ಜಾಮಿತಿ ಬಲ್ಲವನೆ!

ಜಾಮಿತಿ ಬಲ್ಲವನೆ!

ಚಿತ್ರ

ಅಗಣಿತ ಲೋಕದ ಸೃಷ್ಠಿಯ ಒಡೆಯನು ಸೂತ್ರಗಳಿಟ್ಟಿಹನೆ!

ಚಿತ್ರ ವಿಚಿತ್ರವ ರೂಪಿಸುವಾತನು ಜಾಮಿತಿ ಬಲ್ಲವನೆ!

ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ ಕಲೆಯನು ಕೆತ್ತಿಹನೆ!

ಸೂಕ್ಷ್ಮಾನಂತಗಳೊಳ ಹೊರ ವಿಶ್ವದ ಕೆತ್ತನೆ ನಡೆಸಿಹನೆ!

 

ಶಿಲ್ಪಿಯು ತರ್ಕಕೆ ಸಿಗುವವನೆ!

ಸೃಷ್ಟಿಯ ಬುದ್ದಿಗೆ ನಿಲುಕುವನೆ!

ಸೃಷ್ಟಿಯ ಪ್ರಜ್ಞೆಯೆ ತಾನಾಗಿರುವನೆ!

Rating
No votes yet

Comments

Submitted by ಗಣೇಶ Mon, 02/10/2014 - 23:06

ಜಾಮಿತಿ ಬಲ್ಲವನೆ.. ಅದೇ ಆಶ್ಚರ್ಯ‌..ಚಿತ್ರವಿಚಿತ್ರ‌ ರೂಪಿಸುವಾತನು ಜಾಮಿತಿ ಬಲ್ಲವನೆ..ಕವನ‌ ಚೆನ್ನಾಗಿದೆ.

Submitted by partha1059 Mon, 02/17/2014 - 11:48

In reply to by partha1059

ವಿಧ್ಯಾಕುಮಾರ್ ರವರೆ , ಜಾಮಿತಿ ಪದದ ಅರ್ಥವನ್ನು ಹುಡುಕಿದೆ. ನಿಘಂಟಿನಲ್ಲಿ ಸಿಗುತ್ತಿಲ್ಲ. ನಾವು ಚಿಕ್ಕವಯಸಿನಲ್ಲಿ ರೇಖಾಗಣಿತ ಎಂದು ಓದಿದ ನೆನಪಿದೆ. ಅದಕ್ಕೆ ಸರಿಸಮನಾದ ಪದ ಜ್ಯಾಮಿತಿ ಎನ್ನುತ್ತದೆ ಜೀವಿಯವರ ನಿಘಂಟು. ಜಾಮಿತಿ ಪದದ ಅರ್ಥ ಮತ್ತೇನಾದರು ಇದೆಯಾ?
ಅಥವ ಜ್ಯಾಮಿತಿ ಪದದ ಅಪಭ್ರಂಶವ ? . ಈ ಜ್ಯಾಮಿತಿ ಅಥವ ಜಾಮಿತಿ ಅಂಗ್ಲದ ಜಾಮಿಟ್ರಿ ಯಿಂದ ನೇರ್‍ವಾಗಿ ಬಂದಂತೆ ತೋರುತ್ತದೆ ಅಲ್ಲವಾ? :‍)

Submitted by vidyakumargv Mon, 02/17/2014 - 19:35

In reply to by partha1059

ಧನ್ಯವಾದಗಳು ಪಾರ್ಥಸಾರತಿ ಅವ್ರೆ.. ನೀವು ಅಂದಂತೆ 'ಜ್ಯಾಮಿತಿ' ಸರಿಯಾದ ಪದ..
ನನ್ನ ಜಾಮಿತಿ ಕನ್ನಡ ರೂಪ (ತದ್ಭವ) ಎನ್ನಿ..
geometry
Sanskrit: gyaamiti
"measuring the earth" — gya, "earth" + miti, "parameter".

Submitted by vidyakumargv Mon, 02/17/2014 - 19:57

In reply to by partha1059

ಗೆಲಿಲಿಯೊನ ಮಾತು ನೆನಪಿಗೆ ಬಂತು..
"Mathematics is the the language in which God has written this universe, and its characters are triangles, circles, and other geometrical figures."
ಸೃಷ್ಟಿಯ ಬ್ಲೂ ಪ್ರಿಂಟ್ ಗಮನಿಸಿದಾಗ ಇದು ಸಮಂಜಸ ಅನ್ಸುತ್ತೆ.. ಅಲ್ವಾ?