ರಾಗಿ 'ಸಿರಿ' ತಯಾರಿಸುವ ವಿಧಾನ

ರಾಗಿ 'ಸಿರಿ' ತಯಾರಿಸುವ ವಿಧಾನ

ಮಕ್ಕಳಿಗೆ (ಮಗುವಿಗೆ) ಉಣಿಸುವ, ರಾಗಿ 'ಸಿರಿ' ‍ತಯಾರಿಸುವ ವಿಧಾನ ತಿಳಿದಿದ್ದರೆ, ಅದರ recipe ಹಂಚಿಕೊಳ್ಳಿ. 

‍ಧನ್ಯವಾದ,

‍ಸುಮ

Rating
No votes yet

Comments

Submitted by Holalkere Laxm… Sun, 02/09/2014 - 17:28

ನೀವು ಹೇಳುವ ರಾಗಿ ಸಿರಿ, ಬಹುಶಃ ’ವಡ್ಡರಾಗಿ ಹಿಟ್ಟು’ ಇರಬಹುದು, ಎನ್ನುವುದು ನನ್ನ ಅಭಿಮತ ! ಇದು ನಮ್ಮ ಅಜ್ಜಿಯವರು ಮಾಡುತ್ತಿದ್ದರು. ಹಳ್ಳಿಯಲ್ಲಿ ಜನರಿಗೆ ಗೊತ್ತು. ಮೊದಲು ಒಳ್ಳೆಯ ಹಳೆರಾಗಿಯನ್ನು ನೀರಿನಲ್ಲಿ ನೆನಸಿ ಬಟ್ಟೆಯಮೇಲೆ ಚೆನ್ನಾಗಿ ಹಿಂಡಿ ನೀರನ್ನು ತೆಗೆದು, ಆರಲು ಬಿಡಿ. ನಂತರ ಇದನ್ನು ಬಾಣಲೆಯ ಮೇಲೆ ಹಾಕಿ ಹುರಿದರೆ ಅರಳು ಬರುತ್ತದೆ. ಅದರಲ್ಲಿ ಒಳ್ಳೆಯ ಧೃಡವಾದ ಅರಳನ್ನು ಆರಿಸಿ ಅದನ್ನು ಬೀಸೇಕಲ್ಲಿನಲ್ಲಿ ಬೀಸಿ. ಸ್ವಲ್ಪದಪ್ಪದಾಗಿ ಒಡೆಯಬೇಕು ಅದನ್ನು ಒಂದು ತೆಳೆವಾದ ಬಟ್ಟೆಯನ್ನು ಪಾತ್ರೆಯಬಾಯಿಗೆ ಬಿಗಿದ ಪಾತ್ರೆಯಲ್ಲಿ ಬೀಸಿದ ಒಡೆದ ರಾಗಿ ಅರಳನ್ನು ಹಾಕಿ ಕೈಆಡಿಸಿದರೆ, ನುಣ್ಣನೆಯ ಟಾಲ್ಕಂ ಪೌಡರ್ ತರಹ ಹಿಟ್ಟು ಪಾತ್ರೆಯಲ್ಲಿ ಶೇಖರವಾಗುತ್ತದೆ. ಅದನ್ನು ಹಾಲಿಗೆ ಬೆರೆಸಿ ಸಾಕಷ್ಟು ಸಕ್ಕರೆ ಬೆರೆಸಿ ಮಕ್ಕಳಿಗೆ ತಿನ್ನಲು ಇಲ್ಲವೆ ಕುಡಿಯಲು ಕೊಡಿ. ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿದರೆ ಚೆನ್ನಾಗಿರುತ್ತದೆ.
-ವೆಂಕಟೇಶ್

Submitted by ಗಣೇಶ Sun, 02/09/2014 - 22:03

ಸುಮ ಅವರೆ, ಮೊದಲಿಗೆ ಶುಭಾಶಯಗಳು.
ಶೀರ್ಷಿಕೆ ನೋಡಿ ಯಾವುದೋ ಹೊಸರುಚಿ ನಮಗೆ ಹೇಳುತ್ತಿದ್ದೀರಿ ಅಂದುಕೊಂಡೆ.
ನಮ್ಮಲ್ಲಿ "ರಾಗಿ ಸರಿ" ಅನ್ನುತ್ತೇವೆ. ಮಗುವಿಗೆ "ರಾಗಿಸರಿ" ಕೊಡುತ್ತಿದ್ದರೆ ಈ ಸೆರಿಲಾಕ್ ಇತ್ಯಾದಿ ಅಗತ್ಯವೇ ಇಲ್ಲ. ಮಾಡುವ ವಿಧಾನ ಮೇಲೆ ತಿಳಿಸಿರುವರು. http://www.youtube.com/watch?v=PPAMSJ2QZkI