ದ್ವಂದ್ವ (ಶ್ರೀ ನರಸಿಂಹ 80)

ದ್ವಂದ್ವ (ಶ್ರೀ ನರಸಿಂಹ 80)

ವಿಷಯಾಸಕ್ತಿಯಲಿ ಮುಳುಗಿ ಮನ ತೊಳಲಾಡುತಿಹುದು

ಕರ್ಮ, ಬಂಧಗಳೆನುವ ಬಲೆಯೊಳು ತಾನೆ ಸಿಲುಕಿಹುದು

ತ್ಯಜಿಸಬೇಕೆಲ್ಲವ  ಎಂದೊಮ್ಮೊಮ್ಮೆ   ಮನಸಿಗನಿಸಿದರು

ಸೋಲುವುದು ಮನ ಭೋಗ, ಲಾಲಸೆ ಮಾಯೆಯೆದುರು

 

ಇರಿಸಿಹನು ಎಲ್ಲವನು, ಎಲ್ಲರನು ಅವನಿಚ್ಚೆಯಂತೆ ಜಗದಿ

ನಂಬಿದರೆ ನೀ ಶ್ರೀಹರಿಯ ಕೈಬಿಡದೆ ಸಲಹುವನು ಭವದಿ

ತ್ಯಜಿಸಬೇಕೆಲ್ಲವ  ಎಂಬುದನು ತೊರೆ ನೀನು ಮನದಿಂದ

ಸಮಯವದು ಬರಲಾಗ ಬಿಡಿಸುವವನೆಲ್ಲ ಬಂಧಗಳಿಂದ

 

ಸಹಜ ದ್ವಂದ್ವಗಳಿಂದಲೊಮ್ಮೊಮ್ಮೆ ಜಿಜ್ಞಾಸೆ ಏಳುವುದು ಮನದಿ

ಸ್ಮರಿಸನವರತ ಶ್ರೀ ನರಸಿಂಹ ನಾಮವನು ಪಡೆವೆ ನೀ ನೆಮ್ಮದಿ

Rating
No votes yet

Comments

Submitted by ಗಣೇಶ Sun, 02/23/2014 - 23:22

ತ್ಯಜಿಸಬೇಕೆಲ್ಲವ ಎಂಬುದನು ತೊರೆ ನೀನು ಮನದಿಂದ
ಸಮಯವದು ಬರಲಾಗ ಬಿಡಿಸುವವನೆಲ್ಲ ಬಂಧಗಳಿಂದ..
ಈಗ‌ ದ್ವಂದ್ವವೇ ಇಲ್ಲ‌ ಸತೀಶರೆ.

Submitted by sathishnasa Mon, 02/24/2014 - 21:21

In reply to by ಗಣೇಶ

ನಿಜ ಗಣೇಶ್ ರವರೇ, ಏನು ಮಾಡಬೇಕೆಂದು ತಿಳಿಯದೆ ಇದ್ದಾಗ ಅವನಿಗೆ ಶರಣಾಗಿ ಮೌನವಾಗುವುದೇ ಸರಿಯಾದ ದಾರಿ.ಧನ್ಯವಾದಗಳೊಂದಿಗೆ.....ಸತೀಶ್

Submitted by kavinagaraj Wed, 02/26/2014 - 09:29

ಮಾಯೆಯ ಮಹಿಮೆ! ಅವನಿಚ್ಛೆಯನ್ನು ಮೀರಿ ನಡೆಯುವ 'ಇವನೂ' ಇರುತ್ತಾನೆ! 'ಮಾಡಿದ್ದುಣ್ಣೋ ಮಹರಾಯ' ಎಂಬಂತೆ ಅನುಭವಿಸುತ್ತಾನೆ!

Submitted by sathishnasa Wed, 02/26/2014 - 21:00

In reply to by kavinagaraj

>> 'ಮಾಡಿದ್ದುಣ್ಣೋ ಮಹರಾಯ' << ನಿಜ, ಆದರೆ ಮಾಡಿಸುವವನು ಅವನೇ ತಾನೆ ಹಾಗಾಗಿ ಅವನಿಚ್ಛೆಯನ್ನು ಮೀರುವುದು " ಅವನಿಚ್ಛೆಯೇ " ಅಲ್ಲವೇ ? ಧನ್ಯವಾದಗಳು ನಾಗರಾಜ್ ರವರೇ..............ಸತೀಶ್