, ಆಯ್ಕೆ ಪ್ರಕ್ರಿಯೆಯಲ್ಲಿ ಹಣದ ವಹಿವಾಟು ವಿಜ್ರಂಭಿಸುತ್ತಿದೆ. ಸರ್ಕಾರಿ ಉದ್ಯೋಗ ಕ್ಷೇತ್ರ ಇಂದು ಹಣ ಬಿತ್ತಿ ಹಣ ಬೆಳೆವ ಒಂದು ಉದ್ಯಮ ವಾಗಿದೆಯೆ ಎನ್ನುವ ಸಂಶಯ ಕಾಡುತ್ತಿದೆ. ಸರ್ಕಾರಿ ನೌಕರಿ ಕ್ಷೇತ್ರದಲ್ಲಿ ಕೆಲಸದ ಭದ್ರತೆಯಿದೆ ಆದರೆ ವೃತ್ತಿನಿಷ್ಟೆ ಬರ ಬರುತ್ತ ಕಡಿಮೆಯಾಗುತ್ತಿದೆ. ಇನ್ನು ಖಾಸಗಿ ರಂಗದಲ್ಲಿ ವೃತ್ತಿನಿಷ್ಟೆಇದೆ ಆದರೆ ಕಡಿಮೆ ಸಂಬಳ ನೌಕರಿಯ ಭದ್ರತೆಯಿಲ್ಲ. ಹೀಗಾಗಿ ಇಂದು ಯುವ ಸಮೂಹ ದಿಕ್ಕೆಟ್ಟು ನಿಂತಿದೆ. ಭ್ರಷ್ಟರನ್ನು ಕೆಲಸಗಳ್ಳರನ್ನು ನೌಕರಿಯಿಂದ ಹೊರಗೆ ಕಳಿಸುತ್ತಾರೆ ಎನ್ನುವ ಭಯ ಹುಟ್ಟಿಸುವ ವ್ಯವಸ್ಥೆ ಇಂದಿನ ವ್ಯವಸ್ಥೆಯಲ್ಲಿಲ್ಲ. ಹೀಗಾಗಿ ಭ್ರಷ್ಟಾಚಾರ ಸಾರ್ವಜನಿಕ ಜೀವನದಲ್ಲಿ ಇಂದು ವಿಜ್ರಂಭಸಿಸುತ್ತಿದೆ. ನಮ್ಮನ್ನಾಳುವವರು ಭ್ರಷ್ಟಾಚಾರ ಜಾಗತಿಕ ಮಟ್ಟದ ಪಿಡುಗು ಎಂದು ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ತಲುಪಿ ಹಲವು ವರ್ಷಗಳೆ ಆಗಿವೆ.
ಗಾಂಧಿ ಕನಸಿದ ರಾಮರಾಜ್ಯ ಇಂದು ಜನ ಮಾನಸದಿಂದ ಅಳಿಸಿ ಹೋಗಿದೆ. ಗಾಂಧಿ ಹೆಸರು ಸ್ವಾತಂತ್ರೋ ತ್ಸವ , ಗಣರಾಜ್ಯೋತ್ಸವ, ಗಾಂಧಿ ಜಯಂತಿ ಮತ್ತು ಆತನ ಪುಣ್ಯತಿಥಿಗಳಂದು ಮಾತ್ರ ರಾಜಾಕಾರಣಿಗಳು ನೆನಪಿಸಿಕೊಳ್ಳುವ ಒಂದು ಹೆಸರಾಗಿ ಉಳಿದಿದೆ. ಇಲ್ಲಿನ ಎಳೆಯ ಮಕ್ಕಳಿಗೆ ಬರಿ ಪಂಚೆಯುಟ್ಟ ಕೈಯಲ್ಲಿ ಕೋಲು ಹಿಡಿದ ಕನ್ನಡಕಧಾರಿ ಎಲುವಿನ ಹಂದರದ ಒಂದು ವ್ಯಕ್ತಿ ಚಿತ್ರವಾಗಿ ನಿಂತಿದೆ. ಅವರ ಜೀವನ ಮೌಲ್ಯಗಳು ಮತ್ತು ತತ್ವಾದರ್ಶಗಳನ್ನು ಮಕ್ಕಳ ಪಾಲಕರು ಮತ್ತು ಶಿಕ್ಷಕರು ಅವರಿಗೆ ಸರಿಯಾಗಿ ಮಾಡಿ ಕೊಡುತ್ತಿಲ್ಲ ವೆನಿಸುತ್ತಿದೆ. ಗಾಂಧೀಜಿ ರಾಮರಾಜ್ಯವೆಂದರೆ ಅದು ಗ್ರಾಮ ರಾಜ್ಯದ ಕನಸು ಆಗಿತ್ತು. ಅಲ್ಲಿ ಎಲ್ಲ ಕೆಳಸ್ಥರದ ವರೆಗಿನ ಜನ ವಿದ್ಯಾವಂತರಾಗಬೇಕು ಸ್ವಾಭಿಮಾನಿಗಳಾಗಬೇಕು ವ್ಯವಸಾಯದದ ಸುತ್ತ ಹುಟ್ಟಿಕೊಂಡ ಗ್ರಾಮೀಣ ಉಪ ಕಸುಬುಗಳಾದ ಕುಂಬಾರಿಕೆ, ಬಡಿಗೆಗಾರಿಕೆ, ಕಮ್ಮಾರಿಕೆ, ಮ್ಯಾದಾರಿಕೆ ಮುಂತಾದವುಗಳು ಅಭಿವೃದ್ಧಿ ಹೊಂದಬೇಕು. ಭಾರತ ಹಳ್ಳಿಗಳ ದೇಶ ಮತ್ತು ವ್ಯವಸಾಯ ಗುಡಿಕೈಗಾರಿಕೆಗಳು ಮುಂತಾದವುಗಳು ಪ್ರಮುಖಸ್ಥಾನನ ಪಡೆಯಬೇಕು. ಅವರ ಕನಸಿನ ರಾಜ್ಯದಲ್ಲಿ ಪ್ರಜೆಗಳ ನೆಮ್ಮದಿಯ ಬದುಕಿಗೆ ಶ್ರಮ ಅದಕ್ಕೆ ಯೋಗ್ಯ ಪ್ರತಿಫಲ ಪ್ರಕೃತಿ ಪರಿಸರದ ಸಂರಕ್ಷಣೆಗಳಾಗಿದ್ದವು. ಆದೆರೆ ಇಂದು ಏನಾಗಿದೆ ಗಾಂಧೀಜೀಯ ಎಲ್ಲ ಕನಸುಗಳು ಮೂಲೆ ಸೆರಿವೆ. ಹಣ ಇಂದು ಪ್ರತಿಯೊಬ್ಬರ ಪ್ರಮುಖ ಜೀವನದ ಆದ್ಯತೆಯಾಗಿ ಬದಲಾಗಿದೆ. ಅದನ್ನು ಗಳಿಸುವ ಮಾರ್ಗ ನೇರವಾಗಿರಬೇಕೆಂದಿಲ್ಲ ಬಳಸು ದಾರಿಯೂ ಆಗಬಹುದು, ಆ ದಾರಿಯಲ್ಲಿ ನಾವು ಅನೇಕರು ಸಾಗಿದ್ದೇವೆ. ಅರಾಜಕತೆ ಎಲ್ಲೆಡೆ ಇಂದು ತಾಂಡವವಾಡುತ್ತಿದೆ. ಈ ದೇಶವನ್ನು ಪ್ರಮುಖ ದಾರಿಗೆ ತರುವುದು ಹೇಗೆ? ಮತ್ತೆ ಗಾಂಧಿ ಮತ್ತು ಆತನ ತತ್ವಗಳಿಗೆಯೇ ನಾವು ಮೊರೆ ಹೋಗಬೇಕು. ಯಾರನ್ನು ಯಾರು ದಾರಿಗೆ ತರುವುದು ಬರಿ ರಾಜಕಾರಣಿಗಳು ಮತ್ತು ಅಧಿಕಾರಿಶಾಹಿ ಮಾತ್ರವೆ ಅಲ್ಲ ಬಹುತೇಕ ಜನ ಸಾಮಾನ್ಯ ಸಹ ಇಂದು ಭ್ರಷ್ಟ ನಾಗಿದ್ದಾನೆ. ಈ ದಿನದಂದು ನಾವು ಗಾಂಧಿ ಮೌಲ್ಯಗಳ ಮನನ ಮಾಡಿ ಅವುಗಳ ಅಗತ್ಯತೆಗಳನ್ನು ಅರಿಯೋಣ, ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಹಳಿ ತಪ್ಪಿದ ದೇಶವನ್ನು ಸರಿ ದಾರಿಗೆ ತರೋಣ. ಈ ದೇಶವನ್ನು ಕಟ್ಟಿ ಮುನ್ನಡೆಸುವಲ್ಲಿ ಕೈ ಜೋಡಿಸೋಣ.
ಚಿತ್ರ ಕೃಪೆ: ಗೂಗಲ್ ಇಮೇಜಸ್ ***
Comments
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ಪಾಟೀಲರೆ ನಮಸ್ಕಾರ,
ಗಾಂಧಿ ಪುಣ್ಯತಿಥಿಯಂದು ಸೂಕ್ತ ಲೇಖನ. ತಾನು ಬಯಸುವ ಬದಲಾವಣೆಯ ಹರಿಕಾರ ಮೊದಲು ತಾನೆ ಆಗಬೇಕೆಂಬ ಮಾತು ತುಂಬಾ ಅರ್ಥಪೂರ್ಣ. ಲೇಖನಕ್ಕೆ ಧನ್ಯವಾದಗಳು, ನಾಗೇಶ ಮೈಸೂರು
In reply to ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ ' by nageshamysore
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಅಭಿಪ್ರಾಯ ಸರಿ ನಾವು ಬಯಸುವ ಬದಲಾವಣೆಯ ಹರಿಕಾರರು ಮೊದಲು ನಾವೇ ಆಗಬೇಕು ಧನ್ಯವಾದಗಳು.
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ವಂದನೆಗಳು ಪಾಟೀಲರೇ. ಗಾಂಧೀಜಿಯವರ ಆಚಾರ-ವಿಚಾರಗಳು ಅನುಕರಣೀಯವಾದುದು. ಅವರು ಖಿಲಾಫತ್ ಚಳುವಳಿಯಲ್ಲಿ ಸಕ್ರಿಯರಾಗಿ ತೊಡಗಿಕೊಂಡುದು ತುಷ್ಟೀಕರಣ ನೀತಿಗೆ ನೀರೆರೆದಂತಾಯಿತು ಎಂಬುದು ಇತಿಹಾಸದ ಸತ್ಯ. ಅದು ಈಗ ಹೆಮ್ಮರವಾಗಿದೆ.
In reply to ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ ' by kavinagaraj
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ಕವಿ ನಾಗರಾಜ ರವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ,,, ಅವರು ಖಿಲಾಪತ್ ............ಅದು ಈಗ ಹೆಮ್ಮರವಾಗಿದೆ... ಈಗಿನ ನಮ್ಮ ದೇಶದ ಪರಿಸ್ಥಿತಿ ನಿಮಗೆ ಆ ಅರ್ಥ ಬರಲು ಕಾರಣವಾಗಿರಬಹುದು ಜೊತಗೆ ಅದು ಸಕಾರಣ ಕೂಡ. ಆದರೆ ನಾವು ಆಗಿನ ಸಂಧರ್ಭಗಳನ್ನು ನೋಡಿದರೆ ಲವಿವಿಧ ಜಾತಿ ಧರ್ಮ ಭಾಷೆ ಮತ್ತು ಆಚರಣೆ ಗಳಿದ್ದ, ಮತ್ತೊಂದು ಕಡೆ ಒಡೆದಾಳುವ ನೀತಿ ಅನುಸರಿಸುತ್ತಿದ್ದ ಬ್ರಿಟೀಶರನ್ನು ಪ್ರಭಾವಿಯಾಗಿ ಎದುರಿಸಲು ಮತ್ತು ಅವರನ್ನೆಲ್ಲ ಹೊರ ಹೋಗುವಂತೆ ಮಾಡಲು ನಾವು ಭಾರತೀಯರೆಲ್ಲ ಒಂದು ಎಂಬ ಒಗ್ಗಟ್ಟು ತೋರಿಸಲು ಖಿಲಾಫತ್ ಬೆಂಬಲಿಸಿದರೇನೋ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ಗಾಂಧೀಜಿ ಬಗೆಗಿನ ನಿಮ್ಮ ಲೇಖನ ಚೆನ್ನಾಗಿದೆ. ಗಾಂಧಿ ಸುಲಭವಾಗಿ ನಮ್ಮ ನಿಲುಕಿಗೆ ಸಿಗದ ವ್ಯಕ್ತಿತ್ವ.
ಗಾಂಧೀಜಿ ಬಗ್ಗೆ ನಾನುಇತ್ತೀಚೆಗೆ ಓದಿದ ಕೆಲ ಉತ್ತಮ ಲೇಖನಗಳು ಇಂತಿವೆ.http://www.prajavani.net/article/ಭಾರತದ-ಮೂರನೇ-ಮಹಾಕಾವ್ಯ-ಮತ್ತದರ-ವಿರೋಧhttp://www.prajavani.net/article/ಗಾಂಧೀಜಿ-ರೋನಾಲ್ಡ್-ಡಂಕನ್-ಕಂಡಂತೆhttp://www.orwell.ru/library/reviews/gandhi/english/e_gandhi
In reply to ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ ' by ರಾಮಕುಮಾರ್
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ರಾಮ ಕುಮಾರರವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ ಜೊತೆಗೆ ತಾವು ಕೊಟ್ಟ ಕೊಂಡಿಗಳನ್ನು ಬಳಸಿ ನೊಡಿದೆ, ಗಾಂಧಿ ಬಗೆಗೆ ವಿವಿಧ ನೊಟಗಳನ್ನು ಬೀರುವ ಮಾಹಿತಿಗಳಿವೆ. ತಮ್ಮ ಪ್ರತಿಕ್ರಿಯೆಗೆ ಮತ್ತು ಗಾಂಧೀಜಿ ಬಗೆಗಿನ ಮಾಹಿತಿ ಕೊಂಡಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು.
In reply to ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ ' by ರಾಮಕುಮಾರ್
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ಅಕ್ಟೋಬರ್‌ನ ಗಾಂಧಿ ಜಯಂತಿ ಪ್ರಯುಕ್ತ ನವೆಂಬರ್ ಡಿಸಂಬರ್ ನ ಕಸ್ತೂರಿ ಕನ್ನಡ ಮಾಸಿಕದಲ್ಲಿ ಗಾಂಧಿಯವರನ್ನು ನಾವ್ ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಹೇಗೆ ಯಾಕೆ ಎಂದೆಲ್ಲ ಸರಳವಾಗಿ ವಿವರವಾಗಿ ಬರಹ ಬರೆದಿರುವರು . ಅವರ ಬಗ್ಗೆ ಏನಾದರೂ ಹೇಳಲು ನಾ ಚಿಕ್ಕವನು -ಅವರ ಕೊಡುಗೆ ಕಡೆಗಣಿಸುವಂತಿಲ್ಲ -ನಿಮ್ಮಿಂದ ಗಾಂಧೀಜಿ ಅವರ ಬಗ್ಗೆ ಅವರ ಆಶಯಗಳ ಬಗ್ಗೆ ಒಳ್ಳೆ ಬರಹ ಇಸ್ಟ ಆಯ್ತು ..
ಪ್ರತಿಕ್ರಿಯೆಯಲ್ಲಿ ಕೊಟ್ಟ ಲಿಂಕ್ನಾ ಬರಹಗಳನ್ನು ಓದಿದೆ -ಲಿಂಕ್ ನೀಡಿದವರಿಗೆ ನನ್ನಿ .
ಶುಭವಾಗಲಿ
\|/
In reply to ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ ' by venkatb83
ಉ: ' ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಿರುವ ಗಾಂಧಿ '
ಸಪ್ತಗಿರಿಯವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ತಮ್ಮ ಅಭಿಪ್ರಾಯ ಸರಿ ಗಾಂಧಿ ಒಂದು ಬೃಹತ್ತಾದ ಶಕ್ತಿ ಮತ್ತು ಅದೊಂದು ಅವ್ಯಕ್ತ ಚೇತನ ಆ ಬಗೆಗೆ ಎಷ್ಟು ಬರೆದರೂ ಕಡಿಮೆಯೆ. ಅವರನ್ನು ನೆನಪಿಸಿಕೊಳ್ಳಲೆಂದು ಬರೆದ ಒಂದು ಕೃತಜ್ಞತಾ ಲೇಖನವಿದು. ಪ್ರತಿಕ್ರಿಯೆಗೆ ಧನ್ಯವಾದಗಳು.