ಅಕ್ಕಿ

ಅಕ್ಕಿ

ಬೋರಾ ಅಂಗಡಿಯ ಮುಂದೆ ನಿಂತು ಅಕ್ಕಿಗಾಗಿ ಗೋಗರೆಯುತ್ತಿದ್ದ 

"ಅಂಗ್ ಅನ್ನ್ ಬ್ಯಾಡ್ರಿ ಸಾಮಿ, ನಿಮಿಗ್ ಕೈ ಮುಗಿತಿನಿ ಸಾಮಿ, ಎಳ್ದೆ ರುಪಾಯಿ ಇರದು, ಒಂದು ಪಾವ್ ಆದ್ರ ಕೊಡಿ ಸಾಮಿ,"

ದ್ಯಾವಪ್ಪನಿಗೆ ಕೋಪ ನೆತ್ತಿಗೇರಿತು "ಹೋಗ್ಲ ಹೊರಿಕ್ಕೆ, ಎಲ್ಡ್ ರುಪಾಯಿಗೆ ಕೊಡಕ್ಕೆ ಇದೇನು ಪೆಪ್ಪರಮೆಂಟ್ ಏನ್ಲಾ? ಬಂದ್ ಬುಟ್ಟ"

ಬೋರಾ ಧೈನ್ಯನಾಗಿ ಮತ್ತೆ ಬೇಡಿದ "ಸಾಮಿ, ಮಕ್ಕಳು ಇಸ್ಕೂಲ್ ಹೋಗ್ಬೇಕರೆ ಹಸ್ಕೊಂಡ್ ಹೋಯ್ತವೆ ಸಾಮಿ ನಿಮಿಗ್ ಕಾಲಿಗ್ ಬೂಳ್ತಿನಿ, ಮಕ್ಕಳಿಗ್ ಆಗಷ್ಟ್ ಆದ್ರ ಕೊಡಿ ಸಾಮಿ,"

ಆಗಲ್ಲ ಕಣ್ಲಾ, ಎಂಟು ರುಪಾಯಿ ತಗಂಬಾ ಒಂದ್ ಕೆಜಿ ತಕ್ಕಂಡ್ ಓಗು, ಎಲ್ದ್ ರುಪಾಯಿಗೆ ಎಲ್ಡ್ ಕಾಳುನ್ನುವ ಕೊಡಕಿಲ್ಲ ,,

ಬೋರ ಹಾಗು ದ್ಯಾವಪ್ಪನ ಮಾತುಕತೆ ನಡೆಯುತ್ತಲೇ ಇತ್ತು,

ಇತ್ತ ಬದಿಯಲ್ಲಿ ನಿಂತ ಬೋರನ ಮಗಳು ಆಗ ತಾನೇ ಶಾಲೆಗೆ ಸೇರಿದ್ದಳು, 

ಅಂಗಡಿಯ ಮುಂದಿದ್ದ ಫಲಕವನ್ನು ಓದಲು ತಿಣುಕಾಡುತ್ತಿದ್ದಳು,,,,  ನಾ,,, ಯಾ,,,, ಬೆ,,,, ಲೆ,,,,, ಅಂ,,,,ಗ,,,,ಡಿ,,,,,

-ನವೀನ್ ಜೀ ಕೇ 

Comments

Submitted by partha1059 Mon, 02/17/2014 - 19:01

ಕತೆ ಮನ ಮಿಡಿಯುವಂತಿದೆ!
ಆದರೆ ಈಗೆಲ್ಲ ಎರಡು ರುಪಾಯಿ ಏಕೆ ಒಂದು ರುಪಾಯಿಗು ಒಂದು ಕೇಜಿ ಅಕ್ಕಿ ಕೊಡುತ್ತೇವೆ ಎಂದು ಸರ್ಕಾರದವರು ಹೇಳುತ್ತಾರಲ್ಲ !

Submitted by naveengkn Mon, 02/17/2014 - 20:31

In reply to by partha1059

ನೀವು ಹೇಳಿದ್ದು ನಿಜ ಪಾರ್ಥ ಸರ್, ಆದರೆ ಆ ಅಕ್ಕಿ ಬಡವರ ಕೈಗಂತೂ ಸೇರಲ್ಲ,,,, ಸರ್ಕಾರದ ಘೋಷಣೆಗಳು ಬರಿ ಮಾಧ್ಯಮಗಳಲ್ಲಿ ಬಂದು ಹೋಗತ್ತೆ ಅಷ್ಟೇ,,,,,
(ನೀರು ಹರಿದು ಸಾಗರ ಸೇರೋ ಹೊತ್ತಿಗೆ ಅದೆಷ್ಟು ಕವಲು ದಾರಿಗಳಲ್ಲಿ ವ್ಯಯ ಆಗಿ ಹೊಗೊತ್ತೊ)

Submitted by kavinagaraj Tue, 02/25/2014 - 10:48

:( ಪರಿಸ್ಥಿತಿ ಸುಧಾರಣೆಯಾಗಲು ಕಷ್ಟವಿದೆ.

Submitted by naveengkn Tue, 02/25/2014 - 11:26

In reply to by kavinagaraj

ಕವಿ ನಾಗರಾಜರಿಗೆ ಪ್ರಣಾಮ‌,,,, ಸಂಭವಾಮಿ ಯುಗೇ ಯುಗೇ ಎಂದವನು ಕಾಣೆಯಾಗಿದ್ದಾನೆ, ಕರೆ ಮಾಡಿ ಬರ‌ ಹೇಳಬೇಕಿದೆ.