"ಸ್ನೇಹ"

"ಸ್ನೇಹ"

ಸ್ನೇಹ  ಒಂದು ಸುಂದರ ಕವನ,

ನೂರಂದು ಭಾವನೆಗಳ ಮಿಲನ,

ಬದುಕಿನ ಜಂಜಟಾದಲ್ಲಿ ಬೇಸತ್ತ,

ಮುಗ್ಧ ಮನಸ್ಸಿನಗೆ ಸಂಚಲನ  ಈ ಸ್ನೇಹ,

ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ,

ಹಾಲು ಜೇನು ಬೆರೆತ ಹಾಗೆ ಈ ಸ್ನೇಹ,

ಸ್ನೇಹವೆಂಬುದು ಒಂದು ಸುಂದರ  ಸಂಬಂಧ,

ಬಾಲ್ಯದಲ್ಲಿ ಆಟವಾಡಿ ಜಗಳ ಮಾಡಿದ ಸ್ನೇಹ,

ಸ್ನೇಹದಲ್ಲಿ ಬರುವುದು ಕೋಪ-ತಾಪ ಸಾಮಾನ್ಯ,

ಮನಸ್ಸು ನೊಂದಾಗ ಚೈತನ್ಯ ಕೊಡುವುದು ಈ ಸ್ನೇಹ ,

ಸ್ನೇಹದಲ್ಲಿ ಬರಬಾರದು ಮನಸ್ತಾಪ,

ಸ್ನೇಹದಲ್ಲಿ  ಇರಬಾರದು ಸಿರಿವಂತಿಕೆಯ ತಾರತಮ್ಯತೆ,

ಸಾಗರದಂತೆ ಸದಾ ಸಾಗುತಿರಲಿ ಈ ಸ್ನೇಹ,  

ಆಕಾಶದಂತೆ ವಿಶಾಲವಾಗಿರಲಿ ಈ ಸ್ನೇಹ,

ಜೀವನದ ಕೊನೆಯವರಿಗೂಸದಾ ಇರಲಿ ಈ  ಸ್ನೇಹ,

ನಿಮ್ಮ  ಸ್ನೇಹವೇ ನನಗೆ ವಜ್ರ ಕವಚ,

ಹೃದಯದಲ್ಲಿ ಅಮರವಾಗಲಿ ಈ ಸ್ನೇಹ,

ಸದಾ ಮಿನುಗುತ್ತಿರಲಿ  ಆಕಾಶದ ನಕ್ಷತ್ರದಂತೆ ನಮ್ಮ ಈ ಸ್ನೇಹ.

 

                                               

Rating
No votes yet

Comments

Submitted by H A Patil Fri, 01/31/2014 - 20:09

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಸ್ನೇಹ ಕುರಿತು ತಾವು ಬರೆದ ಈ ಕವನ ಒಂದು ಸುಂದರ ಕಲಾತ್ಮಕ ನಿರೂಪಣೆ, ಸ್ನೇಹದ ಎಲ್ಲ ಮಗ್ಗಲು ಮತ್ತು ಆಯಾಮಗಳನ್ನು ಸರಳವಾಗಿ ನಿರೂಪಿಸಿದ್ದೀರಿ, ಮನಕೆ ಮುದ ನೀಡುವ ಕವನ ಧನ್ಯವಾದಗಳು.

Submitted by ravindra n angadi Sat, 02/01/2014 - 14:09

In reply to by H A Patil

ನಮಸ್ಕಾರಗಳು ಸರ್
ನಿಮ್ಮ ಪ್ರತಿಕ್ರಿಯಗೆ ಹಾಗು ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.