ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -2)
ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ
(ಭಾಗ -2)
-----------------------------------------------------------------------------
ಈ ಸರಣಿಯ
ಮೊದಲನೇ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ :
2 ವರುಷಗಳ ಹಿಂದೆ ಎಂ ಜಿ ರೋಡಲ್ಲಿ ಎಂಜಿ ರೋಡಲ್ಲಿ ಮೆಟ್ರೋ ಉದ್ಘಾಟನೆ ಆದಾಗ ಅಲ್ಲೂ ಬೇಜಾನ್ ಜನ ಸೇರಿದ್ದರು -ಹಲವು ಜನ ಪ್ರಯಾಣ ಮಾಡಿ ಖುಷಿ ಪಟ್ಟರು -ಆದರೆ ದಿನ ಕಳೆದಂತೆಲ್ಲಾ ಹೈ ಫೈ ಎಂಜಿ ರೋಡು ಮೆಟ್ರೋ ಹತ್ತುವವ್ರು ಅದರ ಬಗ್ಗೆ ಮಾತಾಡೋರು ಕಡಿಮೆ ಆದರು .
ಅದಕ್ಕೆ ಕಾರಣ ಎಂಜಿ ರೋಡು ಸುತ್ತಮುತ್ತಲಿನ ಜನ ಬಿಟ್ಟು ಬೇರೆ ಪ್ರದೇಶಗಳ ಜನಕ್ಕೆ ಆ ಎಂಜಿ ರೋಡು ಮೆಟ್ರೋ ಆಪ್ತ ಅನ್ನಿಸಲಿಲ್ಲ ಮತ್ತು ಆ ಕಡೆ ಹೋಗುವ ಬರುವ ಜನ ಕಡಿಮೆ ಅಲ್ಲದೆ ಮೆಟ್ರೋ ಸಾಗುವ ದೂರ ಸಹ ...
ಆದರೆ ನಗರದ ಮುಖ್ಯ ಭಾಗ ಮೆಜೆಸ್ಟಿಕ್ ಮತ್ತು ಮಲ್ಲೇಶ್ವರಂ -ಮಂತ್ರಿ ಮಾಲು -ರಾಜಾಜಿನಗರ -ಶ್ರೀರಾಂಪುರ -ಪೀಣ್ಯ ಯಶವಂತಪುರ ಹೀಗೆ ಎಲ್ಲೆಡೆಯೂ ಅಪಾರ ಜನ ದಿನ ನಿತ್ಯ ಅಡ್ಡಾಡುವರು -ಹೀಗಾಗಿ ಸಂಪಿಗೆ ರಸ್ತೆ ಹಸಿರು ಮೆಟ್ರೋ ಉದ್ಘಾಟನಾ ಆರಂಬದ ದಿನಗಳಲ್ಲಿ ತುಂಬಿ ತುಳುಕಿತ್ತು -ಹಾಗೆಯೇ ಎಂಜಿ ರೋಡು ಮೆಟ್ರೋ ತರ್ಹ ಜನಸಂಖ್ಯೆ ಕಡಿಮೆಯೂ ಆಯ್ತು - ಆದರೂ ಈಗಲೂ ದಿನ ನಿತ್ಯ ಸುಮಾರು 15 ಸಾವಿರದಿಂದ 20 ಸಾವಿರ ಜನ ಪ್ರಯಾಣಿಸುತ್ತಿರುವರು ..
ಇಲ್ಲಿ ಪ್ರಯಾಣಿಸಿದ ಜನಸಂಖ್ಯೆ :
ಉದ್ಘಾಟನಾ ನಂತರದ ಪ್ರಥಮ ದಿನ- 50 ಸಾವಿರ -
ಎರಡು ಮೂರನೇ ದಿನ 40-50ಸಾವಿರ ಜನ.
ಈ ಮಧ್ಯೆ ಮೆಟ್ರೋ ಕೆಲ್ಸ ನಡೆದ ಎಲ್ಲ ಸ್ಥಳಗಳಲ್ಲಿ ಒಂದಲ್ಲ ಒಂದು ಅವಘಡ ಆಗಿ -ಅದೇ ಸಮಯದಲ್ಲಿ ಡೆಲ್ಲಿಯಲ್ಲಿ ದೊಡ್ಡ ದೊಡ್ಡ ಕಾಂಕ್ರೀಟು ದಿಮ್ಮಿಗಳು ಮೇಲಿಂದ ಬಿದ್ದು ಅದು ನೋಡಿ ಕೇಳಿದ ಬೆಂಗಳೂರಿಗರು ದಿಗಿಲು ಬಿದ್ದರು -ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ದೊಡ್ಡ ಕ್ರೇನು ಬಕ್ಕ ಬೋರಲು ಬಿತ್ತು , ಕ್ರೇನ್ ಒಂದು ಒಬ್ಬ ಕೆಲ್ಸಗಾರನ ಜೀವ ತೆಗೆಯಿತು .:((
ಮೆಟ್ರೋ ಕಾಮಗಾರಿ ನಡೆವ ಜಾಗಗಳತ್ತ -ಎತ್ತರಕ್ಕೆ ಕಟ್ಟಿದ ಅದರ ಪಿಲ್ಳರುಗಳ ಕೆಳಗೆ ಮಧ್ಯೆ ಗಾಡಿ ಓಡಿಸುವಾಗ ನಡೆವಾಗ ಜೀವ ಕೈಗೆ ಬಾಯಿಗೆ ಬಂದಂತೆ ಆಗುತ್ತಿದ್ದುದು ಸುಳ್ಳಲ್ಲ -
ಹಾಗ್ಯೆ ನಡೆಯುತ್ತಿರುವ ಕಾಮಗಾರಿಯ ದೈನಂದಿನ ಚಟುವಟಿಕೆಗೆ ನಾವೂ ದಿನ ನಿತ್ಯ ಒಂದು ಕೆಟ್ಟ ಕುತೂಹಲದ ನೋಟ ಬೀರುತ್ತಾ ಅದರ ಧೂಳು ಕುಡಿದು -ಮುಂದೊಮ್ಮೆ ಅದರಲ್ಲಿ ಹಾಯಾಗಿ ಪ್ರಯಾಣಿಸುವ ಕನಸು ಕಾಣುತ್ತ ಈ ಧೂಳ್ ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುತ್ತಿದ್ದೆವು - ಆಗಾಗ ಪೇಪರಲ್ಲಿ ಟೀವಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ -ಅದರ ಇಸ್ಟಿಸ್ಟು ಪ್ರಗತಿ -ಆ ತಿಂಗಳಲ್ಲಿ ಓಪನ್ ಎಂದೆಲ್ಲ ಓದಿ ವರ್ಷಾಂತ್ಯದಲ್ಲಿ ಅದರಲ್ಲಿ ಪ್ರಯಾಣಿಸುವ ಕನಸು ಹೊತ್ತೆವು ..
ಕೊನೆಗೂ ಮಾರ್ಚ್ಗೆ ಅಧಿಕೃತವಾಗಿ ಸಂಪಿಗೆ ರಸ್ತೆಯ ಹಸಿರು ಮೆಟ್ರೋ ಸಾರ್ವಜನಿಕ ಉಪಯೋಗಕ್ಕೆ ಲಭ್ಯ ಆಯ್ತು ...
ಅದರ ಉದ್ಘಾಟನೆ ದಿನ -ನಂತರದ 2-3 ದಿನಗಳಲ್ಲಿ ಎಲ್ಲ ಸ್ಟೇಷನ್ಗಳಲ್ಲಿ ಉಕ್ಕಿ ಹರಿವ ಸಂತೋಷ ಸಡಗರ ಆನಂದ ಹರ್ಷೋದ್ಘಾರ ನೂಕಾಟ ತಳ್ಳಾಟ ಸಂಭ್ರಮ ಎಲ್ಲವುಗಳ ಕಲಸುಮೆಲಸೋಗರ ...!!
ಎಲ್ಲೆಲ್ಲೂ ಜನವೋ ಜನ - ಕೊನೆಗೂ ನಮ್ಮಲ್ಲೂ ಮೆಟ್ರೋ ಬಂತು -ನಾವೂ ಅದರಲ್ಲಿ ಹಾಯಾಗಿ ತಣ್ಣಗೆ ( ಈ ಬಿರು ಬಿಸಿಲಲ್ಲಿ ಅದು ಉದ್ಘಾಟನೆ ಆಗಿದ್ದು ನಂ ಸೌಭಾಗ್ಯ) ಕುಳಿತು ನಿಂತು ಟ್ರಾಫಿಕ್ ಕಿರಿಕಿರಿ ಇಲ್ಲದೆ ಪ್ರಯಾಣಿಸುವ ಹಾಗಾಯ್ತು ...
ಇನ್ನೂ ಇದೆ ....!!
ಎಂ ಜಿ ರೋಡು ಮೆಟ್ರೋ ಮತ್ತು ಮಲ್ಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ ಮೊದಲ ದಿನದ -ನಂತರದ ದಿನಗಳ ಮೆಟ್ರೋ ಪ್ರಯಾಣ ಹೇಗಿತ್ತು?
ಮೆಟ್ರೋದಲ್ಲಿ ವಿಶೇಷತೆ ಏನೇನಿದೆ ?
ಏನಿಲ್ಲ ?
>>>>ಮೂರನೇ ಭಾಗದಲ್ಲಿ ನಿರೀಕ್ಷಿಸಿ ..!!
ಚಿತ್ರಮೂಲಗಳು :
ಚಿತ್ರ ಮಾಹಿತಿ ಸೌಜನ್ಯ : ವಿಜಯ ಕರ್ನಾಟಕ ಪತ್ರಿಕೆ
Comments
ಉ: ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು...
>>>ಮೆಟ್ರೋದಲ್ಲಿ ವಿಶೇಷತೆ ಏನೇನಿದೆ ?
ಏನಿಲ್ಲ ?
>>>>ಮೂರನೇ ಭಾಗದಲ್ಲಿ ನಿರೀಕ್ಷಿಸಿ ..!!
-ಮೆಟ್ರೋದ ನಿರೀಕ್ಷೆಯಲ್ಲಿ ವರ್ಷಗಳು ಕಳೆದವು...ಹಾಗೇ ಸಪ್ತಗಿರಿವಾಸಿಯವರ ಮೆಟ್ರೋ ೩ನೇ ಹಂತ ಯಾವಾಗ ಪ್ರಾರಂಭವಾಗುವುದೋ..? :)
In reply to ಉ: ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು... by ಗಣೇಶ
ಉ: ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು...
ಇನ್ನೊಂದು ವಾರ್ದಲ್ಲಿ ಮೂರನೇ ಬರಹ ...
ಶುಭವಾಗಲಿ
\|/