ಬಣ್ಣ ಕಟ್ಟಿದ ನಾಟಕ
ವೇಷ ಯಾಕೆ, ಭಾಷೆ ಯಾಕೆ
ಯಾಕೆ ಮತ ಪಂಥ ?
ತನುವಿನೊಳಗಿನ ಮನವ ಹಿಡಿದು
ಅಲುಗಿ ಕೇಳಿದರಾಗದೇನು !
ಮೀನ ಯಾಕೆ, ಮೇಷ ಯಾಕೆ
ಯಾಕೆ ಗ್ರಹ ನಕ್ಷತ್ರ ?
ದಿನವು ಅರಿತು, ಮೋಹ ಮರೆತು
ಬೆರೆತು ಬದುಕಲಾಗದೇನು !
ಪಕ್ಷ ಯಾಕೆ, ಚಿಹ್ನೆ ಯಾಕೆ
ಯಾಕೆ ಬಿಳಿಯ ವಸ್ತ್ರ ?
ಮನುಜನಲ್ಲಿ ಮನುಜನಾಗಿ
ಸೇವೆ ಮಾಡಲಾಗದೇನು !
ನಗವು ಯಾಕೆ, ನಾಣ್ಯ ಯಾಕೆ
ಯಾಕೆ ಕುರುಡು ಕಾಂಚಾಣ ?
ದೇವ ಕೊಟ್ಟ ಪ್ರಕೃತಿಯನು
ದಿನವು ಸವಿಯಲಾಗದೇನು !
ಮೋಸ ಯಾಕೆ, ದೋಷ ಯಾಕೆ
ಯಾಕೆ ಬರಿ ಕುತಂತ್ರ ?
ನೇರ ನಡಿಗೆ, ವೀರ ತೊಡುಗೆ
ಬಳಸಿ ಮೆರೆಯಲಾಗದೇನು !
ಬದುಕಿನನಲ್ಲಿ, "ಬದುಕು" ಮಾತ್ರ ಕಳೆದೇಹೊಗಿದೆ,
ಹುಡುಕಿ ಕೊಟ್ಟವರಿಗೆ ಬಹುಮಾನ "ಬದುಕೇ" ಆಗಿದೆ.
--ನವೀನ್ ಜೀ ಕೇ
Comments
ಉ: ಬಣ್ಣ ಕಟ್ಟಿದ ನಾಟಕ
ಬದುಕಿನನಲ್ಲಿ, "ಬದುಕು" ಮಾತ್ರ ಕಳೆದೇಹೊಗಿದೆ,
ಹುಡುಕಿ ಕೊಟ್ಟವರಿಗೆ ಬಹುಮಾನ "ಬದುಕೇ" ಆಗಿದೆ. - ಒಳ್ಳೆಯ ಪಂಚ್!
In reply to ಉ: ಬಣ್ಣ ಕಟ್ಟಿದ ನಾಟಕ by kavinagaraj
ಉ: ಬಣ್ಣ ಕಟ್ಟಿದ ನಾಟಕ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಕವಿಗಳೇ
ನವೀನ್ ಜೀ ಕೇ