ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ
ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ
ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಾಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು....
ಕೆಳಗಿದ್ದ ಕೆಫೆಯಲ್ಲಿ ಒಂದು ಕಾಫಿಕುಡಿದು. ಸ್ವಲ್ಪ ಕಾಲ ಮಾತ್ರವಿದೆ ಅನ್ನುವಾಗ ನೆನಪಿಗೆ ಬಂದಿತು,
ನಂಜುಂಡಭಟ್ಟರ ಜೊತೆ :
ನಾನು ಬಂದ ದಿನ, ಸಾಗರದವರೆ ಆದ ಶ್ರೀ ನಂಜುಂಡ ಭಟ್ಟರಿಗೆ ಮೊಬೈಲ್ ಮಾಡಿದ್ದೆ ಆದರೆ ಅವರು ಉತ್ತರಿಸಿರಲಿಲ್ಲ.
ಸರಿ ಈಗ ಒಮ್ಮೆ ಪ್ರಯತ್ನ ಪಡೋಣ ಎನ್ನುತ್ತ ಕಾಲ್ ಮಾಡಿದೆ,.
"ಊಹೂ..." ಪ್ರಯೋಜನವಿಲ್ಲ.
'ಸರಿ' ಎಂದು ಕೊಂಡು, ಒಂದು ಮೆಸೇಜ್ ಮಾಡಿದೆ,
'ನಾವು ಸಾಗರದಿಂದ ಬೆಂಗಳೂರಿಗೆ ವಾಪಸ್ ಹೊರಡುತ್ತಿದ್ದೇವೆ ಈ ರಾತ್ರಿಗೆ' ಎಂದು.
ಮೊಬೈಲ್ ಕಾಲ್ ಗೆ ಉತ್ತರಿಸಿದಿದ್ದ ಅವರು, ಮೆಸೇಜ್ ಗೆ ತಕ್ಷಣ ಉತ್ತರಿಸಿ ಅವರೇ ಕಾಲ್ ಮಾಡಿದರು. ನಾನಿರುವ ಹೋಟೆಲ್ ವರದಶ್ರೀ ಎಂಬ ಹೆಸರು ಕೇಳಿದೊಡನೆ,
"ಸರಿ ಪಕ್ಕದಲ್ಲಿಯೆ ನಮ್ಮ ಮನೆಯಿದೆ, ಐದು ನಿಮಿಷದಲ್ಲಿ ಅಲ್ಲಿಗೆ ಬರುವೆ" ಎಂದರು.
ನಾನು ಕಾಯುತ್ತಿದ್ದೆ, ಐದು ನಿಮಿಷ ಕಾಯುವ ಮೊದಲೆ ಅಲ್ಲಿಗೆ ಬಂದರು. ಅವರೊಡನೆ ಅರ್ದಗಂಟೆ ಆತ್ಮೀಯ ಸಂವಾದ.
ಪುಷ್ಪರಾಜರ ಅಂತರ್ಗತ ಠಸ್ಸೆ ಇರುವ ವಿಶಿಷ್ಟ ಕವನಗಳು,
ಆತ್ರಾಡಿಯವರ ಪ್ರಸ್ತುತದ ಬಗೆಗಿನ ಕವನಗಳು,
ರವಿತಿರುಮಲೈರವರ ದ್ವನಿಯಲ್ಲಿನ ಹಾಡು,
ಹೀಗೆ ಹಲವರ ಕವನ ಕತೆಗಳ ಬಗ್ಗೆ ಖುಷಿಯಿಂದ ಮಾತನಾಡಿದೆವು.
ನಂತರ ಹೀಗೆ ಸಂಪದದ ಬಗ್ಗೆ ಮಾತು ಬಂದಿತು , ಬಹುಶಃ ಅಂತರ್ಜಾಲದಲ್ಲಿ ಸಕ್ರಿಯವಾಗಿರುವ ಹಳಬರಲ್ಲಿ ಬಹಳಷ್ಟು ಜನ ಸಂಪದದಲ್ಲಿ ತಮ್ಮ ಪ್ರಥಮ ಖಾತೆ ತೆಗೆದವರು ಅನ್ನಿಸಿತು
ಸನಿಹದಲ್ಲಿಯೆ ಇದ್ದ ಅವರ ಮನೆಗೆ ಹೋಗಿ ಬಂದೆ ಅವರ ಜೊತೆ.
ನಂಜುಂಡಭಟ್ಟರ ಕವನಗಳ ಕನ್ನಡಪದಗಳ ನರ್ತನ ಕಾಣುವಾಗ , ಅವರು ಕನ್ನಡ ಪ್ರಾಧ್ಯಾಪಕರೆ ಇರಬೇಕೆಂದು, ನನ್ನ ನಂಭಿಕೆಯನ್ನು ಗಟ್ಟಿ ಮಾಡಿಕೊಳ್ಳಲು ಕೇಳಿದೆ
"ನೀವು ಕಾಲೇಜಿನಲ್ಲಿ ತೆಗೆದುಕೊಳ್ಳುವ ವಿಷಯ ಯಾವುದು?"
"ಎಕನಾಮಿಕ್ಸ್"
"!!!! "
ಪ್ರಥಮ ಬಾರಿ ನಂಜುಂಡಭಟ್ಟರನ್ನು ನೋಡುತಿರುವೆನಾದರು, ಹಳೆಯ ಮಿತ್ರರೊಬ್ಬರನ್ನು ಬಹಳ ದಿನಗಳ ನಂತರ ಬೇಟಿಮಾಡಿದ ಅನುಭವ ಮನಸಿಗೆ ಆಯಿತು.
ಅವರಿಗೊಮ್ಮೆ ಗುಡ್ ಬೈ ಹೇಳಿ. ಬೆಂಗಳೂರಿಗೆ ಹೊರಡುವ ತಯಾರಿ ನಡೆಯಿತು.
ಬೆಂಗಳೂರಿನತ್ತ :
ಹೇಳಿದಂತೆ ಏಳುಗಂಟೆಗೆ ಸರಿಯಾಗಿ, ಕುಮಾರಸ್ವಾಮಿ ಡ್ರೈವರ್ ಸಿದ್ದ.
ನಮ್ಮನ್ನೆಲ್ಲ ಕರೆದುಕೊಂಡು, ಹೊಟೆಲ್ ಮೈಸೂರ್ ಕೆಫೆಯತ್ತ ನಡೆದರು. ರಾತ್ರಿ ಪ್ರಯಾಣವಾದ್ದರಿಂದ ಊಟಮಾಡದೆ, ಎಲ್ಲರೂ ಇಡ್ಲಿ, ದೋಸೆ ಯಂತಹ ತಿಂಡಿಗಳನ್ನೆ ತೆಗೆದುಕೊಂಡರು.
ಅದೇನೊ ಮೈಸೂರ್ ಕೆಫೆಯಲ್ಲಿ ನಮಗೆಲ್ಲ ತಿಂಡಿ ಒದಗಿಸಿದ ಅಲ್ಲಿಯವರು ವಿಶೇಷವಾಗಿ ಮಾತನಾಡಿಸಿದರು, ನಾನು ಸಹ ಅವರಿಗೆಲ್ಲ ಥ್ಯಾಂಕ್ಸ್ ಹೇಳಿ ಹೊರಟೆ.
ಅಲ್ಲಿಂದ ಸಾಗರ ಬಸ್ ನಿಲ್ದಾಣ ಹತ್ತು ನಿಮಿಷ ಅಷ್ಟೆ.
ಕೆಲವೇ ನಿಮಿಷದಲ್ಲಿ ನಾವು ಪಯಣಿಸಬೇಕಿದ್ದ ಬಸ್ 'ಜೋಗ್-ಬೆಂಗಳೂರು' ಬಂದಿತು. ನಾವು ಬಸ್ ಹತ್ತಿ ಕುಳಿತಂತೆ, ಕುಮಾರಸ್ವಾಮಿ ಕೆಳಗಿಳಿದು ಹೋಗಿ,
ಅಮೂಲ್ ಚಾಕಲೇಟ್ ಗಳನ್ನು ಕೊಂಡು ತಂದು ಎಲ್ಲರಿಗೂ ಒಂದು ಕೊಟ್ಟರು , ಅವರ ಆತ್ಮೀಯತೆಗೆ ಕೃತಜ್ಞತೆಗಳನ್ನು ಹೇಳುತ್ತ ಅವರಿಗೆ ವಿದಾಯ ಹೇಳಿದೆವು.
ಬಸ್ ಹೊರಟಂತೆ, ಮೂರುದಿನದಿಂದ ಓಡಿಯಾಡಿದ ಜಾಗಗಳ ನೆನಪಿನಲ್ಲಿ, ಹಿಂದೆ ಒರಗಿ ಕಣ್ಣು ಮುಚ್ಚಿದೆವು .......
ಮನದಲ್ಲಿ ನನಗೆ ಈ ಪ್ರವಾಸಕ್ಕೆ ಸಹಾಯಮಾಡಿದ ಜಯರಾಮ್ ರವರು,
ನಮಗೆ ಲಾಡ್ಜ್ ನಲ್ಲಿ ರೂಮು ರಿಸರ್ವ್ ಮಾಡಿ ಸಹಾಯಮಾಡಿದ ಜಯರಾಮ್ ರವರ ತಮ್ಮ ಅಶೋಕ್ ರವರಿಗೆ ಕೃತಜ್ಞತೆ ಅರ್ಪಿಸಿದೆ.
ಹಾಗೆ ನಮಗೆ ವಾಹನ ಸೌಕರ್ಯ ಒದಗಿಸಿದ ಪ್ರಮೋದ್ ಹಾಗು ಕುಮಾರಸ್ವಾಮಿಯವರಿಗು ವಂದನೆಗಳು.
ಬಸ್ ಬೆಂಗಳೂರಿನತ್ತ ಓಡುತ್ತಿತ್ತು...
ಮೂರುದಿನಗಳ ಸಾಗರ ಪ್ರವಾಸ ಮುಕ್ತಾಯವಾಗಿತ್ತು.
----------------------------------------------------------------
ನಿಮಗೆ ಯಾರಿಗಾದರು ಉಪಯೋಗಕ್ಕೆ ಬಂದೀತು:
ನಮ್ಮನ್ನು ಸಾಗರದ ಸುತ್ತ ಸುತ್ತಿಸಿದ ಡ್ರೈವರಗಳು, ಸಾಗರದವರು.
ಪ್ರಮೋದ್ : 9480322038
ಕುಮಾರಸ್ವಾಮಿ : 9481253465
ಸಾಗರದಲ್ಲಿ ನಾವು ಇಳಿದಿದ್ದ ಲಾಡ್ಜ್
ವರದಶ್ರೀ : 08183 228899/ 08183 228999
Comments
ಉ: ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ
ಪಾರ್ಥಾ ಸಾರ್, ಸೂಪರ್ ಸೀರೀಸ್! ಸಂಪೂರ್ಣ ಪ್ಯಾಕೇಜ್ ಟೂರು - ಊಟ ತಿಂಡಿ, ಸೈಟ್ ಸೀಯಿಂಗ್, ಪ್ರಯಾಣವೂ ಸೇರಿದಂತೆ. ಜಾಗಗಳು ಕೂಡಾ ಒಳ್ಳೆಯ ಆಯ್ಕೆ - ಸವಿಸ್ತಾರ ಸುಖಾಸೀನ ಪರಿಚಯಕ್ಕೆ ಧನ್ಯವಾದಗಳು :-)
In reply to ಉ: ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ by nageshamysore
ಉ: ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ
ವಂದನೆಗಳು ನಾಗೇಶ್ ಮೈಸೂರು,
ನಿಮಗೆ ಸಂತಸವಾಗಿದ್ದರೆ ನನಗೂ ಸಂತಸ!
ಉ: ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ
ಸಾಗರ ಪ್ರವಾಸ ಚೆನ್ನಾಗಿತ್ತು. ನಂಜುಂಡ ಭಟ್ಟರಿಗೆ ಕಾಲ್ ತಲುಪದೆ,ಮೆಸೆಜ್ ಮಾತ್ರ ಹೇಗೆ ತಲುಪಿತು ಅಂತ ಕೇಳಲಿಲ್ಲವಾ?
In reply to ಉ: ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ by ಗಣೇಶ
ಉ: ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ
ಕೇಳಿದೆ , ಮೊಬೈಲ್ ಟೋನ್ ಗೆ ಎಚ್ಚರಗೊಳ್ಳದ ಅವರು ಮೆಸೇಜ್ ಟೋನ್ ಗೆ ಎಚ್ಚರಗೊಂಡಿದ್ದರು!!
ಮಧ್ಯಾನದ ರೆಸ್ಟ್ ! ಸಣ್ಣ ನಿದ್ದೆಯ ಸುಖ ಅನುಭವಿಸುತ್ತಿದ್ದರು ! :) :)
ಪಾರ್ಥಸಾರಥಿ.