ನನ್ನ ಮೊದಲ ಕಿರುಸಿನೆಮಾ
ಆತ್ಮೀಯರೇ,
ಬಹಳ ದಿನಗಳ ನಂತರ ಮತ್ತೊಮ್ಮೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ಆದರೆ ಯಾವುದೇ ಬರಹವನ್ನು ಹಾಕುತ್ತಿಲ್ಲ. ಬದಲಿಗೆ ನಾನೇ ಬರೆದು ನಿರ್ದೇಶಿಸಿದ ಮೊದಲ ಕಿರು ಸಿನೆಮಾವನ್ನು (Short Movie) ನಿಮಗೆ ತೋರಿಸಲು ಬಂದಿದ್ದೇನೆ.
ಈ ಕೆಳಗೆ ನನ್ನ ಕಿರು ಸಿನೆಮಾದ ಕೊಂಡಿಯನ್ನು ಕೊಟ್ಟಿರುತ್ತೇನೆ. ನನ್ನ ಬರಹಗಳನ್ನು ಪ್ರೋತ್ಸಾಹಿಸಿದ ರೀತಿಯಲ್ಲೇ ನನ್ನ ಈ ಪ್ರಯತ್ನವನ್ನು ಮೆಚ್ಚುತ್ತೀರ ಎಂದು ಭಾವಿಸುತ್ತೇನೆ.
http://www.youtube.com/watch?v=cDnRT4nRsZA
ಧನ್ಯವಾದಗಳು
Rating
Comments
ಉ: ನನ್ನ ಮೊದಲ ಕಿರುಸಿನೆಮಾ
ಜಯಂತ ರಾಮಾಚಾರ ರವರಿಗೆ ವಂದನೆಗಳು
ತಮ್ಮ ಕಿರು ಚಿತ್ರದ ಬಗ್ಗೆ ಕೊಟ್ಟ ಕೊಂಡಿಯನ್ನು ಕ್ಲಿಕ್ಕಸಿ ನೋಡಿದೆ ಆದರೆ ಚಿತ್ರ ಬಿಚ್ಚಿ ಕೊಳ್ಳುತ್ತಿಲ್ಲ, ಮತ್ತೆ ಪ್ರಯತ್ನಿಸಿ ನೋಡುವೆ, ತಮ್ಮ ಹೊಸ ಪ್ರಯತ್ನದಲ್ಲಿ ಯಶಸ್ಸು ತಮ್ಮದಾಗಲಿ, ಧನ್ಯವಾದಗಳು.
ಉ: ನನ್ನ ಮೊದಲ ಕಿರುಸಿನೆಮಾ
ಜಯಂತ್
ಪ್ರಥಮ ಪ್ರಯತ್ನ ತುಂಬಾ ಚೆನ್ನಾಗಿ ಮೂಡಿದೆ.
ಪ್ರಾರಂಭದಲ್ಲಿ ದ್ವನಿಗ್ರಹಣ ಸ್ವಲ್ಪ ಅಸ್ವಷ್ಟ ಅನ್ನಿಸುತ್ತೆ. ಹಾಗೆ ಚಲನೆಯಿದ್ದಾಗೆ ಚಿತ್ರಗಲು ಸ್ವಲ್ಪ ಕಲಸಿಕೊಳ್ತಿದೆ.
ಕ್ಯಾಮರಕ್ಕೆ ಸ್ಟಾಂಡ್ ಉಪಯೋಗಿಸಬಹುದೇನೊ ಮುಂದಿನ ಪ್ರಯತ್ನದಲ್ಲಿ. ಆಗ ಒಲಾಟವಿರುವದಿಲ್ಲ
ಕತೆ ಹಿಂದೊಮ್ಮೆ ನಿಮ್ಮದೆ ಬರಹದಲ್ಲಿ ಓದಿದ್ದೆ.
ಆದರೂ ನಿಮ್ಮ ಪ್ರಯತ್ನ ಖುಷಿಕೊಟ್ಟಿದೆ. ಡಾ! ಚರ್ಮೇಶ್ ಆಗಿ ಗಂಭೀರವಾರಲು ತುಂಬಾ ಕಷ್ಟ ಪಟ್ಟಿದ್ದೀರಿ :)
ಅಭಿನಂದನೆಗಳೊಡನೆ
ಪಾರ್ಥಸಾರಥಿ
In reply to ಉ: ನನ್ನ ಮೊದಲ ಕಿರುಸಿನೆಮಾ by partha1059
ಉ: ನನ್ನ ಮೊದಲ ಕಿರುಸಿನೆಮಾ
ಡಾ.ಚರ್ಮೇಶ್!:) ಮೊದಲ ಪ್ರಯತ್ನ ಚೆನ್ನಾಗಿದೆ. ಹೀಗೇ ನಿಮ್ಮ ಒಂದೊಂದೇ ಕತೆಗಳನ್ನು ಕಿರುಚಿತ್ರ ಮಾಡಿ.
ಉ: ನನ್ನ ಮೊದಲ ಕಿರುಸಿನೆಮಾ
ತಮಾಷೆಯಾಗಿದೆ.
ಉ: ನನ್ನ ಮೊದಲ ಕಿರುಸಿನೆಮಾ
ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಎಲ್ಲರಿಗೂ ಅನಂತ ಧನ್ಯವಾದಗಳು