ಇಕ್ಕೇರಿಯ ಅಘೋರೇಶ್ವರ ದೇವಾಲಯದ ದೃಷ್ಯಗಳು

ಇಕ್ಕೇರಿಯ ಅಘೋರೇಶ್ವರ ದೇವಾಲಯದ ದೃಷ್ಯಗಳು

     ಪಾರ್ಥಸಾರಥಿಯವರ ಇಕ್ಕೇರಿ ಪ್ರವಾಸಕ್ಕೆ ಪೂರಕವಾಗಿ ಇಕ್ಕೇರಿಯ ಅಘೋರೇಶ್ವರ ದೇವಾಲಯದ ಕೆಲವು ಚಿತ್ರಗಳು ಇಲ್ಲಿವೆ. ದೇವಾಲಯದ ಹೊರನೋಟ, ದೇವಾಲಯದ ಒಳಗಿರುವ ದುರ್ಗಾಂಬಾ, ಕಾಲಭೈರವ, ಗೋಪಾಲಕೃಷ್ಣನ ಮೂರ್ತಿಗಳು. ಕೆಳದಿ ಅರಸರು ಉತ್ತರ ಭಾರತದಿಂದ ತಂದು ಪ್ರತಿಷ್ಠಾಪಿಸಿದ ಅಮೃತಶಿಲೆಯ ನಂದಿ, ಈಗ ಇರುವ ಲಿಂಗ, ದೇವಾಲಯದ ಮುಂಭಾಗದಲ್ಲಿ ಇರುವ ಬರಹ, ನಂದಿ ವಿಗ್ರಹ, ಮುಸ್ಲಿಮ್ ಆಕ್ರಮಣಕಾರರಿಂದ ಭಿನ್ನವಾದ ಮೂಲ ಅಘೋರೇಶ್ವರ ವಿಗ್ರಹದ ಪಳೆಯುಳಿಕೆ (ಶ್ರೀ ಗುಂಡಾಜೋಯಿಸರು ಇರುವ ಚಿತ್ರ), ಿತ್ಯಾದಿಗಳನ್ನು ಕಾಣಬಹುದು. ಚಿತ್ರಗಳನ್ನು ಹಲವು ವರ್ಷಗಳ ಹಿಂದೆ ನಾನೇ ತೆಗೆದಿದ್ದು.

-ಕ.ವೆಂ.ನಾಗರಾಜ್.

Comments

Submitted by kavinagaraj Wed, 02/05/2014 - 08:22

ಮುನ್ನೋಟದಲ್ಲಿ ಅಳವಡಿಸಿದ 16 ಚಿತ್ರಗಳು ಕಂಡು ಬರುತ್ತವೆ. ಆದರೆ ಸೇವ್ ಮಾಡಿದ ನಂತರದಲ್ಲಿ ಎರಡು ಚಿತ್ರಗಳು ಮಾತ್ರ ಕಾಣುತ್ತಿವೆ. ಸರಿಪಡಿಸಲು ಸಾಧ್ಯವಿದ್ದರೆ ಸಂಪದ ನಿರ್ವಾಹಕರು ಸರಿಪಡಿಸಲು ವಿನಂತಿ. ಸೂಕ್ತ ತಿಳುವಳಿಕೆಯನ್ನೂ ನೀಡಲು ವಿನಂತಿ.

Submitted by bhalle Wed, 02/05/2014 - 18:23

ಉತ್ತರ ಭಾರತದಲ್ಲಿನ ಅಘೋರಿಗಳ ಬಗ್ಗೆ ಕೇಳಿದ್ದೆ. ನಿಮ್ಮೀ ಚಿತ್ರಗಳಲ್ಲಿ ಅಘೋರೇಶ್ವರನ ದೇವಾಲಯ ನೋಡುತ್ತಿದ್ದೇನೆ. ಇವೆರಡು ವಿಷಯದ ಬಗ್ಗೆ ಇರುವ ಸಂಬಂಧ ಇತ್ಯಾದಿ ತಿಳಿಸಿಕೊಡುವಿರಾ?